Reece Topley: RCB ತಂಡಕ್ಕೆ ಎಡಗೈ ವೇಗಿ ಎಂಟ್ರಿ

| Updated By: ಝಾಹಿರ್ ಯೂಸುಫ್

Updated on: Dec 23, 2022 | 4:39 PM

IPL 2023 Auction RCB: ಆರ್​ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್

1 / 5
ಐಪಿಎಲ್ ಮಿನಿ ಹರಾಜಿನ ಮೂಲಕ ಆರ್​ಸಿಬಿ ತಂಡವು ಮೊದಲ ಆಟಗಾರನನ್ನು ಆಯ್ಕೆ ಮಾಡಿಕೊಂಡಿದೆ. ಮೊದಲ 3 ಸುತ್ತಿನಲ್ಲಿ ಯಾವುದೇ ಆಟಗಾರರನ್ನು ಖರೀದಿಸದ ಆರ್​ಸಿಬಿ 4ನೇ ಸುತ್ತಿನಲ್ಲಿ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

2 / 5
75 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ರೀಸ್ ಟೋಪ್ಲಿ ಖರೀದಿಗಾಗಿ ಮುಂಬೈ ಇಂಡಿಯನ್ಸ್​, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪೈಪೋಟಿ ಏರ್ಪಟಿತ್ತು.

3 / 5
ಅದರಂತೆ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಹಿಂದಿಕ್ಕಿ ಇಂಗ್ಲೆಂಡ್​ನ ಎಡಗೈ ವೇಗಿ ರೀಸ್ ಟೋಪ್ಲಿಯನ್ನು ಆರ್​ಸಿಬಿ ತಂಡವು 1 ಕೋಟಿ 90 ಲಕ್ಷ ರೂ. ನೀಡಿ ಖರೀದಿಸಿದೆ. ಈ ಮೂಲಕ ಆರ್​ಸಿಬಿ ತಂಡವು ಮಿನಿ ಹರಾಜಿನ ಮೊದಲ ಬಿಡ್ ಅನ್ನು ಗೆದ್ದುಕೊಂಡಿದೆ.

4 / 5
ಇಂಗ್ಲೆಂಡ್ ಪರ 22 ಟಿ20 ಪಂದ್ಯಗಳನ್ನಾಡಿರುವ ರೀಸ್ ಟೋಪ್ಲಿ ಇದುವೆರೆಗೆ 22 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ 20 ಪಂದ್ಯಗಳಿಂದ 33 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

5 / 5
ಆರ್​ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್‌, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಝಲ್‌ವುಡ್, ಸಿದ್ಧಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟೋಪ್ಲಿ.

Published On - 4:38 pm, Fri, 23 December 22