AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tim David: ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಟಿಮ್ ಡೇವಿಡ್​ಗೆ ಸಿಕ್ತು 5 ಲಕ್ಷ ರೂ.

IPL 2025 RCB vs PBKS: ಐಪಿಎಲ್ 2025ರ 34ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಿಮ್ ಡೇವಿಡ್ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಆರ್​ಸಿಬಿ ತಂಡವು ನಿಗದಿತ 14 ಓವರ್​ಗಳಲ್ಲಿ 95 ರನ್ ಕಲೆಹಾಕಿತು. ಈ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ 12.1 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಝಾಹಿರ್ ಯೂಸುಫ್
|

Updated on: Apr 19, 2025 | 10:54 AM

Share
IPL 2025: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಎಲ್ಲಾ ಬ್ಯಾಟರ್​ಗಳು ವಿಫಲರಾದರೂ ಟಿಮ್ ಡೇವಿಡ್ (Tim David) ಮಾತ್ರ ಅಬ್ಬರಿಸಿದ್ದರು. ಕೇವಲ 26 ಎಸೆತಗಳನ್ನು ಎದುರಿಸಿದ ಟಿಮ್ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 50 ರನ್ ಬಾರಿಸಿದರು. ಈ ಮೂಲಕ 63 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದ ಆರ್​ಸಿಬಿ ತಂಡದ ಸ್ಕೋರ್ ಅನ್ನು 95 ಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಟಿಮ್ ಡೇವಿಡ್​ಗೆ 5 ಪ್ರಶಸ್ತಿಗಳು ಒಲಿದಿವೆ. ಅವು ಯಾವುದೆಂದರೆ....

1 / 6
ಪ್ಲೇಯರ್ ಆಫ್ ದಿ ಮ್ಯಾಚ್: ಪಂಜಾಬ್ ಕಿಂಗ್ಸ್ - ಆರ್​ಸಿಬಿ ನಡುವಣ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಏಕೈಕ ಬ್ಯಾಟರ್ ಟಿಮ್ ಡೇವಿಡ್. ಬ್ಯಾಟಿಂಗ್​ ಕಷ್ಟಕರವಾಗಿದ್ದ ಪಿಚ್​ನಲ್ಲಿ ಅಬ್ಬರಿಸಿದ್ದ ಟಿಮ್​ಗೆ ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿದೆ. ಈ ಮೂಲಕ 1 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.

2 / 6
ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್: ಈ ಪಂದ್ಯದಲ್ಲಿ ಟಿಮ್ ಡೇವಿಡ್ 26 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 50 ರನ್ ಬಾರಿಸಿದ್ದರು. ಅದು ಸಹ 192ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ. ಈ ಮೂಲಕ 1 ಲಕ್ಷ ರೂ. ಬಹುಮಾನದ ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಸಹ ಟಿಮ್ ಡೇವಿಡ್ ತಮ್ಮದಾಗಿಸಿಕೊಂಡಿದ್ದಾರೆ.

3 / 6
ಸೂಪರ್ ಸಿಕ್ಸಸ್ ಅಫ್ ದಿ ಮ್ಯಾಚ್: ಆರ್​ಸಿಬಿ-ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಟಿಮ್ ಡೇವಿಡ್ 3 ಭರ್ಜರಿ ಸಿಕ್ಸ್​ಗಳನ್ನು ಬಾರಿಸಿದ್ದರು. ಈ ಮೂಲಕ ಐಪಿಎಲ್​ನ 34ನೇ ಪಂದ್ಯದಲ್ಲಿ ಸೂಪರ್ ಸಿಕ್ಸಸ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕಾಗಿ ಟಿಮ್ ಡೇವಿಡ್​ಗೆ 1 ಲಕ್ಷ ರೂ. ಬಹುಮಾನ ಸಿಕ್ಕಿದೆ.

4 / 6
ಫೋರ್ಸ್ ಆಫ್ ದಿ ಮ್ಯಾಚ್: ಪಂಜಾಬ್ ಕಿಂಗ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯದಲ್ಲಿ ಅತ್ಯಧಿಕ ಫೋರ್ ಬಾರಿಸಿದ್ದು ಕೂಡ ಟಿಮ್ ಡೇವಿಡ್. ಟಿಮ್ ಇನಿಂಗ್ಸ್​ನಲ್ಲಿ ಒಟ್ಟು 5 ಫೋರ್​ಗಳು ಮೂಡಿಬಂದಿದ್ದವು. ಹೀಗಾಗಿ 1 ಲಕ್ಷ ರೂ. ಮೌಲ್ಯದ ಫೋರ್ಸ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಟಿಮ್ ಡೇವಿಡ್​ಗೆ ಒಲಿಯಿತು.

5 / 6
ಫ್ಯಾಂಟಸಿ ಕಿಂಗ್ ಆಫ್ ದಿ ಮ್ಯಾಚ್:  ಈ ಪಂದ್ಯದಲ್ಲಿ ಅತ್ಯಧಿಕ ಫ್ಯಾಂಟಸಿ ಪಾಯಿಂಟ್ಸ್ ಪಡೆಯುವ ಮೂಲಕ 1 ಲಕ್ಷ ರೂ. ಮೌಲ್ಯದ ಫ್ಯಾಂಟಸಿ ಕಿಂಗ್ ಆಫ್ ದಿ ಮ್ಯಾಚ್ ಬಹುಮಾನವನ್ನು ಸಹ ಟಿಮ್ ಡೇವಿಡ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಒಂದೇ ಪಂದ್ಯದಲ್ಲಿ 5 ಪ್ರಶಸ್ತಿಗಳೊಂದಿಗೆ ಟಿಮ್ ಡೇವಿಡ್ ಒಟ್ಟು 5 ಲಕ್ಷ ರೂ. ಪಡೆದುಕೊಂಢಿದ್ದಾರೆ.

6 / 6
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!

ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್

ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ

MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್

ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್

ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?

ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ

ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!

56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!

Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?