IPL 2022: RCB ತಂಡಕ್ಕೆ ಇವರು ನಾಯಕರಾಗಲಿದ್ದಾರೆ ಎಂದ ಮಾಜಿ ಕ್ರಿಕೆಟಿಗ..!
IPL 2022 Mega Auction: ಆರ್ಸಿಬಿ ಈ ಬಾರಿ ಪ್ರಮುಖ ಆಟಗಾರರನ್ನು ಖರೀದಿಸಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ತಂಡದಿಂದ ಆಪತ್ಭಾಂಧವ ಎಬಿ ಡಿವಿಲಿಯರ್ಸ್ ಹೊರನಡೆದಿದ್ದು, ಹೀಗಾಗಿ ಅವರ ಬದಲಿ ಆಟಗಾರನ ಅವಶ್ಯಕತೆ ಆರ್ಸಿಬಿಗಿದೆ. ಜೊತೆಗೆ ಹೊಸ ನಾಯಕನನ್ನು ಕೂಡ ಆರ್ಸಿಬಿ ಆಯ್ಕೆ ಮಾಡಬೇಕಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಮೆಗಾ ಹರಾಜಿಗೆ ಕೇವಲ ವಾರಗಳು ಮಾತ್ರ ಉಳಿದಿವೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿದಂತೆ 3 ಫ್ರಾಂಚೈಸಿಗಳು ನಾಯಕರನ್ನು ಆಯ್ಕೆ ಮಾಡಬೇಕಿದೆ.
1 / 6
ಅದರಲ್ಲೂ ಆರ್ಸಿಬಿ ಈ ಬಾರಿ ಪ್ರಮುಖ ಆಟಗಾರರನ್ನು ಖರೀದಿಸಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ತಂಡದಿಂದ ಆಪತ್ಭಾಂಧವ ಎಬಿ ಡಿವಿಲಿಯರ್ಸ್ ಹೊರನಡೆದಿದ್ದು, ಹೀಗಾಗಿ ಅವರ ಬದಲಿ ಆಟಗಾರನ ಅವಶ್ಯಕತೆ ಆರ್ಸಿಬಿಗಿದೆ. ಜೊತೆಗೆ ಹೊಸ ನಾಯಕನನ್ನು ಕೂಡ ಆರ್ಸಿಬಿ ಆಯ್ಕೆ ಮಾಡಬೇಕಿದೆ.
2 / 6
ಹೀಗಾಗಿ ಆರ್ಸಿಬಿ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಆದರೆ ಆರ್ಸಿಬಿ ತಂಡವು ನಾಯಕನನ್ನಾಗಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಅನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ.
3 / 6
ಚೋಪ್ರಾ ಅವರ ಪ್ರಕಾರ, ಆರ್ಸಿಬಿ ವೆಸ್ಟ್ ಇಂಡೀಸ್ ತಂಡದ ಜೇಸನ್ ಹೋಲ್ಡರ್ ಅವರನ್ನು ಆಯ್ಕೆ ಮಾಡಬಹುದು. ಏಕೆಂದರೆ ಹೋಲ್ಡರ್ ಅತ್ಯುತ್ತಮ ಆಲ್ರೌಂಡರ್ ಆಟಗಾರ. ಅಷ್ಟೇ ಅಲ್ಲದೆ ರಾಷ್ಟ್ರೀಯ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿದ್ದಾರೆ. ಹೀಗಾಗಿ ಆರ್ಸಿಬಿಗೆ ಜೇಸನ್ ಹೋಲ್ಡರ್ ಉತ್ತಮ ಆಯ್ಕೆ ಎಂದಿದ್ದಾರೆ.
4 / 6
ಜೇಸನ್ ಹೋಲ್ಡರ್ ಅತ್ಯುತ್ತಮವಾಗಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ಲದೆ ಕಳೆದ ಎರಡು ಸೀಸನ್ಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಮಧ್ಯಮ ವೇಗಿಯಾಗಿ ಕೂಡ ಮಿಂಚಿದ್ದಾರೆ. ಇನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಕೂಡ ಸಣ್ಣದಾಗಿದ್ದು, ಹೀಗಾಗಿ ಆರ್ಸಿಬಿಗೆ ಜೇಸನ್ ಹೋಲ್ಡರ್ ಸರಿಯಾದ ಆಯ್ಕೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
5 / 6
ಹೀಗಾಗಿ ನನ್ನ ಪ್ರಕಾರ ಆರ್ಸಿಬಿ ತಂಡವು ಜೇಸನ್ ಹೋಲ್ಡರ್ ಅವರನ್ನು ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ 2022 ಹರಾಜು ಫೆಬ್ರವರಿ 12 ಮತ್ತು 13 ರಂದು ನಡೆಯಲಿದ್ದು, ಈ ವೇಳೆ ಆರ್ಸಿಬಿ ಯಾರನ್ನು ಖರೀದಿಸಲಿದೆ ಕಾದು ನೋಡಬೇಕಿದೆ.