- Kannada News Photo gallery Cricket photos Kannada News | Last year we did a favour to RCB so hopefully, we get this year: Rohit Sharma
IPL 2023: ಕಳೆದ ವರ್ಷ ನಾವು RCBಗೆ ಸಹಾಯ ಮಾಡಿದ್ದೆವು, ಈ ಸಲ ಅವರು ಮಾಡ್ತಾರೆ: ರೋಹಿತ್ ಶರ್ಮಾ
IPL 2023 Kannada: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ 69ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು.
Updated on: May 21, 2023 | 10:13 PM

IPL 2023: ಐಪಿಎಲ್ನ 70ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದೆ. ಈ ಪಂದ್ಯವು ಆರ್ಸಿಬಿ ಪಾಲಿಗೆ ಎಷ್ಟು ನಿರ್ಣಾಯಕವೊ, ಮುಂಬೈ ಇಂಡಿಯನ್ಸ್ ಪಾಲಿಗೂ ಅಷ್ಟೇ ನಿರ್ಣಾಯಕ.

ಏಕೆಂದರೆ ಈ ಪಂದ್ಯದಲ್ಲಿ ಆರ್ಸಿಬಿ ತಂಡ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸಲಿದೆ. ಒಂದು ವೇಳೆ ಆರ್ಸಿಬಿ ತಂಡ ಸೋತರೆ 16 ಪಾಯಿಂಟ್ಸ್ನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ.

ಹೀಗಾಗಿಯೇ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಆರ್ಸಿಬಿ ತಂಡಕ್ಕೆ ಮಾಡಿದ ಹಳೆಯ ಸಹಾಯವನ್ನು ನೆನಪಿಸಿ ಕಿಚಾಯಿಸಿದ್ದಾರೆ. ಅಂದರೆ ಕಳೆದ ಸೀಸನ್ನಲ್ಲೂ ಆರ್ಸಿಬಿ ಕೊನೆಯ ಹಂತದಲ್ಲಿ ಪ್ಲೇಆಫ್ ಪ್ರವೇಶಿಸಿತ್ತು. ಅದು ಕೂಡ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ನೆರವಿನ ಮೂಲಕ ಎಂಬುದು ವಿಶೇಷ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ 69ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದ ಪರಿಣಾಮ RCB ಪ್ಲೇಆಫ್ ಪ್ರವೇಶಿಸಿತ್ತು.

ಒಂದು ವೇಳೆ ಕಳೆದ ಸೀಸನ್ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತಿದ್ದರೆ 16 ಪಾಯಿಂಟ್ಸ್ನೊಂದಿಗೆ ನೆಟ್ ರನ್ ರೇಟ್ನಲ್ಲಿ ಆರ್ಸಿಬಿಯನ್ನು ಹಿಂದಿಕ್ಕಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಪ್ರವೇಶಿಸುತ್ತಿತ್ತು. ಇದೀಗ ಅಂದು ಮಾಡಿದ ಸಹಾಯವನ್ನು ರೋಹಿತ್ ಶರ್ಮಾ ನೆನಪಿಸಿದ್ದಾರೆ.

ಎಸ್ಆರ್ಹೆಚ್ ವಿರುದ್ಧ ಜಯ ಸಾಧಿಸಿದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಕಳೆದ ಬಾರಿ ನಾವು ಆರ್ಸಿಬಿಗೆ ದೊಡ್ಡ ಸಹಾಯವನ್ನು ಮಾಡಿದ್ದೆವು. ಈ ಬಾರಿ ನಮಗೆ ಆರ್ಸಿಬಿ ಕಡೆಯಿಂದ ನಮಗೆ ಬೇಕಾದ ಫಲಿತಾಂಶ ಸಿಗಲಿದೆ ಎಂಬ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಅಂದರೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ ಸೋತು, ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲೇಆಫ್ ಅವಕಾಶ ಮಾಡಿಕೊಡಲಿದೆ ಎಂಬಾರ್ಥದಲ್ಲಿ ರೋಹಿತ್ ಶರ್ಮಾ ಹೇಳಿರುವುದು ವಿಶೇಷ.




