- Kannada News Photo gallery Cricket photos IPL 2023: Faf du Plessis features as impact player For RCB
IPL 2023: ವಿರಾಟ್ ಕೊಹ್ಲಿ ನಾಯಕ, ಫಾಫ್ ಸೂಪರ್ ಸಬ್: RCB ತಂಡದ ಮಾಸ್ಟರ್ ಪ್ಲ್ಯಾನ್..!
IPL 2023 Kannada: ಫಾಫ್ ಡುಪ್ಲೆಸಿಸ್ ಹೊರಗುಳಿದರೆ ಬದಲಿ ನಾಯಕನನ್ನು ಆಯ್ಕೆ ಮಾಡಬೇಕು. ಅದರಲ್ಲೂ ಭರ್ಜರಿ ಫಾರ್ಮ್ನಲ್ಲಿರುವ ಡುಪ್ಲೆಸಿಸ್ ಬದಲಿಗೆ ಹೊಸ ಆರಂಭಿಕನನ್ನು ಕಣಕ್ಕಿಳಿಸಬೇಕಿತ್ತು. ಇದರಿಂದ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲೂ ಮಹತ್ವದ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು.
Updated on: Apr 20, 2023 | 9:53 PM

IPL 2023: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡಕ್ಕೆ ಹೊಸ ಚಿಂತೆಯೊಂದು ಶುರುವಾಗಿತ್ತು. ತಂಡದ ನಾಯಕ ಫಾಫ್ ಡುಪ್ಲೆಸಿಸ್ ಪೆಕ್ಕೆಲುಬಿನ ನೋವಿನ ಕಾರಣ 20 ಓವರ್ಗಳ ಫೀಲ್ಡಿಂಗ್ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ.IPL 2023: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡಕ್ಕೆ ಹೊಸ ಚಿಂತೆಯೊಂದು ಶುರುವಾಗಿತ್ತು. ತಂಡದ ನಾಯಕ ಫಾಫ್ ಡುಪ್ಲೆಸಿಸ್ ಪೆಕ್ಕೆಲುಬಿನ ನೋವಿನ ಕಾರಣ 20 ಓವರ್ಗಳ ಫೀಲ್ಡಿಂಗ್ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ.

ಇತ್ತ ಫಾಫ್ ಡುಪ್ಲೆಸಿಸ್ ಹೊರಗುಳಿದರೆ ಬದಲಿ ನಾಯಕನನ್ನು ಆಯ್ಕೆ ಮಾಡಬೇಕು. ಅದರಲ್ಲೂ ಭರ್ಜರಿ ಫಾರ್ಮ್ನಲ್ಲಿರುವ ಡುಪ್ಲೆಸಿಸ್ ಬದಲಿಗೆ ಹೊಸ ಆರಂಭಿಕನನ್ನು ಕಣಕ್ಕಿಳಿಸಬೇಕಿತ್ತು. ಇದರಿಂದ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲೂ ಮಹತ್ವದ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು.

ಆದರೆ ಈ ಇಲ್ಲಿ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಮಾಡಿದ ಒಂದೇ ಒಂದು ಮಾಸ್ಟರ್ ಪ್ಲ್ಯಾನ್ ಎಲ್ಲಾ ಸಮಸ್ಯೆಗೂ ಪರಿಹಾರ ನೀಡಿದೆ. ಅದರಂತೆ ಫಾಫ್ ಡುಪ್ಲೆಸಿಸ್ ಕಣಕ್ಕಿಳಿದರು. ಆದರೆ ನಾಯಕನಾಗಿ ಅಲ್ಲ ಎಂಬುದಷ್ಟೇ ವ್ಯತ್ಯಾಸ.

ಅಂದರೆ ಫಾಫ್ ಡುಪ್ಲೆಸಿಸ್ ಕೇವಲ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಸಿತು. ಅತ್ತ ವಿರಾಟ್ ಕೊಹ್ಲಿಗೆ ನಾಯಕನ ಜವಾಬ್ದಾರಿ ನೀಡಲಾಗಿತ್ತು. ಇತ್ತ ಫಾಫ್ ಡುಪ್ಲೆಸಿಸ್ ಅವರ ಬ್ಯಾಟಿಂಗ್ ಮುಗಿಯುತ್ತಿದ್ದಂತೆ ಇಂಪ್ಯಾಕ್ಟ್ ಸಬ್ ಆಯ್ಕೆಯ ಮೂಲಕ ಬೌಲರ್ನನ್ನು ಕಣಕ್ಕಿಳಿಸಲು ಆರ್ಸಿಬಿ ಪ್ಲ್ಯಾನ್ ರೂಪಿಸಿತು.

ಅದರಂತೆ ಆರ್ಸಿಬಿ ಪರ ಎಂದಿನಂತೆ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದರು. ನಿರೀಕ್ಷೆಯಂತೆ ಈ ಬಾರಿ ಕೂಡ ಈ ಜೋಡಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಅದರಲ್ಲೂ ಮೊದಲ ವಿಕೆಟ್ಗೆ 137 ರನ್ಗಳ ಜೊತೆಯಾಟವಾಡುವ ಮೂಲಕ ಅಬ್ಬರಿಸಿದರು.

ಇತ್ತ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಫಾಫ್ ಡುಪ್ಲೆಸಿಸ್ 56 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ನೊಂದಿಗೆ 84 ರನ್ ಕಲೆಹಾಕಿದರು. ಈ ಸ್ಪೋಟಕ ಇನಿಂಗ್ಸ್ ನೆರವಿನಿಂದ ಆರ್ಸಿಬಿ 4 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು.

ಅಷ್ಟೇ ಅಲ್ಲದೆ ಬ್ಯಾಟಿಂಗ್ ಬಳಿಕ ಡುಪ್ಲೆಸಿಸ್ ಬದಲಿಗೆ ವೇಗಿ ವೈಶಾಕ್ ವಿಜಯಕುಮಾರ್ ಅವರನ್ನು ಇಂಪ್ಯಾಕ್ಟ್ ಸಬ್ ಆಗಿ ಕಣಕ್ಕಿಳಿಸಲಾಯಿತು. ಅತ್ತ ಆರ್ಸಿಬಿ ನಾಯಕನನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಯ್ಕೆ ಮಾಡುವ ಮೂಲಕ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡಿತು.

ಪರಿಣಾಮ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ 24 ರನ್ಗಳ ಭರ್ಜರಿ ಜಯ ಸಾಧಿಸಿತು. ಅತ್ತ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಡಗೌಟ್ನಲ್ಲಿ ಕೂತು ಗೆಲುವಿನ ನಗೆ ಬೀರಿದರು.
























