- Kannada News Photo gallery Cricket photos IPL 2023 KKR batter Mandeep Singh overcomes Rohit Sharma to bag an embarrassing IPL record
IPL 2023: ಶೂನ್ಯ ಸುತ್ತುವುದರಲ್ಲಿ ಹಿಟ್ಮ್ಯಾನ್ ರೋಹಿತ್ರನ್ನೇ ಹಿಂದಿಕ್ಕಿದ ಕೆಕೆಆರ್ ಬ್ಯಾಟರ್..!
IPL 2023: ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಡಕೌಟ್ ಆದ ಆಟಗಾರ ಎಂಬ ಕೆಟ್ಟ ದಾಖಲೆಯನ್ನು ಯುವ ಆಟಗಾರ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
Updated on:Apr 07, 2023 | 3:06 PM

ಗುರುವಾರ (ಏಪ್ರಿಲ್ 6) ಈಡನ್ ಗಾರ್ಡನ್ನಲ್ಲಿ ನಡೆದ 9ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಆದರೆ ಇದೇ ಪಂದ್ಯದಲ್ಲಿ ಕೆಕೆಆರ್ ಬ್ಯಾಟರ್ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡರು.

ಆರ್ಸಿಬಿ ವಿರುದ್ಧ ಒನ್ ಡೌನ್ನಲ್ಲಿ ಬಂದ ಮಂದೀಪ್ ಸಿಂಗ್ ಡೇವಿಡ್ ವಿಲ್ಲಿ ಬೌಲಿಂಗ್ನ ಮೊದಲ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಡಕೌಟ್ ಆದ ಆಟಗಾರ ಎಂಬ ಕೆಟ್ಟ ದಾಖಲೆಯನ್ನು ಯುವ ಆಟಗಾರ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮಂದೀಪ್ ಐಪಿಎಲ್‌ನಲ್ಲಿ ಇದುವರೆಗೆ 15 ಬಾರಿ ಡಕ್ ಆಗಿದ್ದಾರೆ.

ಈ ಅನುಕ್ರಮದಲ್ಲಿ ಅವರು ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಹಿಂದಿಕ್ಕಿದ್ದಾರೆ. ಮುಂಬೈ ನಾಯಕ ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ 223 ಪಂದ್ಯಗಳಲ್ಲಿ 14 ಬಾರಿ ಡಕ್ ಆಗಿದ್ದಾರೆ.

ಅದೇ ಸಮಯದಲ್ಲಿ, ದಿನೇಶ್ ಕಾರ್ತಿಕ್ 209 ಪಂದ್ಯಗಳಲ್ಲಿ 14 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಇನ್ನು ಮಂದೀಪ್ ಸಿಂಗ್ ಕೇವಲ 97 ಇನ್ನಿಂಗ್ಸ್‌ಗಳಲ್ಲಿ 15 ಬಾರಿ ಡಕ್ ಔಟ್ ಆಗುವುದರೊಂದಿಗೆ ಈ ಬೇಡದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಅತಿ ಹೆಚ್ಚು ಬಾರಿ ಡಕೌಟ್ ಆದ ಆಟಗಾರರ ಪಟ್ಟಿಯಲ್ಲಿ ಟಾಪ್-10 ರಲ್ಲಿ 8 ಭಾರತೀಯ ಆಟಗಾರರಿದ್ದಾರೆ ಎಂಬುದು ಗಮನಾರ್ಹ. ಸ್ಟಾರ್ ಆಟಗಾರರಾದ ಪಿಯೂಷ್ ಚಾವ್ಲಾ, ಹರ್ಭಜನ್ ಸಿಂಗ್, ಪಾರ್ಥಿವ್ ಪಟೇಲ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್ ಈ ಪಟ್ಟಿಯಲ್ಲಿದ್ದಾರೆ.

ಈ ಪಂದ್ಯದ ಬಗ್ಗೆ ಮಾತನಾಡುವುದಾದರೆ ಕೋಲ್ಕತ್ತಾ 81 ರನ್‌ಗಳಿಂದ ಗೆದ್ದು ಸೀಸನ್ನ ಮೊದಲ ಜಯವನ್ನು ಗಳಿಸಿತು. 205 ರನ್ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಬೆಂಗಳೂರು ತಂಡಕ್ಕೆ ಕೋಲ್ಕತ್ತಾದ ಸ್ಪಿನ್ನರ್ಗಳ ದಾಳಿಗೆ ಮಂಕಾಗಿ ಹೋದರು. ಅಂತಿಮವಾಗಿ ಆರ್ಸಿಬಿ 123 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿತು.
Published On - 3:04 pm, Fri, 7 April 23



















