Updated on: May 22, 2023 | 5:06 PM
ಆರ್ಸಿಬಿ ಹಾಗೂ ಗುಜರಾತ್ ನಡುವಿನ ಮುಖಾಮುಖಿ ಬಳಿಕ ಈ ಐಪಿಎಲ್ನ ಲೀಗ್ ಹಂತ ಮುಗಿದಿದ್ದು, ಪ್ರತಿ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಅನೇಕ ದಾಖಲೆಗಳು ಸೃಷ್ಟಿಯಾಗಿವೆ. ಆದರೆ ಈ ಸೀಸನ್ನಲ್ಲಿ ಸೃಷ್ಟಿಯಾದ ಅತಿ ಹೆಚ್ಚು ಶತಕಗಳ ದಾಖಲೆ ಕಳೆದ 15 ಆವೃತ್ತಿಗಳ ದಾಖಲೆಯನ್ನು ಪುಡಿ ಪುಡಿಗಟ್ಟಿದೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಗಿಲ್ ಶತಕ ಬಾರಿಸುವುದರೊಂದಿಗೆ ಈ ಆವೃತ್ತಿಯ 11ನೇ ಶತಕವನ್ನು ದಾಖಲು ಮಾಡಿದ್ದರು. ಇದರೊಂದಿಗೆ ಒಂದು ಸೀಸನ್ನಲ್ಲಿ ದಾಖಲಾದ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಈ ಆವೃತ್ತಿ ಪುಡಿಗಟ್ಟಿದೆ. ಹಾಗಿದ್ದರೆ ಈ ಆವೃತ್ತಿಯಲ್ಲಿ ಶತಕ ಸಿಡಿಸಿದ ಆಟಗಾರರ ಪಟ್ಟಿಯನ್ನು ನೋಡುವುದಾದರೆ..
ಹ್ಯಾರಿ ಬ್ರೂಕ್: ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಎಸ್ಆರ್ಹೆಚ್ ಬ್ಯಾಟರ್ ಹ್ಯಾರಿ ಬ್ರೂಕ್ ಕೇವಲ 55 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಐಪಿಎಲ್ 2023 ಟೂರ್ನಿಯ ಮೊತ್ತ ಮೊದಲ ಶತಕವಾಗಿತ್ತು.
ವೆಂಕಟೇಶ್ ಅಯ್ಯರ್: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತಂಡದ ಸ್ಪೋಟಕ ಬ್ಯಾಟ್ಸ್ಮನ್ ವೆಂಕಟೇಶ್ ಅಯ್ಯರ್ 49 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 5 ಫೋರ್ನೊಂದಿಗೆ ಭರ್ಜರಿ ಶತಕ ಪೂರೈಸಿದ್ದರು.
ಯಶಸ್ವಿ ಜೈಸ್ವಾಲ್: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 1000ನೇ ಪಂದ್ಯದಲ್ಲಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ 62 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 16 ಫೋರ್ನೊಂದಿಗೆ 124 ರನ್ ಚಚ್ಚಿದರು.
ಸೂರ್ಯಕುಮಾರ್ ಯಾದವ್: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ ಅಜೇಯ 103 ರನ್ ಸಿಡಿಸಿದ್ದರು.
ಪ್ರಭ್ಸಿಮ್ರಾನ್ ಸಿಂಗ್: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 59ನೇ ಪಂದ್ಯದಲ್ಲಿ ಪಂಜಾಬ್ ಆರಂಭಿಕ ಪ್ರಭ್ಸಿಮ್ರಾನ್ ಸಿಂಗ್ 65 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 103 ರನ್ ಬಾರಿಸಿದ್ದರು.
ಶುಭ್ಮನ್ ಗಿಲ್: ಐಪಿಎಲ್ನ 62ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶುಭ್ಮನ್ ಗಿಲ್ 58 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 13 ಫೋರ್ನೊಂದಿಗೆ 101 ರನ್ ಬಾರಿಸಿದ್ದರು.
ಹೆನ್ರಿಕ್ ಕ್ಲಾಸೆನ್: ಹೈದರಾಬಾದ್ನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡದ ಹೆನ್ರಿಕ್ ಕ್ಲಾಸೆನ್ 49 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ ಸಿಡಿಲಬ್ಬರದ ಶತಕ ಸಿಡಿಸಿದರು.
ವಿರಾಟ್ ಕೊಹ್ಲಿ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ ಕೊಹ್ಲಿ 63 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬಿರುಸಿನಿಂದ ಬ್ಯಾಟಿಂಗ್ ಮಾಡಿದ ಕ್ಯಾಮರೂನ್ ಗ್ರೀನ್ 48 ಎಸತೆಗಳನ್ನು ಎದುರಿಸಿ ಭರ್ಜರಿ ತಲಾ ಎಂಟು ಸಿಕ್ಸರ್ ಮತ್ತು ಬೌಂಡರಿಗಳ ಸಮೇತ ಅಜೇಯ 100 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 60 ಎಸೆತಗಳಲ್ಲಿ ಶತಕ ಪೂರೈಸಿದರು.
ಆರ್ಸಿಬಿ ವಿರುದ್ಧ ಶುಭ್ಮನ್ ಗಿಲ್ ಕೇವಲ 52 ಎಸೆತಗಳಲ್ಲಿ 5 ಫೋರ್, 8 ಸಿಕ್ಸರ್ ಸಿಡಿಸಿ ಅಜೇಯ 104 ರನ್ ಚಚ್ಚಿದರು.