ಇದಾಗ್ಯೂ ಈ ಮೈದಾನದಲ್ಲಿ ಟಾಸ್ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕೆ ಸಾಕ್ಷಿಯೇ ಸಿಎಸ್ಕೆ ಗೆದ್ದಿರುವ ಪಂದ್ಯಗಳ ಸಂಖ್ಯೆ. ಅಂದರೆ ಚೆನ್ನೈನಲ್ಲಿ ಧೋನಿ ಪಡೆ ಗೆದ್ದಿರುವ 46 ಪಂದ್ಯಗಳಲ್ಲಿ ಸಿಎಸ್ಕೆ 30 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿ ಇಲ್ಲಿ ಸಿಎಸ್ಕೆ ತಂಡ ಮೇಲುಗೈ ಹೊಂದಿದ್ದರೂ, ಟಾಸ್ ಅದೃಷ್ಟ ಕೈ ಹಿಡಿದರೆ ಅಚ್ಚರಿಯ ಫಲಿತಾಂಶವನ್ನು ನಿರೀಕ್ಷಿಸಬಹುದು.