- Kannada News Photo gallery Cricket photos India vs West Indies Test match starts at 7:30 pm IST check ODI and T20 series timings
IND vs WI Series: ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯ ಸಂಜೆ 7:30ಕ್ಕೆ ಆರಂಭ: ಏಕದಿನ, ಟಿ20 ಸರಣಿ ಎಷ್ಟು ಗಂಟೆಗೆ?
India Tour of West Indies: ಆರಂಭದಲ್ಲಿ ಟೀಮ್ ಇಂಡಿಯಾ ವಿಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯವನ್ನು ಆಡಲಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಜುಲೈ 12 ರಿಂದ 16 ವರೆಗೆ ಮೊದಲ ಟೆಸ್ಟ್ ನಡೆಯಲಿದೆ.
Updated on: Jun 26, 2023 | 9:34 AM

ಭಾರತ ಕ್ರಿಕೆಟ್ ತಂಡ ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಲು ಸಜ್ಜಾಗಿ ನಿಂತಿದೆ. ಈ ವಾರದ ಅಂತ್ಯದಲ್ಲಿ ಟೀಮ್ ಇಂಡಿಯಾದ ಒಂದು ಬ್ಯಾಚ್ ವೆಸ್ಟ್ ಇಂಡೀಸ್ ಹೊರಲಿದೆ. ಜುಲೈ 12 ರಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿಗೆ ಚಾಲನೆ ಸಿಗಲಿದೆ.

ಆರಂಭದಲ್ಲಿ ಟೀಮ್ ಇಂಡಿಯಾ ವಿಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯವನ್ನು ಆಡಲಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಜುಲೈ 12 ರಿಂದ 16 ವರೆಗೆ ಮೊದಲ ಟೆಸ್ಟ್ ನಡೆಯಲಿದೆ. ಬಳಿಕ ಜುಲೈ 20ರಿಂದ 24ರ ವರೆಗೆ ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ದ್ವಿತೀಯ ಟೆಸ್ಟ್ ಆಯೋಜಿಸಲಾಗಿದೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ಅಲ್ಲಿನ ಕಾಲಮಾನದ ಪ್ರಕಾರ ಬೆಳಗ್ಗೆ 10 ಗಂಟೆಗೆ ಶುರುವಾಗಲಿದೆ. ಆದರೆ, ಇದು ಭಾರತೀಯ ಕಾಲ ಮಾನದ ಪ್ರಕಾರ ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ.

ಟೆಸ್ಟ್ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಜುಲೈ 27 ರಂದು ಬಾರ್ಬಡಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದೇ ಮೈದಾನದಲ್ಲಿ ಜುಲೈ 29 ದ್ವಿತೀಯ ಪಂದ್ಯ ಮತ್ತು ಆಗಸ್ಟ್ 1 ರಂದು ಟ್ರಿನಿಡಾಡ್ನ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ತೃತೀಯ ಏಕದಿನ ಆಯೋಜಿಸಲಾಗಿದೆ. ಈ ಎಲ್ಲ ಪಂದ್ಯ ಭಾರತೀಯ ಕಾಲ ಮಾನದ ಪ್ರಕಾರ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ.

ಏಕದಿನದ ಬಳಿಕ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಮೊದಲ ಟಿ20 ಆಗಸ್ಟ್ 3 ರಂದು ಅಂತಿಮ ಏಕದಿನ ಪಂದ್ಯ ನಡೆದ ಬ್ರಿಯನ್ ಲಾರಾ ಸ್ಟೇಡಿಯಂನಲ್ಲೇ ನಡೆಯಲಿದೆ. ದ್ವಿತೀಯ ಟಿ20 ಆ. 6 ರಂದು ಹಾಗೂ ತೃತೀಯ ಟಿ20 ಆ. 8 ರಂದು ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ನಾಲ್ಕನೇ ಮತ್ತು ಕೊನೆಯ ಐದನೇ ಟಿ20 ಪಂದ್ಯ ಫ್ರೊರಿಡಾದ ಸೆಂಟ್ರಲ್ ಬ್ರೊವರ್ಡ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಎಲ್ಲ ಐದು ಟಿ20 ಪಂದ್ಯಗಳು ಭಾರತೀಯ ಕಾಲ ಮಾನದ ಪ್ರಕಾರ ರಾತ್ರಿ 8 ಗಂಟೆಗೆ ಶುರುವಾಗಲಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.

ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಜಯದೇವ್ ಉನದ್ಕಟ್, ಮುಖೇಶ್ ಕುಮಾರ್, ಉಮ್ರಾನ್ ಮಲಿಕ್.




