- Kannada News Photo gallery Cricket photos IND vs SL Sri Lanka pacer Binura Fernando hospitalized Due To Chest Infection
IND vs SL: ಲಂಕಾ ತಂಡಕ್ಕೆ ಮೂರನೇ ಆಘಾತ; ಮತ್ತೊಬ್ಬ ವೇಗಿಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು..!
IND vs SL: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಮೊದಲ ಪಂದ್ಯ ಇಂದು ಸಂಜೆ 7 ಗಂಟೆಯಿಂದ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಮೂರನೇ ಹೊಡೆತ ಬಿದ್ದಿದೆ. ತಂಡದ ವೇಗದ ಬೌಲರ್ ಬಿನೂರ ಫೆರ್ನಾಂಡೋ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Updated on: Jul 27, 2024 | 2:54 PM

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಮೊದಲ ಪಂದ್ಯ ಇಂದು ಸಂಜೆ 7 ಗಂಟೆಯಿಂದ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಮೂರನೇ ಹೊಡೆತ ಬಿದ್ದಿದೆ. ತಂಡದ ವೇಗದ ಬೌಲರ್ ಬಿನೂರ ಫೆರ್ನಾಂಡೋ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದ್ದು ‘ಅನಾರೋಗ್ಯದ ಕಾರಣ ವೇಗಿ ಬಿನೂರ ಫರ್ನಾಂಡೊ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಮೇಶ್ ಮೆಂಡಿಸ್ ಅವರನ್ನು ಸ್ಟ್ಯಾಂಡ್‌ಬೈ ಆಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದಿದೆ. ಅಲ್ಲದೆ ಅನಾರೋಗ್ಯಕ್ಕೆ ತುತ್ತಾಗಿರುವ ಫೆರ್ನಾಂಡೋ ಮೊದಲ ಟಿ20 ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ ವಿರುದ್ಧದ ಸರಣಿಗೂ ಮುನ್ನ ಅನಾರೋಗ್ಯಕ್ಕೊಳಗಾಗಿರುವ ಶ್ರೀಲಂಕಾ ತಂಡದ ಮೂರನೇ ಬೌಲರ್ ಬಿನೂರ ಫರ್ನಾಂಡೊ. ಇವರಿಗೂ ಮುನ್ನ ಬೆರಳಿನ ಗಾಯದಿಂದಾಗಿ ತಂಡದ ಸ್ಟಾರ್ ವೇಗದ ಬೌಲರ್ ನುವಾನ್ ತುಷಾರ ಈ ಟಿ20 ಸರಣಿಯಿಂದ ಹೊರಬಿದ್ದಿದ್ದರು.

ನುವಾನ್ ತುಷಾರಗೂ ಮುನ್ನ ತಂಡದ ಅನುಭವಿ ವೇಗದ ಬೌಲರ್ ದುಷ್ಮಂತ ಚಮೀರಾ ಕೂಡ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರು ಕೂಡ ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿದ್ದರು. ಇದೀಗ ಬಿನೂರ ಫರ್ನಾಂಡೊ ಅನಾರೋಗ್ಯಕ್ಕೀಡಾಗುವುದರೊಂದಿಗೆ ಲಂಕಾ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

ಶ್ರೀಲಂಕಾ ತಂಡ: ದಿನೇಶ್ ಚಾಂಡಿಮಾಲ್, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಚರಿತ್ ಅಸಲಂಕಾ (ನಾಯಕ), ವನಿಂದು ಹಸರಂಗ, ಕಮಿಂದು ಮೆಂಡಿಸ್, ದಸುನ್ ಶಾನಕ, ಚಾಮಿಂದು ವಿಕ್ರಮಸಿಂಘೆ, ಬಿನೂರ ಫೆರ್ನಾಂಡೋ (ರಮೇಶ್ ಮೆಂಡಿಸ್, ಸ್ಟ್ಯಾಂಡ್‌ಬೈ ಆಟಗಾರ), ಮಧುಶಂಕ, ಮತೀಶ ಪತಿರಣ, ಮಹೇಶ ತೀಕ್ಷಣ, ದುನಿತ್ ವೇಲಾಲಗೆ.




