AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: RCB ತಂಡ ಈ ನಾಲ್ವರನ್ನು ಉಳಿಸಿಕೊಳ್ಳೋದು ಬಹುತೇಕ ಖಚಿತ

IPL 2022 RCB Predicted Retention List: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ತಂಡದಲ್ಲಿದ್ದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಕೆಲ ದಿನಗಳ ಹಿಂದೆಯಷ್ಟೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

TV9 Web
| Edited By: |

Updated on: Nov 25, 2021 | 5:43 PM

Share
ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಆವೃತ್ತಿಗೆ ತಯಾರಿ ಶುರುವಾಗಿದೆ. ಅದಕ್ಕೂ ಮುನ್ನ ಪ್ರಸ್ತುತ ಇರುವ 8 ಫ್ರಾಂಚೈಸಿಗಳು ರಿಟೈನ್ ಆಟಗಾರರ ಪಟ್ಟಿಯನ್ನು ಪ್ರಕಟಿಸಬೇಕಿದೆ. ನವೆಂಬರ್ 30 ರೊಳಗೆ ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಿದ್ದು, ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ರಿಟೆನ್ಶನ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ.

1 / 6
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ತಂಡದಲ್ಲಿದ್ದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಕೆಲ ದಿನಗಳ ಹಿಂದೆಯಷ್ಟೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಹಾಗಾಗಿ ಅವರು ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯುವುದಿಲ್ಲ.

2 / 6
 ಹೀಗಾಗಿ ಆರ್​ಸಿಬಿ ಈ ಬಾರಿ ರಿಟೆನ್ಶನ್ ಪ್ರಕ್ರಿಯೆಯಲ್ಲಿ  3+1 ಸೂತ್ರದ ಮೊರೆ ಹೋಗಲಿದೆ. ಅಂದರೆ ಮೂವರು ಭಾರತೀಯ ಆಟಗಾರರು+ 1 ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಲಿದೆ. ಅದರಂತೆ ಆರ್​ಸಿಬಿಯ ಮೊದಲ ಆಯ್ಕೆ ವಿರಾಟ್ ಕೊಹ್ಲಿ. ತಂಡದ ಬ್ರಾಂಡ್​ ಆಗಿ ಕೊಹ್ಲಿಯನ್ನು ರಿಟೈನ್ ಮಾಡಿಕೊಳ್ಳಲಿದ್ದು, ಹೀಗಾಗಿ ಅವರಿಗೆ 16 ಕೋಟಿ ರೂ. ಪಾವತಿಸಲಿದೆ.

3 / 6
ಇನ್ನು 2ನೇ ಆಟಗಾರನಾಗಿ ಯುಜುವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಚಹಲ್ ಐಪಿಎಲ್​ನ ಬೆಸ್ಟ್ ಸ್ಪಿನ್ನರ್​ಗಳಲ್ಲಿ ಒಬ್ಬರು. ಒಂದು ವೇಳೆ ಚಹಲ್ ಅವರನ್ನು ಬಿಡುಗಡೆ ಮಾಡಿದರೆ, ಮತ್ತೆ ಖರೀದಿಸಲು ಭರ್ಜರಿ ಪೈಪೋಟಿ ಕಂಡು ಬರಲಿದೆ. ಹೀಗಾಗಿ ಚಹಲ್ ಅವರನ್ನು ಬಿಡುಗಡೆ ಮಾಡುವುದಿಲ್ಲ ಎಂದೇ ಹೇಳಬಹುದು.

4 / 6
 ಹಾಗೆಯೇ 3ನೇ ಆಟಗಾರನಾಗಿ ವೇಗಿಯನ್ನು ಉಳಿಸಿಕೊಳ್ಳಲಿದೆ. ಈ ಪಟ್ಟಿಯಲ್ಲಿ ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ಹೆಸರುಗಳು ಮುಂಚೂಣಿಯಲ್ಲಿದೆ. ಆದರೆ ಕಳೆದ ಸೀಸನ್​ನಲ್ಲಿ 32 ವಿಕೆಟ್ ಉರುಳಿಸಿ ಮಿಂಚಿರುವ ಹರ್ಷಲ್ ಪಟೇಲ್ ಅವರೇ ಆರ್​ಸಿಬಿಯ ಮೊದಲ ಆಯ್ಕೆಯಾಗಲಿದೆ. ಹೀಗಾಗಿ ಹರ್ಷಲ್ ಪಟೇಲ್ ಅವರನ್ನೂ ಸಹ ಆರ್​ಸಿಬಿ ರಿಟೈನ್ ಮಾಡಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

5 / 6
 ಇವರಲ್ಲದೆ, ವಿದೇಶಿ ಆಟಗಾರನ ಕೋಟಾದಲ್ಲಿ ಆರ್​ಸಿಬಿ ಕಳೆದ ಸೀಸನ್​ನಲ್ಲಿನ ಬೆಸ್ಟ್​ ಫರ್ಫಾಮರ್ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಉಳಿಸಿಕೊಳ್ಳಲಿದೆ. ಏಕೆಂದರೆ ಕಳೆದ ಬಾರಿ ಆರ್​ಸಿಬಿ 14.25 ಕೋಟಿ ನೀಡಿ ಮ್ಯಾಕ್ಸ್​ವೆಲ್ ಅವರನ್ನು ಖರೀದಿಸಿದ್ದತ್ತು. ಈ ಬಾರಿ ಮತ್ತೆ ಬಿಡುಗಡೆ ಮಾಡಿದರೆ, ಮ್ಯಾಕ್ಸಿಯ ಖರೀದಿಗೆ ಮತ್ತೆ ಪೈಪೋಟಿ ನಡೆಸಬೇಕಾಗುತ್ತದೆ. ಹೀಗಾಗಿ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನೂ ಕೂಡ ಆರ್​ಸಿಬಿ ರಿಟೈನ್ ಮಾಡಿಕೊಳ್ಳಲಿದೆ ಎಂದೇ ಹೇಳಬಹುದು.

6 / 6