​Rinku Singh: ಐಪಿಎಲ್​ಗಿಂತ ಬಿಸಿಸಿಐ ಕಡೆಯಿಂದ ಹೆಚ್ಚಿನ ಸಂಭಾವೆನ ಪಡೆದ ರಿಂಕು ಸಿಂಗ್

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್) ಸೀಸನ್ 17 ರಲ್ಲಿ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕಳೆದ 5 ವರ್ಷಗಳಿಂದ ಕೆಕೆಆರ್ ಪರ ಆಡುತ್ತಿರುವ ರಿಂಕು ಸಿಂಗ್​ಗೆ IPL ನಲ್ಲಿ ಸಿಗುವ ಮೊತ್ತಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಬಿಸಿಸಿಐ ಘೋಷಿಸಿದೆ. ಅದು ಕೂಡ ಹೊಸ ಗುತ್ತಿಗೆ ಒಪ್ಪಂದದ ಮೂಲಕ ಎಂಬುದು ವಿಶೇಷ.

TV9 Web
| Updated By: ಝಾಹಿರ್ ಯೂಸುಫ್

Updated on: Mar 03, 2024 | 12:08 PM

ಬಿಸಿಸಿಐ ಇತ್ತೀಚೆಗೆ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿತ್ತು. 30 ಆಟಗಾರರನ್ನು ಒಳಗೊಂಡ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ರಿಂಕು ಸಿಂಗ್ ಕೂಡ ಸ್ಥಾನ ಪಡೆದಿದ್ದಾರೆ.

1 / 7
ಗ್ರೇಡ್-C ಗುತ್ತಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ರಿಂಕು ಸಿಂಗ್ ಅವರಿಗೆ ಬಿಸಿಸಿಐ ವಾರ್ಷಿಕ 1 ಕೋಟಿ ರೂ. ಸಂಭಾವನೆ ನೀಡಲಿದೆ. ವಿಶೇಷ ಎಂದರೆ ಇದು ರಿಂಕು ಅವರ ಐಪಿಎಲ್​ ವೇತನಕ್ಕಿಂತ ಹೆಚ್ಚು.

2 / 7
ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ರಿಂಕು ಸಿಂಗ್ ಪಡೆಯುತ್ತಿರುವ ಸಂಭಾವನೆ 55 ಲಕ್ಷ ರೂ. ಮಾತ್ರ. 2018 ರಿಂದ ಕೆಕೆಆರ್ ಪರ ಕಣಕ್ಕಿಳಿಯುತ್ತಿರುವ ರಿಂಕು ಕಳೆದ ಸೀಸನ್​ನ ಐಪಿಎಲ್​ನಲ್ಲಿ ಸಂಚಲ ಸೃಷ್ಟಿಸಿದ್ದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲೂ ಚಾನ್ಸ್ ಲಭಿಸಿತ್ತು.

3 / 7
ಅದರಂತೆ ಈ ಬಾರಿ ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲೇ ಉಳಿದಿರುವ ರಿಂಕು ಸಿಂಗ್ 55 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಇತ್ತ ಬಿಸಿಸಿಐ ಕಡೆಯಿಂದ ಯುವ ಎಡಗೈ ದಾಂಡಿಗನಿಗೆ 1 ಕೋಟಿ ರೂ. ಸಿಗಲಿದೆ.

4 / 7
ವಿಶೇಷ ಎಂದರೆ ಟೀಮ್ ಇಂಡಿಯಾದ ಬಹುತೇಕ ಆಟಗಾರರ ಐಪಿಎಲ್ ವೇತನ ಹೆಚ್ಚಿದ್ದು, ಬಿಸಿಸಿಐ ಸಂಭಾವನೆ ಕಡಿಮೆ ಇದೆ. ಉದಾಹರಣೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಿಸಿಸಿಐಯಿಂದ ಪಡೆಯುತ್ತಿರುವ ವಾರ್ಷಿಕ ಮೊತ್ತ ತಲಾ 7 ಕೋಟಿ ರೂ.

5 / 7
ಇದೇ ವೇಳೆ ರೋಹಿತ್ ಶರ್ಮಾಗೆ ಐಪಿಎಲ್​ನಿಂದ ಸಿಗುವ ಮೊತ್ತ 16 ಕೋಟಿ ರೂ. ಹಾಗೆಯೇ ವಿರಾಟ್ ಕೊಹ್ಲಿಗೆ ಆರ್​ಸಿಬಿ ನೀಡುತ್ತಿರುವ ಸಂಭಾವನೆ 15 ಕೋಟಿ ರೂ. ಅಂದರೆ ಈ ಆಟಗಾರರು ಬಿಸಿಸಿಐ ನೀಡುವುದಕ್ಕಿಂತ ಐಪಿಎಲ್​ನಲ್ಲಿ ಹೆಚ್ಚಿನ ಮೊತ್ತ ಪಡೆಯುತ್ತಿದ್ದಾರೆ.

6 / 7
ಆದರೆ ರಿಂಕು ಸಿಂಗ್ ವಿಷಯದಲ್ಲಿ ಇದು ಉಲ್ಟಾ. ಕೊಲ್ಕತ್ತಾ ನೈಟ್ ರೈಡರ್ಸ್ ಕಡೆಯಿಂದ 55 ಲಕ್ಷ ರೂ. ಪಡೆಯುತ್ತಿರುವ ರಿಂಕುಗೆ ಬಿಸಿಸಿಐ 1 ಕೋಟಿ ರೂ. ನೀಡಲಿದೆ.

7 / 7
Follow us
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ

ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ

ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ

Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು

ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು

ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ

3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ