AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: RCB ತಂಡದಲ್ಲಿ KGF ಜೊತೆ ಯಶ್: ಈ ಸಲ ಕಪ್ ನಮ್ದೆ..!

IPL 2024 RCB: ಈ ಬಾರಿ ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ದುಬಾರಿ ಆಟಗಾರ ವೆಸ್ಟ್ ಇಂಡೀಸ್​ನ ಅಲ್ಝಾರಿ ಜೋಸೆಫ್. 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ವಿಂಡೀಸ್ ವೇಗಿಯನ್ನು ಆರ್​ಸಿಬಿ ಬರೋಬ್ಬರಿ 11.50 ಕೋಟಿ ರೂ. ನೀಡಿ ಖರೀದಿಸಿದೆ.

TV9 Web
| Edited By: |

Updated on: Dec 20, 2023 | 8:30 AM

Share
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 6 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಆರ್​ಸಿಬಿ 25 ಆಟಗಾರರ ಬಲಿಷ್ಠ ಬಳಗವನ್ನು ರೂಪಿಸಿದೆ. ಈ ಆರು ಆಟಗಾರರಲ್ಲಿ ಇಬ್ಬರಿಗಾಗಿ ಆರ್​ಸಿಬಿ ಬರೋಬ್ಬರಿ 16.50 ಕೋಟಿ ರೂ. ವ್ಯಯಿಸಿರುವುದು ವಿಶೇಷ.

1 / 8
ಅಂದರೆ ಈ ಬಾರಿ ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ದುಬಾರಿ ಆಟಗಾರ ವೆಸ್ಟ್ ಇಂಡೀಸ್​ನ ಅಲ್ಝಾರಿ ಜೋಸೆಫ್. 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ವಿಂಡೀಸ್ ವೇಗಿಯನ್ನು ಆರ್​ಸಿಬಿ ಬರೋಬ್ಬರಿ 11.50 ಕೋಟಿ ರೂ. ನೀಡಿ ಖರೀದಿಸಿದೆ.

2 / 8
ಹಾಗೆಯೇ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜು ಪಟ್ಟಿಯಲ್ಲಿದ್ದ ಭಾರತದ ವೇಗದ ಬೌಲರ್ ಯಶ್ ದಯಾಳ್ ಅವರನ್ನು 5 ಕೋಟಿ ರೂ. ನೀಡಿ ಆರ್​ಸಿಬಿ ತನ್ನದಾಗಿಸಿಕೊಂಡಿದೆ. ಆದರೆ ಇತ್ತ ಯಶ್ ದಯಾಳ್ ಅವರ ಆಯ್ಕೆಯೇ ಅಚ್ಚರಿ.

3 / 8
ಏಕೆಂದರೆ ಐಪಿಎಲ್​ನಲ್ಲಿ ಇದುವರೆಗೆ 14 ಪಂದ್ಯಗಳನ್ನಾಡಿರುವ ಯಶ್ ದಯಾಳ್ ಕಬಳಿಸಿರುವುದು ಕೇವಲ 13 ವಿಕೆಟ್​ಗಳನ್ನು ಮಾತ್ರ. ಇದಾಗ್ಯೂ 20 ಲಕ್ಷ ರೂ. ಮೂಲ ಬೆಲೆಯ ಆಟಗಾರನಿಗೆ 5 ಕೋಟಿ ರೂ. ನೀಡುವ ಮೂಲಕ ಆರ್​ಸಿಬಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

4 / 8
ಅತ್ತ ಫ್ರಾಂಚೈಸಿಯ ಈ ನಡೆಯನ್ನು ಆರ್​ಸಿಬಿ ಇನ್​ಸೈಡರ್ ಮಿಸ್ಟರ್ ನಾಗ್ಸ್​ ಖ್ಯಾತಿಯ ಡ್ಯಾನಿಶ್ ಸೇಠ್ ಕಿಚಾಯಿಸಿದ್ದಾರೆ. ಅದು ಕೂಡ ತಮ್ಮದೇ ದಾಟಿಯಲ್ಲಿ ತಮಾಷೆ ಮೂಲಕ ಎಂಬುದು ವಿಶೇಷ.

5 / 8
ಯಶ್ ದಯಾಳ್ ಆರ್​ಸಿಬಿಗೆ ಸೇರ್ಪಡೆಯಾಗುತ್ತಿದ್ದಂತೆ ಟ್ವೀಟ್ ಮಾಡಿರುವ ಡ್ಯಾನಿಶ್ ಸೇಠ್, ನಮ್ಮ ಬಳಿ KGF (ಕೊಹ್ಲಿ, ಗ್ಲೆನ್, ಫಾಫ್)  ಮತ್ತು ಯಶ್ ಇದ್ದಾರೆ. ಅಷ್ಟೇ...ಈ ಸಲ ಕಪ್ ನಮ್ದೆ ಎಂದು ಬರೆದುಕೊಂಡಿದ್ದಾರೆ.

6 / 8
ಇದೀಗ ಇನ್​ಸೈಡರ್ ನಾಗ್ಸ್​ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, KGF ಪಡೆಗೆ ಯಶ್ ಆಗಮನದೊಂದಿಗೆ ಆರ್​​ಸಿಬಿ ಕಪ್ ಗೆಲ್ಲಲಿದೆಯಾ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.

7 / 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.

8 / 8
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ

ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ

ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ