IPL 2023 ಹರಾಜಿಗೂ ಮುನ್ನವೇ RCB ತಂಡಕ್ಕೆ ಬಿಗ್ ಶಾಕ್..!

IPL 2023 RCB Squad: RCB ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್

Nov 24, 2022 | 9:31 PM
TV9kannada Web Team

| Edited By: Zahir PY

Nov 24, 2022 | 9:31 PM

ಐಪಿಎಲ್ ಆರಂಭಕ್ಕೂ ಮುನ್ನವೇ ಆರ್​ಸಿಬಿ ತಂಡಕ್ಕೆ ಹೊಸ ಚಿಂತೆ ಶುರುವಾಗಿದೆ. ಏಕೆಂದರೆ ಒಂದೆಡೆ ಎಲ್ಲಾ ತಂಡಗಳು ಮಿನಿ ಹರಾಜಿಗಾಗಿ ಭರ್ಜರಿ ಪ್ಲ್ಯಾನ್ ರೂಪಿಸುತ್ತಿದ್ದರೆ, ಅತ್ತ ಆರ್​ಸಿಬಿ ಉಳಿಸಿಕೊಂಡಿರುವ ಗ್ಲೆನ್ ಮ್ಯಾಕ್ಸ್​ವೆಲ್ ಐಪಿಎಲ್ ಆರಂಭಕ್ಕೆ ಅಲಭ್ಯರಾಗುವ ಸುಳಿವು ನೀಡಿದ್ದಾರೆ.

1 / 7
ಕೆಲ ದಿನಗಳ ಹಿಂದೆ ಗ್ಲೆನ್ ಮ್ಯಾಕ್ಸ್​ವೆಲ್ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಫ್ರೆಂಡ್ಸ್​ ಜೊತೆಗಿನ ಪಾರ್ಟಿಯ ವೇಳೆ ಜಾರಿಬಿದ್ದಿದ್ದರಿಂದಕಾಲಿನ ಮೂಳೆ ಮುರಿತಕ್ಕೊಳಗಾಗಿದೆ ಹೀಗಾಗಿ ಮುಂದಿನ ಮೂರು ತಿಂಗಳುಗಳ ಕಾಲ ಮೈದಾನಕ್ಕೆ ಇಳಿಯಲಾಗುವುದಿಲ್ಲ.

2 / 7
ಅಂದರೆ ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯಲ್ಲಿ ಸಂಪೂರ್ಣ ವಿಶ್ರಾಂತಿ ಪಡೆಯಲಿದ್ದಾರೆ. ಇದಾಗ್ಯೂ ಮಾರ್ಚ್​​ನಲ್ಲಿ ಕಂಬ್ಯಾಕ್ ಮಾಡುವುದು ಕೂಡ ಅನುಮಾನ ಎಂದಿದ್ದಾರೆ ಮ್ಯಾಕ್ಸಿ.

3 / 7
ಈ ಬಗ್ಗೆ ಮಾತನಾಡಿರುವ ಗ್ಲೆನ್ ಮ್ಯಾಕ್ಸ್​ವೆಲ್ ಫೆಬ್ರವರಿ - ಮಾರ್ಚ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ತಂಡದ ಸರಣಿಗೆ ಅಲಭ್ಯರಾಗಲಿದ್ದೇನೆ ಎಂದಿದ್ದಾರೆ. ಈ ಮೂಲಕ ಮಾರ್ಚ್​ನಲ್ಲಿ ಐಪಿಎಲ್ ನಡೆದರೆ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳುವುದನ್ನು ದೃಢಪಡಿಸಿದ್ದಾರೆ.

4 / 7
ಇದಾಗ್ಯೂ ಸಂಪೂರ್ಣವಾಗಿ ಯಾವಾಗ ಗುಣಮುಖನಾಗಲಿದ್ದೇನೆ ಎಂಬುದರ ಬಗ್ಗೆ ಮ್ಯಾಕ್ಸ್​ವೆಲ್ ಮಾಹಿತಿ ಹಂಚಿಕೊಂಡಿಲ್ಲ. ಒಂದು ವೇಳೆ ಮಾರ್ಚ್​ ತಿಂಗಳಲ್ಲಿ ಆರ್​ಸಿಬಿ ಆಟಗಾರ ಅಭ್ಯಾಸ ಆರಂಭಿಸದಿದ್ದರೆ, ಐಪಿಎಲ್​ನ ಮೊದಲಾರ್ಧವನ್ನು ತಪ್ಪಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.

5 / 7
ಇತ್ತ ಆರ್​ಸಿಬಿ ತಂಡವು ಬರೋಬ್ಬರಿ 11 ಕೋಟಿಗೆ ಗ್ಲೆನ್ ಮ್ಯಾಕ್​​ವೆಲ್​ ಅವರನ್ನು ಉಳಿಸಿಕೊಂಡಿದೆ. ಒಂದು ವೇಳೆ ಅವರು ಐಪಿಎಲ್ ಮೊದಲಾರ್ಧಕ್ಕೆ ಅಲಭ್ಯರಾದರೆ ಆರ್​ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆ ಆಗುವುದರಲ್ಲಿ ಅನುಮಾನವೇ ಇಲ್ಲ.

6 / 7
RCB ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್

7 / 7

Follow us on

Most Read Stories

Click on your DTH Provider to Add TV9 Kannada