IND vs AUS: ಬರೋಬ್ಬರಿ 10 ವರ್ಷಗಳ ಬಳಿಕ ಭಾರತ ಏಕದಿನ ತಂಡಕ್ಕೆ ಎಂಟ್ರಿಕೊಟ್ಟ ರಣಜಿ ಹೀರೋ..!

Updated on: Feb 20, 2023 | 11:56 AM

IND vs AUS: ಟೀಂ ಇಂಡಿಯಾ ಆಯ್ಕೆ ಮಾಡಿರುವ ತಂಡದಲ್ಲಿರುವ ಏಕೈಕ ಎಡಗೈ ವೇಗದ ಬೌಲರ್ ಆಗಿರುವುದರಿಂದ ಉನದ್ಕಟ್ ಆಗಮನ ತಂಡದಲ್ಲಿ ಬದಲಾವಣೆ ತರಲಿದೆ.

1 / 5
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಆಯ್ಕೆ ಸಮಿತಿಯು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿದೆ. ಈ ಸರಣಿಗೆ ಆಯ್ಕೆಯಾಗಿರುವ ಒಂದು ಆಶ್ಚರ್ಯಕರ ಹೆಸರೆಂದರೆ ಅದು ಜಯದೇವ್ ಉನದ್ಕಟ್.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಆಯ್ಕೆ ಸಮಿತಿಯು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿದೆ. ಈ ಸರಣಿಗೆ ಆಯ್ಕೆಯಾಗಿರುವ ಒಂದು ಆಶ್ಚರ್ಯಕರ ಹೆಸರೆಂದರೆ ಅದು ಜಯದೇವ್ ಉನದ್ಕಟ್.

2 / 5

ಟೀಂ ಇಂಡಿಯಾ ವೇಗಿ ಉನದ್ಕಟ್ ಬರೋಬ್ಬರಿ 10 ವರ್ಷಗಳ ನಂತರ ಭಾರತ ಏಕದಿನ ತಂಡಕ್ಕೆ ಮರಳಿದ್ದಾರೆ. ತಮ್ಮ ಕೊನೆಯ ಏಕದಿನ ಪಂದ್ಯವನ್ನು 21 ನವೆಂಬರ್ 2013 ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊಚ್ಚಿಯಲ್ಲಿ ಆಡಿದ್ದ ಉನದ್ಕಟ್, ಆ ಬಳಿಕ ತಂಡದಿಂದ ಹೊರಗಿದ್ದರು.

3 / 5

ಈ ನಡುವೆ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನವನ್ನು ತೋರಿಸಿದ್ದರಿಂದ ಉನದ್ಕಟ್​ರನ್ನು ಮತ್ತೆ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅಲ್ಲದೆ ಉನದ್ಕಟ್ ತಮ್ಮ ನಾಯಕತ್ವದಲ್ಲಿ ಸೌರಾಷ್ಟ್ರ ತಂಡವವನ್ನು ಎರಡನೇ ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್ ಮಾಡಿದರು. ಇದು ಕೂಡ ಅವರ ಆಯ್ಕೆಗೆ ನೆರವಾಗಿದೆ.

4 / 5

ಉನದ್ಕಟ್ ಈ ವರ್ಷ ಆಡಿದ ರಣಜಿ ಫೈನಲ್‌ನಲ್ಲಿ ಒಟ್ಟು ಒಂಬತ್ತು ವಿಕೆಟ್ ಪಡೆದರು. ಸೀಮಿತ ಓವರ್‌ಗಳಿಗೆ ಸಂಬಂಧಿಸಿದಂತೆ, ಈ ಎಡಗೈ ಬೌಲರ್ ಈ ವರ್ಷ 50 ಓವರ್‌ಗಳ ಪಂದ್ಯಾವಳಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ 10 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಅವರ ನಾಯಕತ್ವದಲ್ಲಿ ಸೌರಾಷ್ಟ್ರ ತಂಡ ಈ ವರ್ಷ ವಿಜಯ್ ಹಜಾರೆ ಟ್ರೋಫಿ ಪ್ರಶಸ್ತಿಯನ್ನೂ ಗೆದ್ದುಕೊಂಡಿತು.

5 / 5

ಟೀಂ ಇಂಡಿಯಾ ಆಯ್ಕೆ ಮಾಡಿರುವ ತಂಡದಲ್ಲಿರುವ ಏಕೈಕ ಎಡಗೈ ವೇಗದ ಬೌಲರ್ ಆಗಿರುವುದರಿಂದ ಉನದ್ಕಟ್ ಆಗಮನ ತಂಡದಲ್ಲಿ ಬದಲಾವಣೆ ತರಲಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ಲೇಯಿಂಗ್-11ರಲ್ಲಿ ಅವಕಾಶ ಸಿಕ್ಕರೆ ಈ ತಂಡ ಸಂಯೋಜನೆಯಲ್ಲಿ ವೈವಿಧ್ಯತೆ ತರಲಿದೆ. ಉನದ್ಕಟ್ ಭಾರತದ ಪರ ಇದುವರೆಗೆ ಏಳು ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಎಂಟು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Published On - 11:56 am, Mon, 20 February 23

Loading...
Unable to load recommendations.
Follow Us