- Kannada News Photo gallery Cricket photos IND vs AUS 3rd ODI Suryakumar Bags 3rd Consecutive Golden Duck Joins Sachin in Bizarre Record List
ಸತತ 3 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ಭಾರತದ 7ನೇ ಬ್ಯಾಟರ್ ಸೂರ್ಯ; ಉಳಿದ 6 ಆಟಗಾರರು ಯಾರು ಗೊತ್ತಾ?
ಸೂರ್ಯನಿಗೂ ಮೊದಲು ಟೀಂ ಇಂಡಿಯಾದ ಆರು ಆಟಗಾರರು ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ದಾಖಲೆ ಹೊಂದಿದ್ದಾರೆ. ಅವರ ವಿವರ ಇಲ್ಲಿದೆ.
Updated on:Mar 23, 2023 | 12:18 PM

ಟಿ20 ಕ್ರಿಕೆಟ್ನಲ್ಲಿ ವಿಶ್ವದ ನಂ.1 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ಗೆ ಏಕದಿನ ಕ್ರಿಕೆಟ್ನಲ್ಲಿ ಮಿಂಚಲು ಸಾಧ್ಯವಾಗುತ್ತಿಲ್ಲ. ಆಸೀಸ್ ವಿರುದ್ಧ ಆಡಿದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎಸೆತದಲ್ಲೇ ಔಟಾಗುವುದರೊಂದಿಗೆ ಸೂರ್ಯ ಸತತ ಮೂರು ಬಾರಿಗೆ ಶೂನ್ಯಕ್ಕೆ ಔಟಾದ ಮುಜುಗರದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ ಮೂರು ಬಾರಿ ಸೊನ್ನೆ ಸುತ್ತಿದ್ದ ಮೊದಲ ಭಾರತೀಯ ಬ್ಯಾಟರ್ ಎಂಬ ಕುಖ್ಯಾತಿಗೂ ಭಾಜನರಾಗಿದ್ದಾರೆ. ಆದರೆ ಹ್ಯಾಟ್ರಿಕ್ ಡಕ್ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಸೂರ್ಯ ಇಲ್ಲ. ಸೂರ್ಯನಿಗೂ ಮೊದಲು ಟೀಂ ಇಂಡಿಯಾದ ಆರು ಆಟಗಾರರು ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ದಾಖಲೆ ಹೊಂದಿದ್ದಾರೆ. ಅವರ ವಿವರ ಇಲ್ಲಿದೆ.

ಸಚಿನ್ ತೆಂಡೂಲ್ಕರ್; ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 1994ರಲ್ಲಿ ಸತತ ಮೂರು ಪಂದ್ಯಗಳಲ್ಲಿ (ಶ್ರೀಲಂಕಾ ವಿರುದ್ಧ ಒಂದು ಡಕ್ ಮತ್ತು ಮುಂದಿನ 2 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶೂನ್ಯ ಸಂಪಾಧನೆ.) ಶೂನ್ಯಕ್ಕೆ ಔಟಾಗಿದ್ದರು. ಈ ಮೂಲಕ ಹ್ಯಾಟ್ರಿಕ್ ಡಕ್ ಭಾರಿಸಿದ ಭಾರತದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.

ಅನಿಲ್ ಕುಂಬ್ಳೆ; ಆ ಬಳಿಕ 1996 ರಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು.

ಜಹೀರ್ ಖಾನ್; 2003-04ರಲ್ಲಿ ವೇಗಿ ಜಹೀರ್ ಖಾನ್ ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು.

ಇಶಾಂತ್ ಶರ್ಮಾ; 2010-11ರಲ್ಲಿ ಮತ್ತೊಬ್ಬ ವೇಗಿ ಇಶಾಂತ್ ಶರ್ಮಾ ಹ್ಯಾಟ್ರಿಕ್ ಡಕ್ಗೆ ಔಟಾಗಿದ್ದರು.

ಜಸ್ಪ್ರೀತ್ ಬುಮ್ರಾ; ಜಸ್ಪ್ರೀತ್ ಬುಮ್ರಾ 2017-19ರ ನಡುವೆ ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.

ವಾಷಿಂಗ್ಟನ್ ಸುಂದರ್; ಟಿ20ಯಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 2020 ರಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಸುಂದರ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಈ ಶೂನ್ಯ ಸಾಧನೆ ಮಾಡಿದ್ದರು.

ಸೂರ್ಯಕುಮಾರ್ ಯಾದವ್; ಈಗ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ಸತತ ಮೂರು ಪಂದ್ಯಗಳಲ್ಲಿ ಶೂನ್ಯ ಸಾಧನೆ ಮಾಡಿದ್ದಾರೆ.
Published On - 12:17 pm, Thu, 23 March 23









