IPL 2024: ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದ ಯುಜ್ವೇಂದ್ರ ಚಹಲ್

IPL 2024: ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್​ಗಳನ್ನು ಕಬಳಿಸಿದ ವಿಶೇಷ ದಾಖಲೆಯನ್ನು ಯುಜ್ವೇಂದ್ರ ಚಹಲ್ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್​ನಲ್ಲಿ ಅತೀ ಹೆಚ್ಚು ವಿಕೆಟ್​ಗಳನ್ನು ಕಬಳಿಸಿದ ಬೌಲರ್​ಗಳ ಪಟ್ಟಿಯಲ್ಲೂ ಯುಜ್ವೇಂದ್ರ ಚಹಲ್ ಅಗ್ರಸ್ಥಾನದಲ್ಲಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 23, 2024 | 3:03 PM

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 38ನೇ ಪಂದ್ಯದ ಮೂಲಕ ಯುಜ್ವೇಂದ್ರ ಚಹಲ್ ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜೈಪುರದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲ್ ಮಾಡಿದ್ದ ಚಹಲ್ 48 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು.

1 / 5
ಈ ಒಂದು ವಿಕೆಟ್​ನೊಂದಿಗೆ ಐಪಿಎಲ್​ನಲ್ಲಿ 200 ವಿಕೆಟ್​ಗಳನ್ನು ಪಡೆದ ಮೊದಲ ಬೌಲರ್​ ಎನಿಸಿಕೊಂಡರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿಕೆಟ್​ ಗಳಿಕೆಯಲ್ಲಿ ದ್ವಿಶತಕದ ಸಾಧನೆ ಮಾಡಿದರು.

2 / 5
ಐಪಿಎಲ್​ನಲ್ಲಿ 152 ಇನಿಂಗ್ಸ್​ಗಳಲ್ಲಿ​ ಬೌಲಿಂಗ್ ಮಾಡಿರುವ ಚಹಲ್ ಈವರೆಗೆ ಒಟ್ಟು 3353 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 200 ವಿಕೆಟ್​ಗಳನ್ನು ಕಬಳಿಸುವ ಮೂಲಕ ಇದೀಗ ಹೊಸ ಇತಿಹಾಸ ನಿರ್ಮಿಸಿದ್ದಾರೆ.

3 / 5
ಯುಜ್ವೇಂದ್ರ ಚಹಲ್ ಐಪಿಎಲ್​ನಲ್ಲಿ ಇದುವರೆಗೆ 3 ತಂಡಗಳ ಪರ ಮಾತ್ರ ಕಣಕ್ಕಿಳಿದಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಚಹಲ್, ಆರ್​ಸಿಬಿ ಪರ 139 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ ಪರ 61 ವಿಕೆಟ್ ಪಡೆದಿದ್ದಾರೆ. ಈ ಮೂಲಕ 200 ವಿಕೆಟ್​ಗಳ ಸಾಧನೆ ಮಾಡಿರುವುದು ವಿಶೇಷ.

4 / 5
ಸದ್ಯ ಐಪಿಎಲ್ ವಿಕೆಟ್ ಟೇಕರ್​ಗಳ ಪಟ್ಟಿಯಲ್ಲಿ ಚಹಲ್ (200) ಅಗ್ರಸ್ಥಾನದಲ್ಲಿದ್ದರೆ, ಮಾಜಿ ಆಟಗಾರ ಡ್ವೇನ್ ಬ್ರಾವೊ (183) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಪಿಯೂಷ್ ಚಾವ್ಲಾ (182) ಹಾಗೂ ಭುವನೇಶ್ವರ್ ಕುಮಾರ್ (174) ಕ್ರಮವಾಗಿ 3ನೇ ಮತ್ತು 4ನೇ ಸ್ಥಾನಗಳಲ್ಲಿದ್ದಾರೆ. ಹಾಗೆಯೇ 173 ವಿಕೆಟ್ ಕಬಳಿಸಿರುವ ಅಮಿತ್ ಮಿಶ್ರಾ ಐದನೇ ಸ್ಥಾನದಲ್ಲಿದ್ದಾರೆ.

5 / 5
Follow us