IND vs SL: ಶ್ರೀಲಂಕಾದ ಸೈಕ್ಲೋನ್ ಸಂತ್ರಸ್ತರ ನೆರವಿಗೆ ನಿಲ್ಲಲು ಬಿಸಿಸಿಐ ಮಹತ್ವದ ನಿರ್ಧಾರ

Updated on: Jan 02, 2026 | 9:17 PM

India vs Sri Lanka: ಟೀಂ ಇಂಡಿಯಾ ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಟೆಸ್ಟ್ ಸರಣಿಯ ಜೊತೆಗೆ ಹೆಚ್ಚುವರಿ T20 ಪಂದ್ಯಗಳನ್ನು ಆಡಲಿದೆ. ಈ T20 ಸರಣಿಯಿಂದ ಸಂಗ್ರಹವಾಗುವ ಹಣವನ್ನು ಚಂಡಮಾರುತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಹಾಯ ಮಾಡಲು ಬಳಸಲಾಗುವುದು. BCCI ನ ಈ ನಿರ್ಧಾರಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೃತಜ್ಞತೆ ಸಲ್ಲಿಸಿದೆ. ಇದು ಕ್ರೀಡೆ ಮೂಲಕ ಸಮಾಜಕ್ಕೆ ನೆರವಾಗುವ ಉತ್ತಮ ಹೆಜ್ಜೆಯಾಗಿದೆ.

1 / 5
ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ ಆ ಬಳಿಕ ಟಿ20 ವಿಶ್ವಕಪ್​ಗೆ ಸಜ್ಜಾಗಲಿದೆ. ಇನ್ನು ಟೀಂ ಇಂಡಿಯಾದ ಈ ವರ್ಷದ ಕ್ಯಾಲೆಂಡರ್​ನಲ್ಲಿ ಶ್ರೀಲಂಕಾ ಪ್ರವಾಸವೂ ಸೇರಿದೆ. ಆ ಪ್ರಕಾರ ಟೀಂ ಇಂಡಿಯಾ ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಟೆಸ್ಟ್ ಸರಣಿಯ ಜೊತೆಗೆ ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ ಆ ಬಳಿಕ ಟಿ20 ವಿಶ್ವಕಪ್​ಗೆ ಸಜ್ಜಾಗಲಿದೆ. ಇನ್ನು ಟೀಂ ಇಂಡಿಯಾದ ಈ ವರ್ಷದ ಕ್ಯಾಲೆಂಡರ್​ನಲ್ಲಿ ಶ್ರೀಲಂಕಾ ಪ್ರವಾಸವೂ ಸೇರಿದೆ. ಆ ಪ್ರಕಾರ ಟೀಂ ಇಂಡಿಯಾ ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಟೆಸ್ಟ್ ಸರಣಿಯ ಜೊತೆಗೆ ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

2 / 5

ಟೀಂ ಇಂಡಿಯಾ ಆಗಸ್ಟ್‌ನಲ್ಲಿ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದ್ದು, ಟೆಸ್ಟ್ ಪಂದ್ಯಗಳ ನಂತರ ಹೆಚ್ಚುವರಿಯಾಗಿ ಟಿ20 ಪಂದ್ಯಗಳನ್ನು ಆಡಲಿದೆ. ಟಿ20 ಸರಣಿಯ ವಿಶೇಷತೆ ಏನೆಂದರೆ, ಈ ಸರಣಿಯಿಂದ ಸಂಗ್ರಹವಾದ ಹಣವನ್ನು ಚಂಡಮಾರುತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಹಾಯ ಮಾಡಲು ಬಳಸಲಾಗುತ್ತದೆ.

3 / 5

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವಾ ಇದನ್ನು ದೃಢಪಡಿಸಿದ್ದು, ‘ಬಿಸಿಸಿಐನ ಈ ನಿರ್ಧಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಈ ಹೆಚ್ಚುವರಿ ಟಿ20 ಪಂದ್ಯಗಳು ಚಂಡಮಾರುತ ಪರಿಹಾರ ಮತ್ತು ಪುನರ್ನಿರ್ಮಾಣ ಪ್ರಯತ್ನಗಳಿಗೆ ಅಗತ್ಯವಾದ ಹಣವನ್ನು ಸಂಗ್ರಹಿಸುತ್ತವೆ. ಈ ಹಣವು ಉಂಟಾದ ನಷ್ಟವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ’ ಎಂದಿದ್ದಾರೆ.

4 / 5

ಮುಂದುವರೆದು ಮಾತನಾಡಿರುವ ಶಮ್ಮಿ ಸಿಲ್ವಾ, ವಾಸ್ತವವಾಗಿ ಬಿಸಿಸಿಐ ಡಿಸೆಂಬರ್ ಅಂತ್ಯದಲ್ಲಿಯೇ ಎರಡು ಟಿ20 ಪಂದ್ಯಗಳನ್ನು ಆಡುವ ಮೂಲಕ ಸೈಕ್ಲೋನ್ ಸಂತ್ರಸ್ತರಿಗೆ ಹಣ ಸಂಗ್ರಹ ಮಾಡಿಕೊಡಲು ಸಿದ್ಧವಾಗಿತ್ತು. ಆದರೆ ಆಗ ಈ ಪಂದ್ಯಗಳನ್ನು ಆಯೋಜಿಸಲು ಸಮಯವಿರಲಿಲ್ಲ. ವಿಶೇಷವಾಗಿ ನಮಗಾಗಿ ಯಾವುದೇ ಪ್ರಸಾರಕರು ಸಿಕ್ಕಿರಲಿಲ್ಲ. ಹೀಗಾಗಿ ಆಗಸ್ಟ್​ನಲ್ಲಿಯೇ ಹೆಚ್ಚುವರಿ ಪಂದ್ಯಗಳನ್ನು ನಡೆಸಲಾಗುತ್ತದೆ ಎಂದಿದ್ದಾರೆ.

5 / 5

ಏತನ್ಮಧ್ಯೆ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಮತ್ತು ಏಕದಿನ ಸರಣಿಯ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಪಂದ್ಯಗಳು ಸೆಪ್ಟೆಂಬರ್ 1, 3 ಮತ್ತು 6 ರಂದು ನಡೆಯಲಿದ್ದು, ಟಿ20 ಪಂದ್ಯಗಳು ಸೆಪ್ಟೆಂಬರ್ 9, 12 ಮತ್ತು 13 ರಂದು ನಡೆಯಲಿವೆ.

Loading...
Unable to load recommendations.
Follow Us