IPL 2023 Auction: RCB ಗೆ ಸ್ಟಾರ್ ಆಟಗಾರರನ್ನು ಖರೀದಿಸಲು ಸಾಧ್ಯವಾಗುವುದಿಲ್ಲ, ಏಕೆಂದರೆ…
TV9 Web | Updated By: ಝಾಹಿರ್ ಯೂಸುಫ್
Updated on:
Dec 22, 2022 | 8:30 PM
IPL 2023 RCB: 2022 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್ಸಿಬಿ ತಂಡವು ಆರಂಭದಲ್ಲೇ ಕೆಲ ಆಟಗಾರರನ್ನು ಹೆಚ್ಚಿನ ಮೊತ್ತ ನೀಡಿ ಖರೀದಿಸಿದ ಪರಿಣಾಮ ಅಂತಿಮ ಹಂತದಲ್ಲಿ ಹರಾಜಿಗಾಗಿ ಹಣದ ಕೊರತೆ ಎದುರಿಸಿತು.
1 / 7
ಐಪಿಎಲ್ 16ರ ಆವೃತ್ತಿಯ ಹರಾಜಿಗಾಗಿ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ಕೊಚ್ಚಿನ್ನಲ್ಲಿ ನಡೆಯಲಿರುವ ಮಿನಿ ಹರಾಜಿನ ಮೂಲಕ 10 ತಂಡಗಳು ಬಲಿಷ್ಠ ಬಳಗವನ್ನು ರೂಪಿಸುವ ಇರಾದೆಯಲ್ಲಿದೆ. ಆದರೆ ಇತ್ತ ಆರ್ಸಿಬಿ ಫ್ರಾಂಚೈಸಿಯು ಕಡಿಮೆ ಮೊತ್ತದೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ ಸ್ಟಾರ್ ಆಟಗಾರರ ಖರೀದಿಗೆ ಅದುವೇ ತೊಡಕಾಗಬಹುದು.
2 / 7
ಅಂದರೆ ಈ ಬಾರಿ ಆರ್ಸಿಬಿ ತಂಡವು 18 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು 7 ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಬೆಂಗಳೂರು ಫ್ರಾಂಚೈಸಿಗಿದೆ. ಇದರಲ್ಲಿ 5 ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ....
3 / 7
ಆದರೆ ಆರ್ಸಿಬಿ ಬಳಿ ಉಳಿದಿರುವುದು ಕೇವಲ 8.75 ಕೋಟಿ ರೂ. ಮಾತ್ರ. ಅಂದರೆ 8 ಕೋಟಿ 7 ಲಕ್ಷದೊಳಗೆ ಆರ್ಸಿಬಿ ತಂಡವು 7 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಅಂದರೆ ಇಲ್ಲಿ 8 ಕೋಟಿಗಿಂತ ಹೆಚ್ಚಿನ ಮೊತ್ತ ನೀಡಿ ಆರ್ಸಿಬಿಗೆ ಯಾವುದೇ ಸ್ಟಾರ್ ಆಟಗಾರನನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.
4 / 7
ಏಕೆಂದರೆ ಎಸ್ಆರ್ಹೆಚ್ ತಂಡದ ಬಳಿ 42.25 ಕೋಟಿ ರೂ. ಹರಾಜು ಮೊತ್ತ ಇದ್ದರೆ, ಪಂಜಾಬ್ ಕಿಂಗ್ಸ್ ಬಳಿ 32.2 ಕೋಟಿ ಹರಾಜು ಮೊತ್ತವಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಬಳಿ 20 ಕೋಟಿಗಿಂತ ಅಧಿಕ ಮೊತ್ತವಿದೆ. ಅಂದರೆ ಇಲ್ಲಿ ಈ 5 ತಂಡಗಳು ಸ್ಟಾರ್ ಆಟಗಾರರ ಖರೀದಿಗೆ ಹೆಚ್ಚಿನ ಪೈಪೋಟಿ ನಡೆಸಲಿದೆ.
5 / 7
ಇತ್ತ ಕೇವಲ 8.75 ಕೋಟಿ ಹೊಂದಿರುವ ಆರ್ಸಿಬಿ ಸ್ಟಾರ್ ಆಟಗಾರರ ಖರೀದಿಗೆ ಮುಂದಾದರೂ ಎಸ್ಆರ್ಹೆಚ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಪೈಪೋಟಿ ಎದುರಿಸಲಿದೆ. ಇದರಿಂದ ಪ್ರಸಿದ್ಧ ಆಟಗಾರರು ಆರ್ಸಿಬಿಗೆ ಸಿಗುವುದು ಅನುಮಾನ.
6 / 7
ಅದರಲ್ಲೂ ಇಬ್ಬರು ವಿದೇಶಿ ಆಟಗಾರರ ಆಯ್ಕೆ ಹೊಂದಿರುವ ಆರ್ಸಿಬಿ ಒಬ್ಬ ಆಟಗಾರನಿಗಾಗಿ ಹೆಚ್ಚಿನ ಮೊತ್ತ ವ್ಯಯಿಸಿದರೆ, ಬಿಡ್ಡಿಂಗ್ ಲೆಕ್ಕಚಾರಗಳು ತಲೆ ಕೆಳಗಾಗಬಹುದು. ಇದಕ್ಕೆ ಉತ್ತಮ ಉದಾಹರಣೆ ಕಳೆದ ಸೀಸನ್ನಲ್ಲಿನ ಮೆಗಾ ಹರಾಜು.
7 / 7
2022 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್ಸಿಬಿ ತಂಡವು ಆರಂಭದಲ್ಲೇ ಕೆಲ ಆಟಗಾರರನ್ನು ಹೆಚ್ಚಿನ ಮೊತ್ತ ನೀಡಿ ಖರೀದಿಸಿದ ಪರಿಣಾಮ ಅಂತಿಮ ಹಂತದಲ್ಲಿ ಹರಾಜಿಗಾಗಿ ಹಣದ ಕೊರತೆ ಎದುರಿಸಿತು. ಅದರಂತೆ ಅಂತಿಮವಾಗಿ ಆರ್ಸಿಬಿ 22 ಆಟಗಾರರನ್ನು ಮಾತ್ರ ಖರೀದಿಸಿತ್ತು. ಇದರಿಂದ ಆರ್ಸಿಬಿ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿಗೆ ಅವಕಾಶ ಇರಲಿಲ್ಲ. ಹೀಗಾಗಿ ಈ ಬಾರಿ ಆರ್ಸಿಬಿ ಫ್ರಾಂಚೈಸಿಯು ಜಾಣ ನಡೆಯ ಮೂಲಕ ತಂಡ ಕಟ್ಟುವ ಸಾಧ್ಯತೆ ಹೆಚ್ಚಿದೆ.