Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ
IPL 2021 Virat Kohli: ವಿರಾಟ್ ಕೊಹ್ಲಿ ಇಂತಹದೊಂದು ವಿಶೇಷ ದಾಖಲೆ ಬರೆದು ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್ನಲ್ಲಿ ಒಂದೇ ತಂಡದ ಪರ ಅತೀ ಹೆಚ್ಚು ಪಂದ್ಯವಾಡಿದ ಆಟಗಾರರ ಪಟ್ಟಿ ಹೀಗಿದೆ.
Updated on:Sep 20, 2021 | 8:07 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2021ರ ದ್ವಿತಿಯಾರ್ಧದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಬರೆದಿದ್ದಾರೆ. ಸೋಮವಾರ ನಡೆದ 31ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ದ ಕಣಕ್ಕಿಳಿಯುವ ಮೂಲಕ ಕೊಹ್ಲಿ ಐಪಿಎಲ್ನಲ್ಲಿ 200 ಪಂದ್ಯಗಳನ್ನು ಪೂರೈಸಿದ್ದಾರೆ. ಅದು ಕೂಡ ಒಂದೇ ತಂಡದ ಪರ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ.

ಹೌದು, 2008 ರ ಚೊಚ್ಚಲ ಐಪಿಎಲ್ನಿಂದ ವಿರಾಟ್ ಕೊಹ್ಲಿ ಆರ್ಸಿಬಿ ಪರ ಕಣಕ್ಕಿಳಿಯುತ್ತಿದ್ದಾರೆ. ಈ ಮೂಲಕ ಕಳೆದ 14 ಸೀಸನ್ನಲ್ಲಿ 200 ಪಂದ್ಯಗಳನ್ನಾಡಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ. ಏಕೆಂದರೆ ಐಪಿಎಲ್ನಲ್ಲಿ ಹಲವು ಆಟಗಾರರು 200ಕ್ಕೂ ಅಧಿಕ ಪಂದ್ಯವಾಡಿದ್ದರೂ ಇದುವರೆಗೆ ಯಾವೊಬ್ಬ ಆಟಗಾರನೂ ಕೂಡ ಒಂದೇ ತಂಡದ ಪರ 200 ಮ್ಯಾಚ್ ಆಡಿಲ್ಲ. ಇದೀಗ ವಿರಾಟ್ ಕೊಹ್ಲಿ ಇಂತಹದೊಂದು ವಿಶೇಷ ದಾಖಲೆ ಬರೆದು ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಐಪಿಎಲ್ನಲ್ಲಿ ಒಂದೇ ತಂಡದ ಪರ ಅತೀ ಹೆಚ್ಚು ಪಂದ್ಯವಾಡಿದ ಆಟಗಾರರ ಪಟ್ಟಿ ಹೀಗಿದೆ.

ಇದರೊಂದಿಗೆ ಇತರೆ ಫ್ರಾಂಚೈಸಿಗಳು ಕೊಹ್ಲಿ ದೊಡ್ಡ ಮೊತ್ತದ ಆಫರ್ ನೀಡಿದರೂ ಕೊಹ್ಲಿ ಆರ್ಸಿಬಿ ಬಿಟ್ಟು ಹೋಗುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ. ಅಷ್ಟೇ ಅಲ್ಲದೆ ತಮ್ಮ ನಿವೃತ್ತಿವರೆಗೂ ಆರ್ಸಿಬಿ ಪರ ಮಾತ್ರ ಆಡುತ್ತೇನೆ ಎಂದು ಕೊಹ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಆರ್ಸಿಬಿ ಅಭಿಮಾನಿಗಳಿಗೆ ಇದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ ಎಂದೇ ಹೇಳಬಹುದು.

ಮಹೇಂದ್ರ ಸಿಂಗ್ ಧೋನಿ- 182* ಪಂದ್ಯಗಳು- ಚೆನ್ನೈ ಸೂಪರ್ ಕಿಂಗ್ಸ್

ಸುರೇಶ್ ರೈನಾ-172* ಪಂದ್ಯಗಳು- ಚೆನ್ನೈ ಸೂಪರ್ ಕಿಂಗ್ಸ್

ಕೀರನ್ ಪೊಲಾರ್ಡ್-172* ಪಂದ್ಯಗಳು- ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ
Published On - 8:03 pm, Mon, 20 September 21




