- Kannada News Photo gallery Cricket photos India's T20 World Cup selection questions Five spots up for intense debate
T20 World Cup 2021: ಟೀಮ್ ಇಂಡಿಯಾದಲ್ಲಿ 10 ಆಟಗಾರರಿಗೆ ಸ್ಥಾನ ಖಚಿತ: 5 ಸ್ಥಾನಕ್ಕಾಗಿ 16 ಆಟಗಾರರ ನಡುವೆ ಪೈಪೋಟಿ
India's T20 World Cup Squad: ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit sharma), ಕೆಎಲ್ ರಾಹುಲ್ (KL Rahul), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ.
Updated on: Sep 08, 2021 | 2:11 PM

ನವೆಂಬರ್ 8: ಇಂಡಿಯಾ vs ಅರ್ಹತಾ ಗುಂಪಿನಿಂದ ಆಯ್ಕೆಯಾಗುವ ತಂಡ (ದುಬೈನಲ್ಲಿ ರಾತ್ರಿ 7:30ಕ್ಕೆ ಈ ಪಂದ್ಯ ಶುರುವಾಗಲಿದೆ )

ಕ್ರಿಕ್‌ಇನ್‌ಫೊ ಮಾಹಿತಿ ಪ್ರಕಾರ, ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit sharma), ಕೆಎಲ್ ರಾಹುಲ್ (KL Rahul), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಯುಜ್ವೇಂದ್ರ ಚಹಲ್ ಅವರ ಸ್ಥಾನ ಖಚಿತವಾಗಿದೆ. ಇನ್ನು ಐದು ಹಾಗೂ ಮೀಸಲು ಆಟಗಾರರ ಸ್ಥಾನಕ್ಕಾಗಿ 16 ಆಟಗಾರರನ್ನು ಆಯ್ಕೆ ಮಾಡಿದ್ದು, ಅವರಲ್ಲಿ ಯಾರಿಗೆ ಅಂತಿಮ ಬಳಗದಲ್ಲಿ ಸ್ಥಾನ ಸಿಗಲಿದೆ ಎಂಬುದೇ ಈಗ ಕುತೂಹಲವನ್ನು ಹುಟ್ಟುಹಾಕಿದೆ.

ಹೆಚ್ಚುವರಿ ಬ್ಯಾಟ್ಸ್‌ಮನ್ ಆಯ್ಕೆ: ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರನ್ನು ಹೊರತುಪಡಿಸಿ, 5 ವಿಶೇಷ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ. ಹೀಗಾಗಿ ಹೆಚ್ಚುವರಿ ಬ್ಯಾಟ್ಸ್‌ಮನ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಶಿಖರ್ ಧವನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಮತ್ತು ಪೃಥ್ವಿ ಶಾ ರೇಸ್‌ನಲ್ಲಿದ್ದಾರೆ.

ಇದಲ್ಲದೇ ಇಬ್ಬರೂ ವೇಗದ ಬೌಲರ್‌ಗಳಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಕೂಡ ಇದೆ. ಇದಕ್ಕಾಗಿ ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಟಿ ನಟರಾಜನ್, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ನಡುವೆ ಪೈಪೋಟಿ ಎಂದು ತಿಳಿದು ಬಂದಿದೆ. ಇನ್ನು ಮೂರನೇ ಆಲ್ರೌಂಡರ್ ಸ್ಥಾನಕ್ಕಾಗಿ ಅಕ್ಸರ್ ಪಟೇಲ್, ಕೃನಾಲ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಆಯ್ಕೆದಾರರ ಪಟ್ಟಿಯಲ್ಲಿದ್ದಾರೆ.

ಹಾಗೆಯೇ ಹೆಚ್ಚುವರಿ ಸ್ಪಿನ್ನರ್ಗಳಿಗೆ ಮಣೆಹಾಕಲು ಬಯಸಿದರೆ, ಆರ್ ಅಶ್ವಿನ್, ರಾಹುಲ್ ಚಹರ್ ಮತ್ತು ವರುಣ್ ಚಕ್ರವರ್ತಿ ಸ್ಪಿನ್ ಬೌಲರ್‌ಗಳ ಪಟ್ಟಿಯಲ್ಲಿದ್ದಾರೆ. ಇದಾಗ್ಯೂ ದೀರ್ಘಕಾಲದಿಂದ ಅಂತರಾಷ್ಟ್ರೀಯ ಟಿ20 ಆಡದ ಅಶ್ವಿನ್ಗೆ ಸ್ಥಾನ ಸಿಗೋದು ಡೌಟ್ ಎನ್ನಬಹುದು. ಒಟ್ಟಿನಲ್ಲಿ ಸ್ಟಾರ್ ಆಟಗಾರರ ದಂಡೇ ಹೊಂದಿರುವ ಟೀಮ್ ಇಂಡಿಯಾದಿಂದ 15 ಸದಸ್ಯರ ಬಳಗವನ್ನು ಆಯ್ಕೆ ಮಾಡುವುದು ಇದೀಗ ಬಿಸಿಸಿಐ ಆಯ್ಕೆ ಸಮಿತಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಆದರೆ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಲು ಐಸಿಸಿ ಸೆಪ್ಟೆಂಬರ್ 10ರವರೆಗೆ ಗಡುವು ನೀಡಿದ್ದು, ಹೀಗಾಗಿ ಇಂದು ಅಥವಾ ನಾಳೆ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ಪ್ರಕಟಗೊಳ್ಳುವ ಸಾಧ್ಯತೆಯಿದೆ.




