AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ನಿದ್ದೆಯಿಂದ ಎದ್ದೇಳ್ರೋ… ಭಜ್ಜಿ ಗೂಗ್ಲಿಗೆ ಪಾಕ್ ಫ್ಯಾನ್​ ಬೌಲ್ಡ್

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್ ) ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಜರುಗಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ 17ನೇ ಆವೃತ್ತಿಯ ಐಪಿಎಲ್​ಗೆ (IPL 2024) ಚಾಲನೆ ದೊರೆಯಲಿದೆ.

TV9 Web
| Edited By: |

Updated on: Mar 16, 2024 | 8:08 AM

Share
ವಿಶ್ವದೆಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರೇಝ್ ಕಾವೇರುತ್ತಿದೆ. ಇದಕ್ಕೆ ಪಕ್ಕದ ಪಾಕಿಸ್ತಾನ್ ಕೂಡ ಹೊರತಾಗಿಲ್ಲ. ಐಪಿಎಲ್​ ತಂಡಗಳನ್ನು ತಮ್ಮ ನೆಚ್ಚಿನ ಟೀಮ್​ಗಳಾಗಿ ಆಯ್ಕೆ ಮಾಡಿಕೊಂಡಿರುವ ಹಲವು ಪಾಕ್ ಕ್ರಿಕೆಟ್​ ಪ್ರೇಮಿಗಳಿದ್ದಾರೆ. ಪಾಕಿಸ್ತಾನ್ ಆಟಗಾರರು ಕೂಡ ಐಪಿಎಲ್ ಆಡಬೇಕೆಂಬುದು ಅವರ ಅಂಬೋಣ. ಆದರೆ ಈ ಆಸೆಗೆ ಬಿಸಿಸಿಐ ಕಳೆದ 15 ವರ್ಷಗಳಿಂದ  ತಣ್ಣೀರೆರಚುತ್ತಾ ಬಂದಿದೆ.

1 / 6
ಇದೀಗ ಐಪಿಎಲ್ ಸೀಸನ್ 17 ಕ್ಕೂ ಮುನ್ನ ಮತ್ತೊಮ್ಮೆ ಪಾಕ್ ಕ್ರಿಕೆಟ್ ಪ್ರೇಮಿಯೊಬ್ಬರು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅದು ಕೂಡ ಪಾಕಿಸ್ತಾನದ ಸ್ಟಾರ್ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸಿನೊಂದಿಗೆ ಎಂಬುದು ವಿಶೇಷ.

2 / 6
ಈ ಬಗ್ಗೆ ಅಲಿ ರಾಝ ಆಲಂ ಎಂಬ ವ್ಯಕ್ತಿಯು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಆಝಂ ಅವರನ್ನು ಜೊತೆಯಾಗಿ ನೋಡುವ ಆಸೆಯಿದೆ. ಇದು ಅನೇಕ ಭಾರತೀಯ ಮತ್ತು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳ ಬಹುದಿನಗಳ ಕನಸು ಎಂದು ಬರೆದುಕೊಂಡಿದ್ದಾರೆ.

3 / 6
ಅಷ್ಟೇ ಅಲ್ಲದೆ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಜಸ್​ಪ್ರೀತ್ ಬುಮ್ರಾ ಜೊತೆ ಶಾಹೀನ್ ಅಫ್ರಿದಿ, ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಜೊತೆ ಮೊಹಮ್ಮದ್ ರಿಝ್ವಾನ್ ಕಣಕ್ಕಿಳಿಯುವುದನ್ನು ಎದುರು ನೋಡುತ್ತಿರುವುದಾಗಿ ಅಲಿ ರಾಝ ಆಲಂ ತಿಳಿಸಿದ್ದಾರೆ.

4 / 6
ಈ ಪೋಸ್ಟ್ ಟೀಮ್ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಕಣ್ಣಿಗೆ ಬಿದ್ದಿದೆ. ಅಲ್ಲದೆ ಇದಕ್ಕೆ ಭಜ್ಜಿ ಗೂಗ್ಲಿ ರಿಪ್ಲೈ ಕೂಡ ನೀಡಿದ್ದಾರೆ. ರಾಝ ಅವರ ಪೋಸ್ಟ್​ಗೆ ಪ್ರತ್ಯುತ್ತರ ನೀಡಿರುವ ಹರ್ಭಜನ್ ಸಿಂಗ್, ಭಾರತೀಯರಿಗೆ ಇಂತಹ ಯಾವುದೇ ಕನಸುಗಳಿಲ್ಲ. ದಯವಿಟ್ಟು ನೀವು ಕನಸು ಕಾಣುವುದನ್ನು ನಿಲ್ಲಿಸಿ ಎಂದು ಟ್ರೋಲ್ ಮಾಡಿದ್ದಾರೆ.

5 / 6
ಈ ಮೂಲಕ ವಿರಾಟ್ ಕೊಹ್ಲಿ-ಬಾಬರ್, ಬುಮ್ರಾ-ಶಾಹೀನ್, ಧೋನಿ-ರಿಝ್ವಾನ್ ಜೋಡಿಗಳನ್ನು ಐಪಿಎಲ್​ನಲ್ಲಿ ಜೊತೆಯಾಗಿ ನೋಡಲು ಭಾರತ-ಪಾಕಿಸ್ತಾನ್ ಕ್ರಿಕೆಟ್​ ಪ್ರೇಮಿಗಳು ಕನಸು ಕಾಣುತ್ತಿದ್ದಾರೆ ಎಂದ ಅಭಿಮಾನಿಗೆ, ನೀವು ಕನಸು ಕಾಣುವುದನ್ನು ನಿಲ್ಲಿಸಿ ನಿದ್ದೆಯಿಂದ ಎದ್ದೇಳಿ ಎಂದು ಹರ್ಭಜನ್ ಸಿಂಗ್ ಖಡಕ್ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಭಾರತೀಯರಿಗೆ ಅಂತಹ ಯಾವುದೇ ಕನಸುಗಳಿಲ್ಲ ಎಂದಿದ್ದಾರೆ. ಇದೀಗ ಭಜ್ಜಿಯ ಗೂಗ್ಲಿ ರಿಪ್ಲೈ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

6 / 6
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ

ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!

ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು

ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್

ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 

VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!

ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!

ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​