AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಸಮರಾಭ್ಯಾಸ ಶುರು ಮಾಡಿದ ಸಿಎಸ್​ಕೆ, ಚೆನ್ನೈಗೆ ಬಂದಿಳಿದ ಆಟಗಾರರು; ಧೋನಿ ಮಿಸ್ಸಿಂಗ್

IPL 2024: ಮುಂಬರುವ ಟೂರ್ನಿಗೆ ಇಂದಿನಿಂದಲೇ ಅಭ್ಯಾಸ ಶುರು ಮಾಡಿರುವ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಚೆನ್ನೈನಲ್ಲಿ ವಿಶೇಷ ಶಿಬಿರ ಆಯೋಜಿಸಿದೆ. ಶುಕ್ರವಾರ ಕೆಲವು ಆಟಗಾರರು ಈ ಶಿಬಿರಕ್ಕೆ ಆಗಮಿಸಿದ್ದಾರೆ.

ಪೃಥ್ವಿಶಂಕರ
|

Updated on: Mar 02, 2024 | 5:14 PM

Share
17ನೇ ಆವೃತ್ತಿಯ ಐಪಿಎಲ್ ಇದೇ ತಿಂಗಳ ಮಾರ್ಚ್ 22 ರಿಂದ ಪ್ರಾರಂಭವಾಗುತ್ತದೆ. ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ಮೂರು ವಾರಗಳಿಗಿಂತ ಕಡಿಮೆ ಸಮಯ ಉಳಿದಿದೆ.

1 / 8
ಹೀಗಾಗಿ ಮುಂಬರುವ ಟೂರ್ನಿಗೆ ಇಂದಿನಿಂದಲೇ ಅಭ್ಯಾಸ ಶುರು ಮಾಡಿರುವ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಚೆನ್ನೈನಲ್ಲಿ ವಿಶೇಷ ಶಿಬಿರ ಆಯೋಜಿಸಿದೆ. ಶುಕ್ರವಾರ ಕೆಲವು ಆಟಗಾರರು ಈ ಶಿಬಿರಕ್ಕೆ ಆಗಮಿಸಿದ್ದಾರೆ. ಪಿಟಿಐ ಇನ್‌ಪುಟ್ ಪ್ರಕಾರ, ಎಂಎಸ್ ಧೋನಿ ಯಾವಾಗ ಆಗಮಿಸುತ್ತಾರೆ ಎಂಬುದರ ಕುರಿತು ಯಾವುದೇ ದೃಢೀಕರಣವಿಲ್ಲ ಎಂದು ತಿಳಿದುಬಂದಿದೆ.

2 / 8
ನಿನ್ನೆಯಿಂದ ಆರಂಭವಾಗಿರುವ ಶಿಬಿರ ಇಂದು ಕೂಡ ಮುಂದುವರೆದಿದ್ದು, ಅದರಲ್ಲಿ ಸ್ಟಾರ್ ವೇಗಿ ದೀಪಕ್ ಚಹಾರ್ ಕೂಡ ಕಾಣಿಸಿಕೊಂಡರು. ಭಾರತೀಯ ಆಟಗಾರರ ಮೊದಲ ಬ್ಯಾಚ್ ಶುಕ್ರವಾರ ಶಿಬಿರವನ್ನು ತಲುಪಿದೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದರು.

3 / 8
ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಆಟಗಾರರು ಶಿಬಿರಕ್ಕೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ರಾಜವರ್ಧನ್ ಹಂಗರ್ಗೇಕರ್, ಪ್ರಶಾಂತ್ ಸೋಲಂಕಿ, ಅಜಯ್ ಮಂಡಲ್ ಮತ್ತು ದೀಪಕ್ ಚಹಾರ್ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

4 / 8
ಈ ಶಿಬಿರದಲ್ಲಿ ಎಲ್ಲರ ಕಣ್ಣು ದೀಪಕ್ ಚಹಾರ್ ಮೇಲಿರಲಿದೆ. ಏಕೆಂದರೆ ನಿರಂತರವಾಗಿ ಗಾಯಗಳಿಂದ ಬಸವಳಿದಿರುವ ಚಹಾರ್, ಡಿಸೆಂಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಮಧ್ಯದಲ್ಲಿಯೇ ತೊರೆದು ತಮ್ಮ ತಂದೆಯ ಆರೋಗ್ಯದ ಕಾರಣ ತವರಿಗೆ ವಾಪಸ್ಸಾಗಿದ್ದರು.

5 / 8
ಇದಾದ ಬಳಿಕ ಮತ್ತೆ ಗಾಯಗೊಂಡಿದ್ದ ಚಹಾರ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ರಿಹ್ಯಾಬ್​ಗೆ ಒಳಗಾಗಿದ್ದರು. ಪ್ರಸ್ತುತ ಫಿಟ್ ಆಗಿರುವ ಅವರು ಐಪಿಎಲ್‌ನಲ್ಲಿ ಅಬ್ಬರಿಸಲು ತಯಾರಿ ಶುರು ಮಾಡಿದ್ದಾರೆ. ಈ ಮೂಲಕ 2024 ರ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ಇರಾದೆಯೂ ಚಹಾರ್​ಗಿದೆ.

6 / 8
ಭಾರತದ ಆಟಗಾರರು ಶಿಬಿರದಲ್ಲಿ ಕಾಣಸಿಕೊಂಡರೂ, ತಂಡದ ನಾಯಕ ಧೋನಿ ಮಾತ್ರ ಇನ್ನು ಚೆನ್ನೈ ತಲುಪಿಲ್ಲ. ಪ್ರಸ್ತುತ ಧೋನಿ ಯಾವಾಗ ಈ ಶಿಬಿರಕ್ಕೆ ಸೇರುತ್ತಾರೆ ಎಂಬುದರ ಕುರಿತು ಯಾವುದೇ ಖಚಿತವಾದ ಸುದ್ದಿ ಇನ್ನೂ ಬಂದಿಲ್ಲ ಎಂದು ಪಿಟಿಐ ತನ್ನ ಮಾಹಿತಿಯಲ್ಲಿ ತಿಳಿಸಿದೆ.

7 / 8
ಚೆನ್ನೈ ಸೂಪರ್ ಕಿಂಗ್ಸ್ ವೇಳಾಪಟ್ಟಿ: ಮಾರ್ಚ್ 22 ರಂದು ಆರ್​ಸಿಬಿ ತಂಡವನ್ನು ಎದುರಿಸಲಿರುವ ಸಿಎಸ್​ಕೆ, ಮಾರ್ಚ್ 26 ರಂದು ಗುಜರಾತ್ ಟೈಟಾನ್ಸ್, ಮಾರ್ಚ್ 31 ರಂದು ದೆಹಲಿ ಕ್ಯಾಪಿಟಲ್ಸ್, ಹಾಗೂ ಏಪ್ರಿಲ್ 5 ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಾಡಲಿದೆ.

8 / 8
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌

ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?

ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ

ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?

ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!

ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು

ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!

ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ

ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್