ಈ ಮೂಲಕ ಕಳೆದ 2 ದಶಕದಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡವು ಅಧಿಪತ್ಯ ಸಾಧಿಸುತ್ತಾ ಬಂದಿದ್ದು, ಈ ಪಾರುಪತ್ಯದೊಂದಿಗೆ ಇದೀಗ ಇಂಗ್ಲೆಂಡ್ ತಂಡವನ್ನು 4-1 ಅಂತರದಿಂದ ಮಣಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಅಂದರೆ 112 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ತಂಡವೊಂದು ಮೊದಲ ಪಂದ್ಯವನ್ನು ಸೋತು 4-1 ಅಂತರದಿಂದ ಸರಣಿ ಗೆದ್ದಿರುವುದು ಇದೇ ಮೊದಲು.