ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ತಂಡವೆಂದರೆ ಅದು ಮುಂಬೈ ಇಂಡಿಯನ್ಸ್. ಈ ತಂಡವನ್ನು ಐದು ಬಾರಿ ಚಾಂಪಿಯನ್ ಆಗಿಸಿದ ಶ್ರೇಯ ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಸಲ್ಲುತ್ತದೆ. ಆದರೆ ಇದೇ ರೋಹಿತ್ ಶರ್ಮಾ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಯಾರೂ ಮಾಡದ ಶೂನ್ಯ ದಾಖಲೆಯೊಂದನ್ನು ಬರೆದಿದ್ದಾರೆ.
ವಾಸ್ತವವಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ರೋಹಿತ್ ಶರ್ಮಾ ಅವರ ಹೆಸರು ಟಾಪ್ 5 ರಲ್ಲಿದೆ. ಆದರೆ ಇದರೊಂದಿಗೆ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪೈಕಿ ಹಿಟ್ಮ್ಯಾನ್ಗೆ ಅಗ್ರಸ್ಥಾನ ಸಿಕ್ಕಿದೆ.
ಐಪಿಎಲ್‌ನಲ್ಲಿ ಇದುವರೆಗೆ ಆಡಿರುವ 222 ಇನ್ನಿಂಗ್ಸ್ಗಳಲ್ಲಿ ರೋಹಿತ್ ಶರ್ಮಾ 14 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಹೀಗಾಗಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಯಲ್ಲಿ ಮನದೀಪ್ ಸಿಂಗ್ ಜೊತೆಗೆ ರೋಹಿತ್ ಶರ್ಮಾ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಇದಲ್ಲದೆ ಕಳೆದ ಕಳೆದ 5 ಸೀಸನ್‌ಗಳಲ್ಲಿ ರೋಹಿತ್ ಶರ್ಮಾ 30 ಕ್ಕಿಂತ ಕಡಿಮೆ ಸರಾಸರಿಯಲ್ಲಿ ರನ್ ಗಳಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಈ ಆಟಗಾರನ ಸ್ಟ್ರೈಕ್ ರೇಟ್ 130ಕ್ಕಿಂತ ಕಡಿಮೆಯಿದೆ. ಕಳೆದ ವರ್ಷದ ಬಗ್ಗೆ ಮಾತನಾಡುವುದಾದರೆ, ರೋಹಿತ್ 19.14 ಸರಾಸರಿಯಲ್ಲಿ ಕೇವಲ 268 ರನ್ ಮಾತ್ರ ಬಾರಿಸಿದ್ದರು.
ಹೀಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಬೇಡದ ದಾಖಲೆ ಬರೆದಿರುವ ರೋಹಿತ್, ಇದೇ ಟೂರ್ನಿಯಲ್ಲಿ ಇನ್ನೊಂದು ಮಹತ್ವದ ದಾಖಲೆ ಕೂಡ ಬರೆದಿದ್ದಾರೆ. ವಾಸ್ತವವಾಗಿ ಈ ಲೀಗ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಮೊದಲ ಸ್ಥಾನದಲ್ಲಿದ್ದಾರೆ. ಐಪಿಎಲ್‌ನ ಎಲ್ಲಾ ಸೀಸನ್‌ಗಳನ್ನು ಆಡಿರುವ ರೋಹಿತ್ ಇದುವರೆಗೆ 178.6 ಕೋಟಿ. ರೂ.ಗಳನ್ನು ಸಂಪಾದಿಸಿದ್ದಾರೆ.
Published On - 12:51 pm, Wed, 29 March 23