IPL 2024: ಐಪಿಎಲ್ 2024 ರ 46 ಪಂದ್ಯಗಳು ಮುಗಿದಿವೆ. ಈಗಾಗಲೇ ಆರ್ಸಿಬಿ ತಂಡವು 10 ಪಂದ್ಯಗಳನ್ನಾಡಿದ್ದು, ಈ ವೇಳೆ 3 ಮ್ಯಾಚ್ಗಳಲ್ಲಿ ಜಯ ಸಾಧಿಸಿ 6 ಅಂಕಗಳನ್ನು ಪಡೆದುಕೊಂಡಿದೆ. ಇದಾಗ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಆರ್ಸಿಬಿ ತಂಡದ ನೆಟ್ ರನ್ ರೇಟ್. 6 ಅಂಕಗಳನ್ನು ಹೊಂದಿರುವ ಇತರೆ ತಂಡಗಳಿಗಿಂತ ಆರ್ಸಿಬಿ ಕಡಿಮೆ ನೆಟ್ ರನ್ ರೇಟ್ ಹೊಂದಿದ್ದು, ಹೀಗಾಗಿ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ. ಅದರಂತೆ ನೂತನ ಪಾಯಿಂಟ್ಸ್ ಟೇಬಲ್ ಈ ಕೆಳಗಿನಂತಿದೆ...