AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ

IPL 2024: ಮುಂಬೈ ಇಂಡಿಯನ್ಸ್‌ ಅಭಿಮಾನಿಗಳು ಸಂತಸ ಪಡುವ ಸಮಯ ಬಂದಿದೆ. ಏಕೆಂದರೆ ಹಾರ್ದಿಕ್ ಪಾಂಡ್ಯ ಪಡೆ ತನ್ನ ಮುಂದಿನ 4 ಪಂದ್ಯಗಳನ್ನು ತನ್ನ ತವರು ಮೈದಾನವಾದ ವಾಂಖೆಡೆಯಲ್ಲಿ ಆಡಲಿದೆ. ಏಪ್ರಿಲ್ 1 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿರುವ ಮುಂಬೈ ಏಪ್ರಿಲ್ 7 ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಪೃಥ್ವಿಶಂಕರ
|

Updated on: Mar 28, 2024 | 6:03 PM

Share
ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡಕ್ಕೆ 17ನೇ ಆವೃತ್ತಿಯ ಐಪಿಎಲ್ ಅಂದುಕೊಂಡತೆ ಆರಂಭವಾಗಿಲ್ಲ. ತಂಡ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ. ಅದರಲ್ಲೂ ನಿನ್ನೆ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ ತೋರಿದ ಪ್ರದರ್ಶನ ಅಭಿಮಾನಿಗಳ ಕಂಗೆಣ್ಣಿಗೆ ಗುರಿಯಾಗಿತ್ತು.

1 / 9
ಅಲ್ಲದೆ ಟೂರ್ನಿ ಆರಂಭಕ್ಕೆ ಯಶಸ್ವಿ ನಾಯಕ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ತಂಡದ ನಾಯಕತ್ವ ನೀಡಿದ್ದು ಕೂಡ ಅಭಿಮಾನಿಗಳು ಅಸಮಾಧಾನಗೊಳ್ಳುವಂತೆ ಮಾಡಿತ್ತು. ಇದರೆ ಜೊತೆಗೀಗ ಪಾಂಡ್ಯ ನಾಯಕತ್ವದಲ್ಲಿ ತಂಡ ಸತತ ಎರಡು ಸೋಲು ಕಂಡಿರುವುದು ಕೂಡ ಅಭಿಮಾನಿಗಳನ್ನು ಹತಾಶರಾಗುವಂತೆ ಮಾಡಿದೆ.

2 / 9
ಇದೆಲ್ಲದರ ನಡುವೆ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇಲ್ಲಿಯವರೆಗೆ ನಡೆದಿರುವ 8 ಪಂದ್ಯಗಳನ್ನು ಗಮನಿಸಿದರೆ, ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತನ್ನ ಗೆಲುವಿನ ಖಾತೆಯನ್ನು ತೆರೆಯುವ ನಿರೀಕ್ಷೆಯಿದೆ. ಏಕೆಂದರೆ ಇಲ್ಲಿಯವರೆಗೆ ತವರಿನಲ್ಲಿ ನಡೆದಿರುವ ಪಂದ್ಯದಲ್ಲಿ ತವರು ತಂಡ ಸೋತಿಲ್ಲ.

3 / 9
ಮಾರ್ಚ್​ 22 ರಿಂದ ಆರಂಭವಾಗಿರುವ ಐಪಿಎಲ್​ನಲ್ಲಿ ಇದುವರೆಗೆ 8 ಪಂದ್ಯಗಳು ನಡೆದಿವೆ. ಈ ಎಂಟೂ ಪಂದ್ಯಗಳಲ್ಲೂ ಯಾವ ತಂಡ ತನ್ನ ತವರು ನೆಲದಲ್ಲಿ ಆಡಿದೆಯೋ ಆ ಪಂದ್ಯವನ್ನು ಗೆದ್ದುಕೊಂಡಿದೆ.ಇದಕ್ಕೆ ತದ್ವಿರುದ್ಧವಾಗಿ ಪ್ರವಾಸಿ ತಂಡ ಒಂದೂ ಪಂದ್ಯದಲ್ಲೂ ಗೆಲುವು ಸಾಧಿಸಿಲ್ಲ.

4 / 9
ಆರ್​ಸಿಬಿ ಕಥೆಯೂ ಹೀಗೆ ಆಗಿತ್ತು. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಆರ್​ಸಿಬಿ, ತವರಿನಲ್ಲಿ ಆಡಿದ್ದ ತನ್ನ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿತು. ಇದು ಆರ್​ಸಿಬಿ ತಂಡದ ಕಥೆ ಮಾತ್ರವಲ್ಲ. ತವರಿನಲ್ಲಿ ಆಡಿದ ಎಲ್ಲಾ ತಂಡಗಳ ಕಥೆಯೂ ಆಗಿದೆ.

5 / 9
ಅದರಂತೆ ಮುಂಬೈ ತನ್ನ ಮೊದಲೆರಡು ಪಂದ್ಯಗಳನ್ನು ಪ್ರವಾಸಿ ಮೈದಾನದಲ್ಲಿ ಆಡಿತ್ತು. ಮೊದಲ ಪಂದ್ಯದಲ್ಲಿ ಗುಜರಾತ್ ತಂಡವನ್ನು ಅಹಮದಾಬಾದ್​ನಲ್ಲಿ ಎದುರಿಸಿದ್ದ ಮುಂಬೈ, ಎರಡನೇ ಪಂದ್ಯವನ್ನು ಎಸ್​ಆರ್​ಹೆಚ್​ನ ತವರು ಮೈದಾನವಾದ ಹೈದರಾಬಾದ್​ನಲ್ಲಿ ಎದುರಿಸಿತ್ತು. ಆಡಿದ ಈ ಎರಡೂ ಪಂದ್ಯಗಳಲ್ಲೂ ಸೋತಿತ್ತು.

6 / 9
ಆದರೀಗ ಮುಂಬೈ ಇಂಡಿಯನ್ಸ್‌ ಅಭಿಮಾನಿಗಳು ಸಂತಸ ಪಡುವ ಸಮಯ ಬಂದಿದೆ. ಏಕೆಂದರೆ ಹಾರ್ದಿಕ್ ಪಾಂಡ್ಯ ಪಡೆ ತನ್ನ ಮುಂದಿನ 4 ಪಂದ್ಯಗಳನ್ನು ತನ್ನ ತವರು ಮೈದಾನವಾದ ವಾಂಖೆಡೆಯಲ್ಲಿ ಆಡಲಿದೆ. ಏಪ್ರಿಲ್ 1 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿರುವ ಮುಂಬೈ ಏಪ್ರಿಲ್ 7 ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

7 / 9
 ಆ ನಂತರ ಏಪ್ರಿಲ್ 11 ರಂದು ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತವರಿನಲ್ಲಿ ಮತ್ತು ಏಪ್ರಿಲ್ 14 ರಂದು ವಾಂಖೆಡೆಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಅಂದರೆ ತಂಡ ತನ್ನ ತವರು ನೆಲದಲ್ಲಿ ಸತತ 4 ಪಂದ್ಯಗಳನ್ನು ಆಡಲಿದೆ. ಇದೇ ರೀತಿ ಮುಂದುವರಿದರೆ ಮುಂಬೈಗೆ ಸತತ ನಾಲ್ಕು ಪಂದ್ಯಗಳನ್ನು ಗೆಲ್ಲುವ ಅವಕಾಶ ಸಿಗಲಿದೆ.

8 / 9
ಇದು ಖಾತೆ ತೆರೆಯದೆ ಒಂಬತ್ತನೇ ಕ್ರಮಾಂಕದಲ್ಲಿ ತೊಳಲಾಡುತ್ತಿರುವ ತಂಡದ ಗೆಲುವಿನ ಖಾತೆಯನ್ನು ತೆರೆಯುವುದಲ್ಲದೆ, ಪಂದ್ಯವನ್ನು ಗೆಲ್ಲುವ ಮೂಲಕ ತಂಡವು ಅಗ್ರ 4 ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದು. ಏತನ್ಮಧ್ಯೆ, ತಂಡವು ಈಗ ಮುಂದಿನ ಪಂದ್ಯಕ್ಕೆ ಮೂರು ದಿನಗಳ ಸಮಯ ಹೊಂದಿದೆ. ಹೀಗಾಗಿ ತಂಡವು ತನ್ನ ಕಾರ್ಯತಂತ್ರವನ್ನು ಬದಲಿಸುವ ಅವಕಾಶ ಪಡೆದಿದೆ. ಈ ಮೂಲಕ ತವರಿನಲ್ಲಿ ತಂಡ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

9 / 9