- Kannada News Photo gallery Cricket photos IPL 2024: Virat Kohli and Dhoni shook hands in the dressing room
IPL 2024: ಶೇಕ್ ಹ್ಯಾಂಡ್ ಮಾಡದ ಧೋನಿ: ಡ್ರೆಸ್ಸಿಂಗ್ ರೂಮ್ಗೆ ತೆರಳಿ ಹಸ್ತಲಾಘವ ನೀಡಿದ ಕೊಹ್ಲಿ
IPL 2024: ಐಪಿಎಲ್ನ 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಪ್ಲೇಆಫ್ ಹಂತಕ್ಕೇರಲು ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 218 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ತಂಡವು 191 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
Updated on: May 21, 2024 | 2:35 PM

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸಿಎಸ್ಕೆ ತಂಡಕ್ಕೆ ಸೋಲುಣಿಸಿ ಆರ್ಸಿಬಿ ತಂಡ ಪ್ಲೇಆಫ್ಗೆ ಪ್ರವೇಶಿಸಿದೆ. ಈ ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಧೋನಿ ಆರ್ಸಿಬಿ ಆಟಗಾರರಿಗೆ ಹಸ್ತಲಾಘವ ನೀಡದೇ ಡ್ರೆಸ್ಸಿಂಗ್ ರೂಮ್ಗೆ ತೆರಳಿದ್ದರು.

ಈ ಪಂದ್ಯ ಮುಗಿದ ಬಳಿಕ ಪಂದ್ಯ ಸಿಎಸ್ಕೆ ಆಟಗಾರರು ಹಸ್ತಲಾಘವ ನೀಡಲು ಸರದಿಯಲ್ಲಿ ನಿಂತಿದ್ದರು. ಈ ಸಾಲಿನಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂಚೂಣಿಯಲ್ಲಿದ್ದರು. ಆದರೆ ಅತ್ತ ಗೆಲುವಿನ ಖುಷಿಯಲ್ಲಿದ್ದ ಆರ್ಸಿಬಿ ಆಟಗಾರರು ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು.

ಇದೇ ವೇಳೆ ಆರ್ಸಿಬಿ ಆಟಗಾರರನ್ನು ಕಾಯದೇ ಮಹೇಂದ್ರ ಸಿಂಗ್ ಧೋನಿ ಡ್ರೆಸ್ಸಿಂಗ್ ರೂಮ್ನತ್ತ ಮುಖ ಮಾಡಿದ್ದರು. ಧೋನಿಯ ಈ ನಡೆಯು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಒಂದು ತಂಡದ ಸಂಭ್ರಮ ಮುಗಿಯುವ ತನಕ ಕಾಯುವ ಸಹನೆಯಿಲ್ಲವೇ ಎಂದು ಅನೇಕರು ಕೂಲ್ ಕ್ಯಾಪ್ಟನ್ರನ್ನು ಪ್ರಶ್ನಿಸಿದ್ದರು.

ಈ ಘಟನೆಯ ಮುಂದೇನಾಯ್ತು ಎಂಬುದರ ಮತ್ತೊಂದು ವಿಚಾರ ಇದೀಗ ಬೆಳಕಿಗೆ ಬಂದಿದೆ. ಸಿಎಸ್ಕೆ ಆಟಗಾರರಿಗೆ ಶೇಕ್ ಹ್ಯಾಂಡ್ ನೀಡಿದ ಬಳಿಕ ವಿರಾಟ್ ಕೊಹ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಹುಡುಕಾಡಿದ್ದಾರೆ. ಈ ವೇಳೆಗೆ ಧೋನಿ ಡ್ರೆಸ್ಸಿಂಗ್ ರೂಮ್ ಸೇರಿಕೊಂಡಿದ್ದರು.

ಹೀಗಾಗಿ ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಹಸ್ತಲಾಘವ ನೀಡಿದ್ದಾರೆ ಎಂದು ವರದಿಯಾಗಿದೆ. ಅಂದರೆ ಧೋನಿ ಶೇಕ್ ಹ್ಯಾಂಡ್ ನೀಡದಿದ್ದರೂ, ಕಿಂಗ್ ಕೊಹ್ಲಿ ಹುಡುಕಾಡಿ ಹೋಗಿ ಧೋನಿಗೆ ಹಸ್ತಲಾಘವ ನೀಡಿದ್ದಾರೆ. ಇದೀಗ ವಿರಾಟ್ ಕೊಹ್ಲಿಯ ಈ ನಡೆಯ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.




