ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಎಡಗೈ ವೇಗಿ ಯಶ್ ದಯಾಳ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. 20 ಲಕ್ಷ ರೂ. ಮೂಲ ಬೆಲೆ ಘೋಷಿಸಿದ್ದ ದಯಾಳ್ ಖರೀದಿಗೆ ಆರ್ಸಿಬಿ ಆರಂಭದಲ್ಲೇ ಆಸಕ್ತಿ ತೋರಿಸಿತು.
ಆದರೆ ಅತ್ತ ಕಡೆಯಿಂದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಿಂದ ಪೈಪೋಟಿ ಎದುರಿಸಬೇಕಾಯಿತು. ಇದಾಗ್ಯೂ ದಯಾಳ್ ಖರೀದಿಗಾಗಿ ಪಟ್ಟು ಬಿಡದ ಆರ್ಸಿಬಿ ಬರೋಬ್ಬರಿ 5 ಕೋಟಿ ರೂ. ಪಾವತಿಸಿದೆ.
ಈ ಮೂಲಕ ಗುಜರಾತ್ ಟೈಟಾನ್ಸ್ ತಂಡದ ಮಾಜಿ ಆಟಗಾರನನ್ನು ಆರ್ಸಿಬಿ ತಂಡವು ಬರೋಬ್ಬರಿ 5 ಕೋಟಿ ರೂ. ನೀಡಿ ಖರೀದಿಸಿ ಅಚ್ಚರಿ ಮೂಡಿಸಿದೆ. ಅದರಲ್ಲೂ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಬೌಲರ್ಗೆ ಐದು ಕೋಟಿ ನೀಡಬೇಕಿತ್ತಾ ಎಂಬ ಪ್ರಶ್ನೆಯನ್ನು ಆರ್ಸಿಬಿ ಅಭಿಮಾನಿಗಳು ಮುಂದಿಡುತ್ತಿದ್ದಾರೆ.
ಏಕೆಂದರೆ ಕಳೆದ ಸೀಸನ್ನಲ್ಲಿ ಯಶ್ ದಯಾಳ್ ಅವರ ಒಂದೇ ಓವರ್ನಲ್ಲಿ ರಿಂಕು ಸಿಂಗ್ 5 ಸಿಕ್ಸ್ಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ಐಪಿಎಲ್ 14 ಪಂದ್ಯಗಳನ್ನಾಡಿರುವ ದಯಾಳ್ ಕಬಳಿಸಿರುವುದು ಕೇವಲ 13 ವಿಕೆಟ್ಗಳು ಮಾತ್ರ. ಇಂತಹ ಕಳಪೆ ಪ್ರದರ್ಶನ ನೀಡಿದ ಆಟಗಾರನಿಗೆ 5 ಕೋಟಿ ರೂ. ನೀಡಿ ಆರ್ಸಿಬಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವೈಶಾಕ್ ವಿಜಯ್‌ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್.
Published On - 6:20 pm, Tue, 19 December 23