ಇದರ ನಡುವೆ ಆರ್ಸಿಬಿ ಅಭಿಮಾನಿಯೊಬ್ಬರು ದೇವರ ಮೊರೆ ಹೋಗಿರುವುದನ್ನು ಕ್ಯಾಮೆರಾಮ್ಯಾನ್ ಸೆರೆ ಹಿಡಿದರು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಆರ್ಸಿಬಿ ದಿಢೀರ್ ಕುಸಿತಕ್ಕೊಳಗಾಗುತ್ತಿದ್ದಂತೆ ಅಭಿಮಾನಿಯೊಬ್ಬರು ದೇವರಲ್ಲಿ ಪ್ರಾರ್ಥಿಸುತ್ತಿರುವುದು ಕಂಡು ಬಂತು. ಇದೀಗ ಆರ್ಸಿಬಿ ಲೇಡಿ ಫ್ಯಾನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.