- Kannada News Photo gallery Cricket photos Kannada News | If I had bowled, they would’ve been all out 40 Runs: Virat Kohli
Virat Kohli: ನಾನು ಬೌಲಿಂಗ್ ಮಾಡಿದ್ರೆ, ಕೇವಲ 40 ರನ್ಗೆ ಆಲೌಟ್ ಆಗ್ತಿದ್ರು: ವಿರಾಟ್ ಕೊಹ್ಲಿ
IPL 2023 Kannada: 172 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು ಆರ್ಸಿಬಿ ಬೌಲರ್ಗಳ ಕರಾರುವಾಕ್ ದಾಳಿಗೆ ತತ್ತರಿಸಿದ್ದರು.
Updated on: May 15, 2023 | 11:24 PM

IPL 2023: ಐಪಿಎಲ್ನ 60ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಹುಮ್ಮಸ್ಸಿನಲ್ಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತ್ತು.

172 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು ಆರ್ಸಿಬಿ ಬೌಲರ್ಗಳ ಕರಾರುವಾಕ್ ದಾಳಿಗೆ ತತ್ತರಿಸಿದ್ದರು. ಅಲ್ಲದೆ ಆರ್ಆರ್ ಪಡೆಯು ಕೇವಲ 59 ರನ್ಗಳಿಗೆ ಆಲೌಟ್ ಆಗಿ 112 ರನ್ಗಳಿಂದ ಹೀನಾಯವಾಗಿ ಸೋಲನುಭವಿಸಿತು.

ಈ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ವಿರಾಟ್ ಕೊಹ್ಲಿ ಹೇಳಿದ ವ್ಯಂಗ್ಯಭರಿತ ಮಾತು ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾನೇದ್ರು ಬೌಲಿಂಗ್ ಮಾಡಿದಿದ್ರೆ, ಅವರು (ರಾಜಸ್ಥಾನ್ ರಾಯಲ್ಸ್) ಕೇವಲ 40 ರನ್ಗೆ ಆಲೌಟ್ ಆಗುತ್ತಿದ್ದರು ಎಂದೇಳಿ ಕೊಹ್ಲಿ ಹಾಸ್ಯ ಚಟಾಕಿ ಹಾರಿಸಿರುವುದನ್ನು ಕಾಣಬಹುದು.

ಅಂದಹಾಗೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 13 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಒಟ್ಟು 152 ಎಸೆತಗಳನ್ನು ಎಸೆದಿರುವ ಕೊಹ್ಲಿ ನೀಡಿರುವುದು ಕೇವಲ 204 ರನ್ಗಳು ಮಾತ್ರ. ಅಲ್ಲದೆ 4 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ.

ಆದರೆ 2012 ರ ಬಳಿಕ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುವ ದುಸ್ಸಾಹಸದಿಂದ ತುಸು ದೂರವೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಒಂದೇ ಓವರ್ನಲ್ಲಿ 31 ರನ್ ನೀಡಿರುವುದು.

ಹೌದು, 2012 ರಲ್ಲಿ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 19ನೇ ಓವರ್ ಎಸೆದಿದ್ದರು. ಈ ವೇಳೆ ಸಿಎಸ್ಕೆ ಆಟಗಾರ ಅಲ್ಬಿ ಮೋರ್ಕೆಲ್ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್ನೊಂದಿಗೆ ಒಟ್ಟು 31 ರನ್ ಚಚ್ಚಿದ್ದರು. ಇದಾದ ಬಳಿಕ ಕೇವಲ 2 ಸೀಸನ್ಗಳಲ್ಲಿ (2015, 2016) ಮಾತ್ರ ಕೊಹ್ಲಿ ಬೌಲಿಂಗ್ ಮಾಡಿದ್ದರು.
