AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chris Gayle: RCB ಪರ ಮತ್ತೆ ಕಣಕ್ಕಿಳಿಯಲು ನಾನು ರೆಡಿ..!

IPL 2024: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದ ವೇಳೆ ಕ್ರಿಸ್ ಗೇಲ್ ಕಾಣಿಸಿಕೊಂಡಿದ್ದರು. ಸ್ಟೇಡಿಯಂ ಗ್ಯಾಲರಿಯಲ್ಲಿ ಕೂತು ಆರ್​ಸಿಬಿ ತಂಡವನ್ನು ಹುರಿದುಂಬಿಸಿದ ಗೇಲ್ ಆ ಬಳಿಕ ಡ್ರೆಸ್ಸಿಂಗ್​ ರೂಮ್​ಗೆ ತೆರಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಅಭಿನಂದಿಸಿದ್ದರು.

TV9 Web
| Edited By: |

Updated on: May 20, 2024 | 9:53 PM

Share
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಆಟಗಾರ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ (Chris Gayle) ನಾನು ಮತ್ತೆ ಆರ್​ಸಿಬಿ ಪರ ಕಣಕ್ಕಿಳಿಯಲು ರೆಡಿ ಎಂದಿದ್ದಾರೆ. ಆರ್​ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಿದ ಖುಷಿಯಲ್ಲಿ ಮಾತನಾಡಿದ ಗೇಲ್ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

1 / 6
ಈ ಬಗ್ಗೆ ಮಾತನಾಡಿದ ಕ್ರಿಸ್ ಗೇಲ್, ಈಗಲೂ ನಂಗೆ ಆರ್​ಸಿಬಿ ಜೆರ್ಸಿ ಕರೆಕ್ಟ್ ಆಗಿ ಫಿಟ್ ಆಗ್ತಿದೆ. ಬೇಕಿದ್ದರೆ ಹೇಳಿ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕೆ ಇಳಿಯಲು ನಾನುಂತು ರೆಡಿಯಿದ್ದೇನೆ ಎಂದಿದ್ದಾರೆ.

2 / 6
ಮೇಲ್ನೋಟಕ್ಕೆ ಕ್ರಿಸ್ ಗೇಲ್ ತಮಾಷೆಗೆ ಹೇಳಿದರೂ, ಅತ್ತ ವಿರಾಟ್ ಕೊಹ್ಲಿ ಕೂಡ ಕಂಬ್ಯಾಕ್ ಮಾಡುವಂತೆ ಸೂಚಿಸಿದ್ದಾರೆ. ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ನಲ್ಲಿ ಕಾಣಿಸಿಕೊಂಡ ಗೇಲ್​ ಜೊತೆ ಮಾತನಾಡಿದ ಕೊಹ್ಲಿ, ಮತ್ತೆ ಆರ್​ಸಿಬಿ ಪರ ಕಣಕ್ಕಿಳಿಯುವಂತೆ ವಿನಂತಿಸಿದ್ದಾರೆ.

3 / 6
ಕಾಕಾ, ಮುಂದಿನ ವರ್ಷ ಆರ್‌ಸಿಬಿ ತಂಡಕ್ಕೆ ಕಂಬ್ಯಾಕ್ ಮಾಡಿ. ಇದೀಗ ಐಪಿಎಲ್​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವಿದೆ. ನೀವು ಫೀಲ್ಡಿಂಗ್ ಮಾಡಬೇಕಾಗಿಲ್ಲ. ಈ ನಿಯಮವನ್ನು ನಿಮಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

4 / 6
ವಿರಾಟ್ ಕೊಹ್ಲಿಯ ಈ ಮನವಿಯನ್ನು ಗೇಲ್ ಸ್ವೀಕರಿಸುವ ಸಾಧ್ಯತೆಯಿಲ್ಲ. ಏಕೆಂದರೆ ವಿಂಡೀಸ್​ ದಾಂಡಿಗನಿಗೆ ಇದೀಗ 44 ವರ್ಷಗಳು. ಹೀಗಾಗಿ ಕಂಬ್ಯಾಕ್ ಮಾಡುವ ಸಾಧ್ಯತೆಯಿಲ್ಲ ಎಂದೇ ಹೇಳಬಹುದು.

5 / 6
ಕ್ರಿಸ್ ಗೇಲ್, ಆರ್​ಸಿಬಿ ಪರ ಒಟ್ಟು 91 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 5 ಭರ್ಜರಿ ಶತಕ ಹಾಗೂ 21 ಅರ್ಧಶತಕಗಳೊಂದಿಗೆ ಒಟ್ಟು 3420 ರನ್ ಗಳಿಸಿದ್ದಾರೆ. ಈ ಮೂಲಕ ಆರ್​ಸಿಬಿ ಪರ ಅತ್ಯಧಿಕ ರನ್ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಗೇಲ್ ಕಳೆದ ಸೀಸನ್ ಹಾಗೂ ಈ ಬಾರಿಯ​ ಐಪಿಎಲ್​ನಲ್ಲಿ ವಿಶ್ಲೇಷಣೆಗಾರನಾಗಿ ಕಾರ್ಯ ನಿರ್ವಹಿಸಿದ್ದರು.

6 / 6
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು

ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ

ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್

ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ

ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು