Mumbai Indians: ಮುಂಬೈ ಫ್ರಾಂಚೈಸಿಯ ಮೂರು ತಂಡಕ್ಕೆ 3 ಹೊಸ ಕೋಚ್..!

Mumbai Indians: ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯ ಅಧೀನದಲ್ಲಿ ಇದೀಗ ಮತ್ತೆರಡು ಹೊಸ ತಂಡಗಳು ಸೇರ್ಪಡೆಯಾಗಿದೆ. ಈ ತಂಡಗಳ ಹೊಸ ಕೋಚ್​ಗಳು ಯಾರೆಲ್ಲಾ ನೋಡೋಣ...

TV9 Web
| Updated By: ಝಾಹಿರ್ ಯೂಸುಫ್

Updated on:Sep 18, 2022 | 4:04 PM

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಟಿ20 ಕ್ರಿಕೆಟ್​ನಲ್ಲಿ ಮೂರು ಫ್ರಾಂಚೈಸಿಗಳನ್ನು ಹೊಂದಿರುವುದು ಗೊತ್ತೇ ಇದೆ. ಅದರಲ್ಲಿ ಮುಂಬೈ ಇಂಡಿಯನ್ಸ್​ ಹಳೆಯ ತಂಡವಾದರೆ, ಹೊಸ ತಂಡಗಳಾಗಿ ಎಂಐ ಕೇಪ್​ಟೌನ್ ಹಾಗೂ ಎಂಐ ಎಮಿರೇಟ್ಸ್​ ಸೇರ್ಪಡೆಯಾಗಿದೆ.

1 / 5
ವಿಶೇಷ ಎಂದರೆ ಈ ಮೂರು ತಂಡಗಳಿಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬೇರೆ ಬೇರೆ ಕೋಚ್​ಗಳನ್ನು ನೇಮಕ ಮಾಡಿದೆ. ಅಂದರೆ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ದ ಮಹೇಲ ಜಯವರ್ಧನೆ ಬದಲಿಗೆ ಹೊಸ ತರಬೇತುದಾರರನ್ನು ನೇಮಕ ಮಾಡಲಾಗಿದೆ. ಹಾಗಿದ್ರೆ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯ ತಂಡಗಳ ಹೊಸ ಕೋಚ್​ಗಳು ಯಾರೆಲ್ಲಾ ನೋಡೋಣ...

2 / 5
ಮುಂಬೈ ಇಂಡಿಯನ್ಸ್​: ಐಪಿಎಲ್​ನಲ್ಲಿನ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್​ ತನ್ನ ಈ ಹಿಂದಿನ ಕೋಚ್​ಮಹೇಲಾ ಜಯವರ್ಧನೆ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಜಾಗತಿಕ ಹೆಡ್‌ ಆಗಿ ನೇಮಕ ಮಾಡಿದೆ. ಅಲ್ಲದೆ ಅವರ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ತರಬೇತುದಾರರನ್ನಾಗಿ ಸೌತ್ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್​ ಬೌಷರ್​ ಅವರನ್ನು ನೇಮಿಸಲಾಗಿದೆ.

3 / 5
ಎಂಐ ಎಮಿರೇಟ್ಸ್​: ಯುಎಇನಲ್ಲಿನ ಟಿ20 ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಂಐ ಎಮಿರೇಟ್ಸ್ ತಂಡವನ್ನು ಖರೀದಿಸಿದೆ. ಈ ತಂಡದ ಮುಖ್ಯ ಕೋಚ್ ಆಗಿ ನ್ಯೂಜಿಲೆಂಡ್​ನ  ಮಾಜಿ ವೇಗಿ ಶೇನ್ ಬಾಂಡ್​ ಅವರನ್ನು ನೇಮಿಸಿರುವುದು ವಿಶೇಷ. ಅಂದರೆ ಶೇನ್ ಬಾಂಡ್ ಈ ಹಿಂದೆ ಮುಂಬೈ ಇಂಡಿಯನ್ಸ್​ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

4 / 5
ಎಂಐ ಕೇಪ್​ಟೌನ್: ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಕೇಪ್​ಟೌನ್ ತಂಡದ ಫ್ರಾಂಚೈಸಿ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಸೈಮನ್ ಕ್ಯಾಟಿಚ್ ಅವರನ್ನು ನೇಮಿಸಿದೆ. ಈ ಹಿಂದೆ ಕ್ಯಾಟಿಚ್ ಐಪಿಎಲ್​ನಲ್ಲಿ RCB​ ತಂಡದ ಕೋಚ್ ಆಗಿದ್ದರು. ಇದೀಗ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯು 3 ತಂಡಗಳಿಗೂ ಹೊಸ ಕೋಚ್​ಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವುದು ವಿಶೇಷ.

5 / 5

Published On - 4:04 pm, Sun, 18 September 22

Follow us