Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಧೋನಿಗಾಗಿ IPL ನಿಯಮವನ್ನೇ ಬದಲಿಸಲಿದೆ ಬಿಸಿಸಿಐ

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೆಲ ನಿಯಮಗಳಲ್ಲಿ ಬದಲಾವಣೆಗಳು ಕಂಡು ಬರುವುದು ಬಹುತೇಕ ಖಚಿತ. ಈ ನಿಯಮಗಳಲ್ಲಿ ಐಪಿಎಲ್ 2008ರ ನಿಯಮವೊಂದು ಮತ್ತೆ ಜಾರಿಗೆ ಬರುವ ಸಾಧ್ಯತೆ ಹೆಚ್ಚಿದೆ. ಅದು ಕೂಡ ಮಹೇಂದ್ರ ಸಿಂಗ್ ಧೋನಿಗಾಗಿ ಈ ರೂಲ್ಸ್ ಅನ್ನು ಮತ್ತೆ ಜಾರಿಗೊಳಿಸಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಆಗ್ರಹಿಸಿದೆ.

ಝಾಹಿರ್ ಯೂಸುಫ್
|

Updated on: Aug 17, 2024 | 10:54 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಲ್ಲಿ ಮಹೇಂದ್ರ ಸಿಂಗ್ ಧೋನಿ ಆಡಲಿದ್ದಾರಾ? ಈ ಪ್ರಶ್ನೆಗೆ ಸದ್ಯದ ಉತ್ತರ ಖಂಡಿತವಾಗಿಯೂ ಆಡ್ತಾರೆ. ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಧೋನಿಗಾಗಿಯೇ ಐಪಿಎಲ್​ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಬಿಸಿಸಿಐಗೆ ಮನವಿ ಮಾಡಿದೆ.

1 / 6
ಈ ಮನವಿಯಂತೆ ಮಹೇಂದ್ರ ಸಿಂಗ್ ಧೋನಿಯನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಸಿಎಸ್​ಕೆ ಕೋರಿದೆ. ಈ ಕೋರಿಕೆಯನ್ನು ಈಡೇರಿಸಲು ಬಿಸಿಸಿಐ ಕೂಡ ಮುಂದಾಗಿದೆ ಎಂಬ ಸುದ್ದಿಯೊಂದಿಗೆ ಇದೀಗ ಹೊರಬಿದ್ದಿದೆ.

2 / 6
ಐಪಿಎಲ್ 2008ರ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದು. ಆದರೆ ಈ ನಿಯಮವು ಬಳಕೆಗೆ ಬಾರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಇದೇ ನಿಯಮವನ್ನು ಜಾರಿಗೊಳಿಸುವಂತೆ ಸಿಎಸ್​ಕೆ ಫ್ರಾಂಚೈಸಿ ಮನವಿ ಮಾಡಿದೆ.

3 / 6
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ 5 ವರ್ಷ ಆಗಿರುವ ಕಾರಣ ಈ ನಿಯಮವನ್ನು ಜಾರಿಗೊಳಿಸುವಂತೆ ಸಿಎಸ್​ಕೆ ಆಗ್ರಹಿಸಿದೆ. ಅದರಂತೆ ಈ ನಿಯಮ ಜಾರಿಯಾದರೆ ಧೋನಿಯನ್ನು ಕಡಿಮೆ ಮೊತ್ತ ನೀಡಿ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಳ್ಳಬಹುದು.

4 / 6
ಅಂದರೆ ಮಹೇಂದ್ರ ಸಿಂಗ್ ಧೋನಿಯನ್ನು ಸಿಎಸ್​ಕೆ ಕಳೆದ ಸೀಸನ್​ ಹರಾಜಿನ 12 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಆದರೆ ಈ ಬಾರಿ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಂಡರೆ ಕೇವಲ 4 ಕೋಟಿ ರೂ. ಮಾತ್ರ ನೀಡಿದರೆ ಸಾಕು. ಇತ್ತ ಧೋನಿಯನ್ನು ಅನ್​ಕ್ಯಾಪ್ಡ್​ ಪಟ್ಟಿಯಲ್ಲಿ ಉಳಿಸಿಕೊಂಡರೆ, ಮತ್ತೋರ್ವ ರಾಷ್ಟ್ರೀಯ ಆಟಗಾರನನ್ನು ದೊಡ್ಡ ಮೊತ್ತ ನೀಡಿ ಉಳಿಸಿಕೊಳ್ಳುವ ಅವಕಾಶ ಸಿಎಸ್​ಕೆ ತಂಡಕ್ಕೆ ದೊರೆಯಲಿದೆ.

5 / 6
ಇಂತಹದೊಂದು ಪ್ಲ್ಯಾನ್ ರೂಪಿಸಿಯೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಹಳೆಯ ನಿಯಮವನ್ನು ಜಾರಿಗೆ ತರುವಂತೆ ಬಿಸಿಸಿಐಗೆ ಮನವಿ ಮಾಡಿದೆ. ಅತ್ತ ಬಿಸಿಸಿಐ ಕೂಡ ಹಳೆಯ ನಿಯಮವನ್ನು ಜಾರಿಗೆ ತರಲು ಸಜ್ಜಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಮುಂಬರುವ ಸೀಸನ್​ ಹರಾಜಿಗೂ ಮುನ್ನ ಧೋನಿಯನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಸಿಎಸ್​ಕೆ ಉಳಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

6 / 6
Follow us
ಕಾರಿನಿಂದ ಗುದ್ದಿ ಕೊಲ್ಲಲು ಯತ್ನ: ಬಚಾವಾದ ಬಗ್ಗೆ ಮುರಳಿ ಪ್ರಸಾದ್ ಮಾತು

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ

ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ

ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್

ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ

ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ

ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್

ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್

‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ

ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?