AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಯಾರು ಗೊತ್ತಾ?

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಆಡಿರುವ 6 ಪಂದ್ಯಗಳಿಂದ ಒಟ್ಟು 319 ರನ್ ಕಲೆಹಾಕುವ ಮೂಲಕ ಕೊಹ್ಲಿ IPL 2024 ರ ರನ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಈ ಬಾರಿಯ ಐಪಿಎಲ್ ಮೂಲಕ ಕಿಂಗ್ ಕೊಹ್ಲಿ 8ನೇ ಶತಕವನ್ನೂ ಸಹ ಪೂರೈಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್|

Updated on:Apr 14, 2024 | 10:10 AM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಯಾರೆಂದರೆ ಥಟ್ಟನೆ ಬರುವ ಉತ್ತರ ವಿರಾಟ್ ಕೊಹ್ಲಿ (Virat Kohli). ಕಿಂಗ್ ಕೊಹ್ಲಿ ಇದುವರೆಗೆ 8 ಶತಕಗಳೊಂದಿಗೆ 7582 ರನ್ ಪೇರಿಸಿದ್ದಾರೆ. ಹೀಗೆ ರನ್ ಮೇಲೆ ರನ್ ಪೇರಿಸುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ಕೆಲ ಬೌಲರ್​ಗಳ ವಿರುದ್ಧ ಆಡಲು ಪರದಾಡಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

1 / 5
ಅಂದರೆ ಐಪಿಎಲ್​ ಇತಿಹಾಸದಲ್ಲಿ ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್​ಗಳ ಪಟ್ಟಿಯನ್ನು ತೆಗೆದುಕೊಂಡರೆ, ಸಂದೀಪ್ ಶರ್ಮಾ ಹೆಸರು ಮುಂಚೂಣಿಯಲ್ಲಿ ಕಾಣಸಿಗುತ್ತದೆ. 15 ಇನಿಂಗ್ಸ್​ಗಳಲ್ಲಿ ಕೊಹ್ಲಿ ಹಾಗೂ ಸಂದೀಪ್ ಶರ್ಮಾ ಮುಖಾಮುಖಿಯಾಗಿದ್ದಾರೆ. ಈ ವೇಳೆ 7 ಬಾರಿ ಔಟ್ ಮಾಡುವಲ್ಲಿ ಸಂದೀಪ್ ಶರ್ಮಾ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಎದುರಿಸಿದ 67 ಎಸೆತಗಳಲ್ಲಿ ಕೊಹ್ಲಿ ಕಲೆಹಾಕಿದ್ದು ಕೇವಲ 87 ರನ್​ಗಳು ಮಾತ್ರ. ಅಂದರೆ ಕೊಹ್ಲಿ ವಿರುದ್ಧ ಸಂದೀಪ್ ಶರ್ಮಾ ಎಲ್ಲಾ ರೀತಿಯಲ್ಲೂ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ.

2 / 5
ಇನ್ನು ವಿರಾಟ್ ಕೊಹ್ಲಿಯನ್ನು ಕಾಡಿದ 2ನೇ ಬೌಲರ್ ಆಶಿಶ್ ನೆಹ್ರಾ. ಕಿಂಗ್ ಕೊಹ್ಲಿ ಹಾಗೂ ನೆಹ್ರಾ ಐಪಿಎಲ್​ನಲ್ಲಿ 10 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ 6 ಸಲ ಕೊಹ್ಲಿಯನ್ನು ಔಟ್ ಮಾಡುವಲ್ಲಿ ನೆಹ್ರಾ ಯಶಸ್ವಿಯಾಗಿದ್ದಾರೆ. ಇನ್ನು ನೆಹ್ರಾ ಅವರ 54 ಎಸೆತಗಳನ್ನು ಎದುರಿಸಿ ಕೊಹ್ಲಿ ಕಲೆಹಾಕಿದ್ದು ಕೇವಲ 60 ರನ್​ಗಳು ಮಾತ್ರ.

3 / 5
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಜಸ್​ಪ್ರೀತ್ ಬುಮ್ರಾ ಇದ್ದಾರೆ. ವಿರಾಟ್ ಕೊಹ್ಲಿ ಹಾಗೂ ಬುಮ್ರಾ ಒಟ್ಟು 16 ಇನಿಂಗ್ಸ್​ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ 95 ಎಸೆತಗಳನ್ನು ಎದುರಿಸಿರುವ ಕೊಹ್ಲಿ 140 ರನ್​ ಕಲೆಹಾಕಿದ್ದಾರೆ. ಇದೇ ವೇಳೆ ಕೊಹ್ಲಿಯನ್ನು 5 ಬಾರಿ ಔಟ್ ಮಾಡುವಲ್ಲಿ ಜಸ್​ಪ್ರೀತ್ ಬುಮ್ರಾ ಯಶಸ್ವಿಯಾಗಿದ್ದಾರೆ.

4 / 5
ಹಾಗೆಯೇ ಮೊಹಮ್ಮದ್ ಶಮಿ ಕೂಡ ವಿರಾಟ್ ಕೊಹ್ಲಿಯನ್ನು 5 ಬಾರಿ ಔಟ್ ಮಾಡಿದ್ದಾರೆ. 12 ಪಂದ್ಯಗಳಲ್ಲಿ ಕೊಹ್ಲಿ-ಶಮಿ ಮುಖಾಮುಖಿಯಾಗಿದ್ದು, ಈ ವೇಳೆ 77 ಎಸೆತಗಳನ್ನು ಎದುರಿಸಿರುವ ವಿರಾಟ್ 107 ರನ್​ ಗಳಿಸಿದ್ದಾರೆ.

5 / 5

Published On - 10:09 am, Sun, 14 April 24

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?