- Kannada News Photo gallery Cricket photos IPL 2023 Karun Nair has been named as KL Rahuls replacement for LSG
IPL 2023: ಕೆಎಲ್ ರಾಹುಲ್ ಬದಲಿಯಾಗಿ ಲಕ್ನೋ ತಂಡ ಸೇರಿಕೊಂಡ ಮತ್ತೊಬ್ಬ ಕನ್ನಡಿಗ
IPL 2023: ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಇಂಜುರಿಗೊಂಡು ಐಪಿಎಲ್ನಿಂದ ಹೊರಬಿದ್ದಿದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬದಲಿ ಆಟಗಾರನನ್ನು ಲಕ್ನೋ ಫಾಂಚೈಸ್ ಆಯ್ಕೆ ಮಾಡಿದೆ.
Updated on: May 05, 2023 | 11:02 PM

ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಇಂಜುರಿಗೊಂಡು ಐಪಿಎಲ್ನಿಂದ ಹೊರಬಿದ್ದಿದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬದಲಿ ಆಟಗಾರನನ್ನು ಲಕ್ನೋ ಫಾಂಚೈಸ್ ಆಯ್ಕೆ ಮಾಡಿದೆ.

ಕನ್ನಡಿಗ ಕೆಎಲ್ ರಾಹುಲ್ ಬದಲಿಗೆ ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿರುವ ಲಕ್ನೋ ಆಡಳಿತ ಮಂಡಳಿ ಕರುಣ್ ನಾಯರ್ ಅವರನ್ನು ರಾಹುಲ್ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ.

ಇನ್ನು ಇದೀಗ ಲಕ್ನೋ ತಂಡ ಸೇರಿಕೊಂಡಿರುವ ಕರುಣ್ ನಾಯರ್ ಅವರ ಐಪಿಎಲ್ ರೆಕಾರ್ಡ್ ನೋಡುವುದಾದರೆ, ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ 76 ಪಂದ್ಯಗಳನ್ನಾಡಿರುವ ನಾಯರ್ 10 ಅರ್ಧಶತಕದೊಂದಿಗೆ 1496 ರನ್ ಬಾರಿಸಿದ್ದಾರೆ.

ಐಪಿಎಲ್ನಲ್ಲಿ ಮೊದಲ ಬಾರಿಗೆ ಆರ್ಸಿಬಿ ಪರ ಆಡಿದ್ದ ನಾಯರ್ ಆ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡಿದ್ದರು. ನಂತರ ಡೆಲ್ಲಿ ಡೇರ್ ಡೇವಿಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಪರವಾಗಿಯೂ ಕಣಕ್ಕಿಳಿದಿದ್ದರು. ಆ ಬಳಿಕ ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡಿದ್ದ ನಾಯರ್ ಕೊನೆಯದಾಗಿ ಕೆಕೆಆರ್ ತಂಡದ ಪರ ಆಡಿದ್ದರು.

ಇದೀಗ ರಾಹುಲ್ ಬದಲಿಗೆ ಲಕ್ನೋ ತಂಡ ಸೇರಿಕೊಂಡಿರುವ ಕರುಣ್ಗೆ ತಂಡದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

ಇನ್ನು ಇಂಜುರಿಯಿಂದಾಗಿ ಐಪಿಎಲ್ ತೊರೆದಿರುವ ರಾಹುಲ್ ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ಕೃನಾಲ್ ಪಾಂಡ್ಯ ಲಕ್ನೋ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.




