Virat Kohli: ವಿರಾಟ್ ಕೊಹ್ಲಿ RCB ತಂಡವನ್ನು ತೊರೆಯಲು ಇದು ಸಕಾಲ: ಕೆವಿನ್ ಪೀಟರ್ಸನ್

Updated on: May 23, 2024 | 1:10 PM

IPL 2024 Virat Kohli: ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ ಒಟ್ಟು 15 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 1 ಭರ್ಜರಿ ಶತಕ ಹಾಗೂ 5 ಅರ್ಧಶತಕಗಳೊಂದಿಗೆ 741 ರನ್ ಕಲೆಹಾಕಿದ್ದಾರೆ. ಇದೀಗ ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದಾಗ್ಯೂ ಫೈನಲ್​ ರೇಸ್​ನಲ್ಲಿ ಆರ್​​ಸಿಬಿ ತಂಡವಿಲ್ಲ ಎಂಬುದೇ ಬೇಸರ.

1 / 6
IPL 2024: ಸತತ 17 ವರ್ಷಗಳಿಂದ ಆರ್​ಸಿಬಿ ತಂಡದ ಕಪ್ ಗೆಲ್ಲುವ ಕನಸು ಮರೀಚಿಕೆಯಾಗಿಯೇ ಉಳಿದಿದೆ. ಇತ್ತ ಕಳೆದ ಹದಿನೇಳು ವರ್ಷಗಳಿಂದ ಒಂದೇ ಒಂದು ಟ್ರೋಫಿಗಾಗಿ ತನು ಮನ ಅರ್ಪಿಸಿ ಆಡುತ್ತಿರುವ ವಿರಾಟ್ ಕೊಹ್ಲಿಗೆ (Virat Kohli) ಈ ಬಾರಿ ಕೂಡ ನಿರಾಸೆಯಾಗಿದೆ. ಈ ನಿರಾಸೆಯ ಬೆನ್ನಲ್ಲೇ ಕಿಂಗ್ ಕೊಹ್ಲಿ ಆರ್​ಸಿಬಿ ತಂಡವನ್ನು ತೊರೆಯಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ ಮಾಜಿ ಆಟಗಾರ ಕೆವಿನ್ ಪೀಟರ್ಸನ್.

IPL 2024: ಸತತ 17 ವರ್ಷಗಳಿಂದ ಆರ್​ಸಿಬಿ ತಂಡದ ಕಪ್ ಗೆಲ್ಲುವ ಕನಸು ಮರೀಚಿಕೆಯಾಗಿಯೇ ಉಳಿದಿದೆ. ಇತ್ತ ಕಳೆದ ಹದಿನೇಳು ವರ್ಷಗಳಿಂದ ಒಂದೇ ಒಂದು ಟ್ರೋಫಿಗಾಗಿ ತನು ಮನ ಅರ್ಪಿಸಿ ಆಡುತ್ತಿರುವ ವಿರಾಟ್ ಕೊಹ್ಲಿಗೆ (Virat Kohli) ಈ ಬಾರಿ ಕೂಡ ನಿರಾಸೆಯಾಗಿದೆ. ಈ ನಿರಾಸೆಯ ಬೆನ್ನಲ್ಲೇ ಕಿಂಗ್ ಕೊಹ್ಲಿ ಆರ್​ಸಿಬಿ ತಂಡವನ್ನು ತೊರೆಯಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ ಮಾಜಿ ಆಟಗಾರ ಕೆವಿನ್ ಪೀಟರ್ಸನ್.

2 / 6

ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋತ ಬೆನ್ನಲ್ಲೇ, ವಿರಾಟ್ ಕೊಹ್ಲಿ ಇನ್ನಾದರೂ ಒಂದೇ ತಂಡದ ಪರ ಆಡುವುದನ್ನು ನಿಲ್ಲಿಸಬೇಕೆಂದು ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಒತ್ತಾಯಿಸಿದ್ದಾರೆ. ಅಲ್ಲದೆ ಹೊಸ ತಂಡದ ಪರ ಕಣಕ್ಕಿಳಿಯಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ.

3 / 6

ವಿರಾಟ್ ಕೊಹ್ಲಿ ಕಳೆದ 17 ಸೀಸನ್​ಗಳಿಂದ ಆರ್​ಸಿಬಿ ಪರ ಆಡುತ್ತಿದ್ದಾರೆ. ಆದರೆ ಒಮ್ಮೆಯೂ ಅವರು ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ಬೇರೊಂದು ತಂಡದ ಪರ ಕಣಕ್ಕಿಳಿಯುವುದು ಉತ್ತಮ. ಏಕೆಂದರೆ ವಿರಾಟ್ ಕೊಹ್ಲಿ ಪ್ರತಿ ಬಾರಿಯೂ ಉತ್ತಮ ಪ್ರದರ್ಶನ ನೀಡಿದರೂ ಪ್ರಶಸ್ತಿ ಗೆಲ್ಲಲಾಗುತ್ತಿಲ್ಲ. ಹೀಗಾಗಿ ಅವರು ಆರ್​ಸಿಬಿ ತಂಡದಿಂದ ಹೊರಬರುವುದು ಉತ್ತಮ ಎಂದು ಪೀಟರ್ಸನ್ ಹೇಳಿದ್ದಾರೆ.

4 / 6

ಒಂದು ವೇಳೆ ವಿರಾಟ್ ಕೊಹ್ಲಿ ಆರ್​ಸಿಬಿ ತಂಡದಿಂದ ಹೊರಬಂದರೆ, ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀದಿಸಬಹುದು. ಈ ಮೂಲಕ ಮುಂಬರುವ ಸೀಸನ್​ಗಳಲ್ಲಿ ಕೊಹ್ಲಿ ತಮ್ಮ ತವರು ತಂಡದ ಪರ ಕಣಕ್ಕಿಳಿಯಬಹುದು. ಹೀಗಾಗಿ ನಾನು ಕೊಹ್ಲಿ ಆರ್​ಸಿಬಿ ತಂಡದಿಂದ ಹೊರಬರಬೇಕೆಂದು ಬಯಸುತ್ತೇನೆ ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.

5 / 6

ಇಲ್ಲಿ ತಂಡಗಳನ್ನು ಬದಲಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ವಿಶ್ವದ ಖ್ಯಾತ ಫುಟ್​ಬಾಲ್ ಆಟಗಾರರಾದ ಲಿಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಸೇರಿದಂತೆ ಎಲ್ಲರೂ ತಂಡಗಳನ್ನು ಬದಲಿಸಿದ್ದಾರೆ. ಹೀಗಾಗಿ ಒಂದೇ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಬೇರೆ ತಂಡದ ಪರ ಕಣಕ್ಕಿಳಿಯಬೇಕೆಂದು ಪೀಟರ್ಸನ್ ಸಲಹೆ ನೀಡಿದ್ದಾರೆ.

6 / 6

ಅಂದಹಾಗೆ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ 2009 ಹಾಗೂ 2010 ರಲ್ಲಿ ಆರ್​ಸಿಬಿ ಪರ ಆಡಿದ್ದರು. ಈ ವೇಳೆ 6 ಪಂದ್ಯಗಳಲ್ಲಿ ಆರ್​ಸಿಬಿ ತಂಡವನ್ನು ಕೂಡ ಮುನ್ನಡೆಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಟ್ಟು 13 ಪಂದ್ಯಗಳನ್ನಾಡಿದ್ದ ಪೀಟರ್ಸನ್ 329 ರನ್​ ಕಲೆಹಾಕಿದ್ದರು.

Published On - 1:07 pm, Thu, 23 May 24

Loading...
Unable to load recommendations.
Follow Us