IND vs ENG: ರಾಜ್‌ಕೋಟ್​ನಲ್ಲಿ ಅಜೇಯ ಶತಕ ಸಿಡಿಸಿದ ರಾಕ್​ಸ್ಟಾರ್ ರವೀಂದ್ರ ಜಡೇಜಾ..!

Ravindra Jadeja: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಂತರ ಇದೀಗ ರವೀಂದ್ರ ಜಡೇಜಾ ಕೂಡ ಮೂರನೇ ಟೆಸ್ಟ್‌ನ ಮೊದಲ ದಿನದಲ್ಲಿ ಅಜೇಯ ಶತಕ ಸಿಡಿಸಿದ್ದಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಬ್ಯಾಟಿಂಗ್‌ಗೆ ಬಂದ ರವೀಂದ್ರ ಜಡೇಜಾ ಮೊದಲು ನಾಯಕ ರೋಹಿತ್ ಶರ್ಮಾ ಜೊತೆಗೆ ಭಾರತದ ಇನ್ನಿಂಗ್ಸ್‌ ನಿಭಾಯಿಸಿದರು.

ಪೃಥ್ವಿಶಂಕರ
|

Updated on:Feb 15, 2024 | 5:40 PM

ರಾಜ್‌ಕೋಟ್‌ ಟೆಸ್ಟ್​ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊರತಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ದಿನದಾಟದಂತ್ಯಕ್ಕೆ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾ ಇನ್ನಿಂಗ್ಸ್​ಗೆ ರೋಹಿತ್ ಶರ್ಮಾ ಜೊತೆ ಸೇರಿ ಜಡೇಜಾ ಬೂಸ್ಟ್ ನೀಡಿದರು.

1 / 7
ಸಂಕಷ್ಟದ ಪರಿಸ್ಥಿತಿಯಲ್ಲಿ ಬ್ಯಾಟಿಂಗ್‌ಗೆ ಬಂದ ರವೀಂದ್ರ ಜಡೇಜಾ ಮೊದಲು ನಾಯಕ ರೋಹಿತ್ ಶರ್ಮಾ ಜೊತೆಗೆ ಭಾರತದ ಇನ್ನಿಂಗ್ಸ್‌ ನಿಭಾಯಿಸಿದರು. ಇದರ ನಂತರ ಜಡೇಜಾ ತಮ್ಮ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಶತಕವನ್ನು ಪೂರ್ಣಗೊಳಿಸಿದರು.

2 / 7
ಜಡೇಜಾ ಬ್ಯಾಟಿಂಗ್‌ಗೆ ಬಂದಾಗ ಭಾರತ ತನ್ನ ಮೊದಲ ಮೂರು ಪ್ರಮುಖ ವಿಕೆಟ್‌ಗಳನ್ನು ಕೇವಲ 33 ರನ್‌ಗಳಿಗೆ ಕಳೆದುಕೊಂಡಿತ್ತು. ನಂತರ ರವೀಂದ್ರ ಜಡೇಜಾ ರೋಹಿತ್ ಶರ್ಮಾ ಅವರೊಂದಿಗೆ 200 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ಮಾಡಿ ಭಾರತವನ್ನು ಬಲಿಷ್ಠ ಸ್ಥಿತಿಗೆ ತಂದರು.

3 / 7
2018ರಲ್ಲಿ ಭಾರತ ಪ್ರವಾಸದಲ್ಲಿದ್ದ ವೆಸ್ಟ್ ಇಂಡೀಸ್ ವಿರುದ್ಧ ರವೀಂದ್ರ ಜಡೇಜಾ ಅಜೇಯ 100 ರನ್ ಗಳಿಸಿದ್ದರು. ಇದಾದ ನಂತರ ರಾಜ್‌ಕೋಟ್‌ನಲ್ಲಿ ರವೀಂದ್ರ ಜಡೇಜಾ ಅವರ ಎರಡನೇ ಬ್ಯಾಕ್ ಟು ಬ್ಯಾಕ್ ಶತಕ ಇದಾಗಿದೆ.

4 / 7
ಅಂದಿನ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಜಡೇಜಾ, ಭಾರತ ಇನ್ನಿಂಗ್ಸ್ ಮತ್ತು 272 ರನ್‌ಗಳಿಂದ ವೆಸ್ಟ್ ಇಂಡೀಸ್ ಮಣಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೈದಾನದಲ್ಲಿ ರವೀಂದ್ರ ಜಡೇಜಾ ಕೂಡ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಟ್ರಿಪಲ್ ಶತಕ ಕೂಡ ಬಾರಿಸಿದ್ದಾರೆ.

5 / 7
ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲೂ ಜಡೇಜಾ 85 ರನ್ ಕಲೆಹಾಕಿದ್ದರು. ಆದರೆ ಕೇವಲ 13 ರನ್‌ಗಳಿಂದ ತಮ್ಮ ಶತಕ ವಂಚಿತರಾದರು. ಆದರೆ ಆ ಪಂದ್ಯದ ನಂತರ ಗಾಯದ ಕಾರಣ ಜಡೇಜಾ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಆದರೀಗ ಭರ್ಜರಿ ಪುನರಾಗಮನ ಮಾಡಿರುವ ಜಡೇಜಾ ಶತಕ ಸಿಡಿಸಿದ್ದಾರೆ.

6 / 7
ಜಡೇಜಾಗೂ ಮೊದಲು ನಾಯಕ ರೋಹಿತ್ ಶರ್ಮಾ ಕೂಡ 196 ಎಸೆತಗಳನ್ನು ಎದುರಿಸಿ 131 ರನ್​ಗಳ ಶತಕ ಸಿಡಿಸಿದರು. ರೋಹಿತ್ ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಕೂಡ ಸಿಡಿದವು. ಇದು ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿ ಬದುಕಿನ 11ನೇ ಶತಕವಾಗಿತ್ತು. ಅಲ್ಲದೆ ಇದು ಟೆಸ್ಟ್ ನಾಯಕನಾಗಿ ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನದ ಮೂರನೇ ಶತಕವಾಗಿದೆ.

7 / 7

Published On - 5:20 pm, Thu, 15 February 24

Follow us
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್

ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?

ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ

Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ