AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಇನ್ಮುಂದೆ ಇರುವುದು RCB ತಂಡದ ಅಸಲಿ ಆಟ..!

IPL 2023 Kannada: ಆರ್​ಸಿಬಿ ತಂಡ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯಗಳು ನಡೆದಿರುವುದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಅಂದರೆ ಈಗಾಗಲೇ ಆರ್​ಸಿಬಿ ತಂಡದ ಹೋಮ್ ​ಗ್ರೌಂಡ್​ ಪಂದ್ಯಗಳು ಬಹುತೇಕ ಪೂರ್ಣಗೊಂಡಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 27, 2023 | 8:38 PM

IPL 2023: ಐಪಿಎಲ್​ನ ಮೊದಲಾರ್ಧ ಪೂರ್ಣಗೊಂಡು ಇದೀಗ ದ್ವಿತಿಯಾರ್ಧ ಆರಂಭವಾಗಿದೆ. ಮೊದಲಾರ್ಧದಲ್ಲಿ 7 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿದ್ದ ಆರ್​ಸಿಬಿ ತಂಡವು ದ್ವಿತಿಯಾರ್ಧದ ಮೊದಲ ಪಂದ್ಯದಲ್ಲೇ ಸೋಲನುಭವಿಸಿದೆ.

1 / 7
ವಿಶೇಷ ಎಂದರೆ ಆರ್​ಸಿಬಿ ತಂಡ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯಗಳು ನಡೆದಿರುವುದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಅಂದರೆ ಈಗಾಗಲೇ ಆರ್​ಸಿಬಿ ತಂಡದ ಹೋಮ್​ಗ್ರೌಂಡ್​ ಪಂದ್ಯಗಳು ಬಹುತೇಕ ಪೂರ್ಣಗೊಂಡಿದೆ. ಇನ್ನು ಉಳಿದಿರುವುದು ಗುಜರಾತ್ ಟೈಟಾನ್ಸ್ ವಿರುದ್ಧದ ಏಕೈಕ ಪಂದ್ಯ ಮಾತ್ರ.

2 / 7
ಅಂದರೆ ಆರ್​ಸಿಬಿ ತಂಡವು ಇನ್ನು ಆಡಬೇಕಿರುವುದು ಎದುರಾಳಿಗಳ ಹೋಮ್​ ಗ್ರೌಂಡ್​ನಲ್ಲಿ. ಅದರಂತೆ ಮುಂದಿನ 6 ಪಂದ್ಯಗಳಲ್ಲಿ 5 ಮ್ಯಾಚ್​ಗಳನ್ನು ಆರ್​ಸಿಬಿ ಎದುರಾಳಿಗಳ ತವರು ಪಿಚ್​ನಲ್ಲಿ ಆಡಬೇಕಿದೆ.

3 / 7
ಇತ್ತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 6 ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ 3 ಪಂದ್ಯಗಳನ್ನು ಮಾತ್ರ. ಅಂದರೆ ತವರು ಮೈದಾನದ ಸಂಪೂರ್ಣ ಲಾಭ ಪಡೆಯುವಲ್ಲಿ ಆರ್​ಸಿಬಿ ತಂಡ ವಿಫಲವಾಗಿದೆ ಎಂದೇ ಹೇಳಬಹುದು.

4 / 7
ಇದೀಗ ಆರ್​ಸಿಬಿ ಎದುರಾಳಿಗಳ ತವರು ಮೈದಾನದಲ್ಲಿ 5 ಪಂದ್ಯಗಳನ್ನಾಡಬೇಕಿದೆ. ಈ ಪಂದ್ಯಗಳಲ್ಲಿ ಗೆಲುವು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್​, ಮಾನ್​ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಏಕಾನ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಬೇಕಿದೆ. ಈ 3 ಮೈದಾನಗಳಲ್ಲಿ ಅಲ್ಲಿನ ಸ್ಥಳೀಯ ತಂಡಗಳಿಗೆ ಭರಪೂರ ಬೆಂಬಲ ವ್ಯಕ್ತವಾಗಲಿದೆ.

5 / 7
ಇದಲ್ಲದೆ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಹೈದರಾಬಾದ್​ನಲ್ಲಿ ಎಸ್​ಆರ್​ಹೆಚ್ ತಂಡವನ್ನು ಎದುರಿಸಲಿದೆ. ಅಂದರೆ ಎದುರಾಳಿ ತಂಡಗಳ ಮೈದಾನಗಳಲ್ಲಿ RCB ತಂಡದ ಅಸಲಿ ಆಟ ಅನಾವರಣಗೊಳ್ಳಲಿದೆ.

6 / 7
ಇತ್ತ ತವರು ಮೈದಾನದಲ್ಲೇ ಕಳಪೆ ಆಟ ಪ್ರದರ್ಶಿಸಿರುವ ಆರ್​ಸಿಬಿ ಮುಂದಿನ 6 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಪ್ಲೇಆಫ್ ಪ್ರವೇಶಿಸಬಹುದು. ಹೀಗಾಗಿಯೇ ಆರ್​ಸಿಬಿ ಪಾಲಿಗೆ ಮುಂದಿನ ಪಂದ್ಯಗಳು ಒಂದಾರ್ಥದಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ಎಂದೇ ಹೇಳಬಹುದು.

7 / 7
Follow us
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ

ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ

‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ

ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ

ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ

ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ

ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ

ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್

ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ