IND vs AUS: ಮಧ್ಯಮ ಕ್ರಮಾಂಕದಲ್ಲೂ ರೋಹಿತ್ ವಿಫಲ; ಅಪಾಯದಲ್ಲಿ ಹಿಟ್​ಮ್ಯಾನ್ ಟೆಸ್ಟ್ ವೃತ್ತಿಜೀವನ

|

Updated on: Dec 07, 2024 | 7:30 PM

Rohit Sharma's Poor Form: ಅಡಿಲೇಡ್ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಕ್ರಮ ಬದಲಾದರೂ ರೋಹಿತ್ ಶರ್ಮಾ ಅವರ ಫಾರ್ಮ್ ಸುಧಾರಣೆಯಾಗಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರೂ, ಎರಡೂ ಇನ್ನಿಂಗ್ಸ್‌ಗಳಲ್ಲಿ ಒಂದಂಕಿಯನ್ನು ದಾಟಲು ಸಾಧ್ಯವಾಗಲಿಲ್ಲ. ಕಳೆದ ಎರಡು ವರ್ಷಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ರೋಹಿತ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿಯೂ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.

1 / 8
ಅಡಿಲೇಡ್ ಟೆಸ್ಟ್‌ನಲ್ಲಿ ಓಪನರ್ ಬದಲಾದರು, ಹೀಗಾಗಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಕ್ರಮಾಂಕ ಕೂಡ ಬದಲಾಯಿತು. ಆದರೆ ಬ್ಯಾಟಿಂಗ್‌ ಕ್ರಮಾಂಕ ಬದಲಾದರೂ ರೋಹಿತ್ ಅವರ ಪ್ರದರ್ಶನ ಮಾತ್ರ ಬದಲಾಗಲಿಲ್ಲ. 7 ವರ್ಷಗಳ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರೋಹಿತ್ ಶರ್ಮಾಗೆ ಎರಡೂ ಇನ್ನಿಂಗ್ಸ್​ಗಳಲ್ಲಿ ಒಂದಂಕಿ ಕೂಡ ದಾಟಲು ಸಾಧ್ಯವಾಗಲಿಲ್ಲ.

2 / 8
ಮಗನ ಜನನದ ಕಾರಣ ಪರ್ತ್​ ಟೆಸ್ಟ್​ನಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಅಡಿಲೇಡ್ ಟೆಸ್ಟ್‌ನಲ್ಲಿ ತಂಡದ ಪರ ಕಣಕ್ಕಿಳಿದಿದ್ದರು. ಮಗನ ಆಗಮನದ ನಂತರವಾದರೂ ರೋಹಿತ್ ಲಯ ಕಂಡುಕೊಳ್ಳಬಹುದು ಎಂದು ನಿರೀಕ್ಷಿಸಿದ್ದವರನ್ನು ರೋಹಿತ್ ಮತ್ತೆ ನಿರಾಸೆಗೊಳಿಸಿದರು.

3 / 8
ಅಡಿಲೇಡ್‌ ಟೆಸ್ಟ್‌ನ ಮೊದಲ ಇನ್ನಿಂಗ್ಸ್​ನಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ್ದ ರೋಹಿತ್ 23 ಎಸೆತಗಳನ್ನು ಎದುರಿಸಿ ಕೇವಲ 3 ರನ್​ ಕಲೆಹಾಕಿ ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಆಗಿ ಔಟಾದರು.

4 / 8
ಇನ್ನ ಎರಡನೇ ಇನ್ನಿಂಗ್ಸ್​ನಲ್ಲೂ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದ್ದ ರೋಹಿತ್ ಶರ್ಮಾ 15 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 6 ರನ್ ಕಲೆಹಾಕಲಷ್ಟೇ ಶಕ್ತರಾದರು. ಅಂದರೆ ರೋಹಿತ್ ಈ ಎರಡು ಇನ್ನಿಂಗ್ಸ್​ಗಳಲ್ಲಿ ಕಲೆಹಾಕಿದ್ದು ಕೇವಲ 9 ರನ್ ಅಷ್ಟೆ.

5 / 8
ವಾಸ್ತವವಾಗಿ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್​ನಲ್ಲಿ ಬಹಳ ದಿನಗಳಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. 2022 ರಿಂದಲೂ ರನ್ ಬರ ಎದುರಿಸುತ್ತಿರುವ ರೋಹಿತ್ ಕಳೆದ ಎರಡು ವರ್ಷಗಳಲ್ಲಿ ಆಡಿರುವ 38 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಕೇವಲ 33ರ ಸರಾಸರಿಯಲ್ಲಿ 1226 ರನ್ ಗಳಿಸಿದ್ದಾರೆ. ಅದರಲ್ಲೂ ಕಳೆದ 11 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಫಾರ್ಮ್​ ಅತ್ಯಂತ ಕಳಪೆಯಾಗಿದೆ.

6 / 8
ಕಳೆದ 11 ಇನ್ನಿಂಗ್ಸ್​ಗಳಲ್ಲಿ ರೋಹಿತ್ 12.36ರ ಸರಾಸರಿಯಲ್ಲಿ 136 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಡುತ್ತಿರುವ ರೋಹಿತ್​ಗೆ 10 ಬಾರಿ ಡಬಲ್ ಅಂಕಿಗಳನ್ನು ಮುಟ್ಟಲು ಸಾಧ್ಯವಾಗಿಲ್ಲ.

7 / 8
2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರೋಹಿತ್ ಶರ್ಮಾ ಅವರ ಸರಾಸರಿ 32.15 ಆಗಿದೆ, ಇದು ಅವರ ಕೆಟ್ಟ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ 2019-21ರ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 60.77ರ ಸರಾಸರಿಯಲ್ಲಿ 1094 ರನ್ ಗಳಿಸಿದ್ದರು.

8 / 8
2021-23 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ 42.11 ಸರಾಸರಿಯಲ್ಲಿ 758 ರನ್ ಗಳಿಸಿದ್ದರು. ಆದರೆ ಈ ಬಾರಿ ಮಾತ್ರ ರೋಹಿತ್ ಬ್ಯಾಟ್ ರನ್ ಬರ ಎದುರಿಸುತ್ತಿದೆ. ಇದೇ ಮುಂದುವರೆದರೆ ರೋಹಿತ್​ಗೆ ಆದಷ್ಟು ಬೇಗ ಟೆಸ್ಟ್ ಮಾದರಿಯಿಂದ ಗೇಟ್​ಪಾಸ್ ಸಿಗುವುದು ಖಚಿತ ಎಂತಲೇ ಹೇಳಬಹುದು.