ಕೇವಲ 9 ಆಟಗಾರರಿದ್ದರು ಆಟ ಮುಂದುವರೆಸಬಹುದು! ಕ್ರಿಕೆಟ್​ನಲ್ಲಿ ಮಹತ್ತರ ಬದಲಾವಣೆ ತಂದ ಐಸಿಸಿ; ಆದರೆ?

Edited By:

Updated on: Feb 24, 2022 | 3:07 PM

ICC Womens World Cup 2022: ICC ನಿಯಮಗಳ ಪ್ರಕಾರ, ಒಂದು ತಂಡದಲ್ಲಿ ಕೊರೊನಾ ಪತ್ತೆಯಾದರೆ, ಆ ತಂಡ ಕನಿಷ್ಠ 9 ಆಟಗಾರರೊಂದಿಗೆ ಆಡಲು ಅನುಮತಿ ನೀಡಲಾಗಿದೆ.

1 / 5
ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್​ನಲ್ಲಿ ಹಲವು ನಿಯಮಗಳು ಬದಲಾಗಿವೆ. ಆಟಗಾರರನ್ನು ಬಯೋ ಬಬಲ್‌ಗಳಲ್ಲಿ ಇರಿಸಲಾಗುತ್ತಿದೆ. ಚೆಂಡು ಬೌಂಡರಿ ಗೆರೆಯಿಂದ ಹೊರಗೆ ಹೋದಾಗ ಅದನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಒಬ್ಬ ಆಟಗಾರನಿಗೆ ಕೊರೊನಾ ತಗುಲಿದರೆ, ನಂತರ ಪ್ರತಿಯೊಬ್ಬ ಆಟಗಾರನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ರೋಗಲಕ್ಷಣಗಳನ್ನು ಹೊಂದಿರುವ ಆಟಗಾರರನ್ನು ಕ್ವಾರಂಟೈನ್​ನಲ್ಲಿ ಇಡಲಾಗುತ್ತಿದೆ. ಇದೀಗ ICC ಮಹಿಳಾ ವಿಶ್ವಕಪ್ 2022 ಕ್ಕೆ ಮತ್ತೊಂದು ದೊಡ್ಡ ನಿಯಮವನ್ನು ಪ್ರಕಟಿಸಿದೆ. ICC ನಿಯಮಗಳ ಪ್ರಕಾರ, ಒಂದು ತಂಡದಲ್ಲಿ ಕೊರೊನಾ ಪತ್ತೆಯಾದರೆ, ಆ ತಂಡ ಕನಿಷ್ಠ 9 ಆಟಗಾರರೊಂದಿಗೆ ಆಡಲು ಅನುಮತಿ ನೀಡಲಾಗಿದೆ.

2 / 5

ರಣಜಿ ಟ್ರೋಫಿಗೆ ಇದೇ ನಿಯಮವನ್ನು ಮಾಡಿದ ಬಿಸಿಸಿಐನಿಂದ ಪ್ರೇರಿತವಾದ ICC ಈ ನಿಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತ ಪಡಿಸಿದೆ . ಇತ್ತೀಚೆಗೆ ಅಂಡರ್-19 ವಿಶ್ವಕಪ್ ಸಮಯದಲ್ಲಿ, ಟೀಮ್ ಇಂಡಿಯಾ ಸೇರಿದಂತೆ ಹಲವು ತಂಡಗಳಲ್ಲಿ ಕೊರೊನಾ ಪ್ರಕರಣಗಳು ವರದಿಯಾಗಿದ್ದವು. ತಂಡದಲ್ಲಿ ಕೊರೊನಾ ಹರಡಿದ ನಂತರ, ಆಡುವ XI ಅನ್ನು ರಚಿಸುವಲ್ಲಿ ಭಾರತ ತೊಂದರೆ ಅನುಭವಿಸಿತು. ಸಹಾಯಕ ಸಿಬ್ಬಂದಿ ಮೈದಾನದಲ್ಲೇ ಫೀಲ್ಡಿಂಗ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಪರಿಸ್ಥಿತಿಯನ್ನು ನೋಡಿದ ಐಸಿಸಿ ಈಗ 11 ಆಟಗಾರರ ಬದಲಿಗೆ 9 ಆಟಗಾರರೊಂದಿಗೆ ಆಟವನ್ನು ಮುಂದುವರಿಸಲು ನಿಯಮ ಮಾಡಿದೆ.

3 / 5

ICC ಮಹಿಳಾ ವಿಶ್ವಕಪ್ 2022 ಮಾರ್ಚ್ 4 ರಿಂದ ನ್ಯೂಜಿಲೆಂಡ್‌ನಲ್ಲಿ ಪ್ರಾರಂಭವಾಗಲಿದೆ. ಮೊದಲ ಪಂದ್ಯ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಬೇ ಓವಲ್‌ನಲ್ಲಿ ನಡೆಯಲಿದೆ. ಭಾರತ ತಂಡ ಮಾರ್ಚ್ 6 ರಂದು ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

4 / 5

ಭಾರತೀಯ ತಂಡವು ಮಾರ್ಚ್ 10 ರಂದು ನ್ಯೂಜಿಲೆಂಡ್ ವಿರುದ್ಧ, ಮಾರ್ಚ್ 12 ರಂದು ವೆಸ್ಟ್ ಇಂಡೀಸ್ ಮತ್ತು ಮಾರ್ಚ್ 16 ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ. ಮಾರ್ಚ್ 19 ರಂದು ಆಸ್ಟ್ರೇಲಿಯಾ, ಮಾರ್ಚ್ 22 ರಂದು ಬಾಂಗ್ಲಾದೇಶ ಮತ್ತು ಮಾರ್ಚ್ 27 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಬೇಕಾಗಿದೆ.

5 / 5

ಭಾರತದ ವಿಶ್ವಕಪ್ ತಂಡ- ಮಿಥಾಲಿ ರಾಜ್, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ, ಪೂಜಾ ವಸ್ತ್ರಾಕರ್, ರಾಜಾದ್ ಪೂನಂ ಯಾದವ್.

TV9 Web

TV9 Kannada

Read More
Loading...
Unable to load recommendations.
Follow Us