
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಸುತ್ತು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 18 ಅಂಕಗಳೊಂದಿಗೆ ಅಧಿಕೃತವಾಗಿ ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿದೆ. ಇನ್ನುಳಿದ ಮೂರು ಸ್ಥಾನಗಳಿಗಾಗಿ ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ನಡುವೆ ನೇರ ಹಣಾಹಣಿ ಇದೆ. (PC: IPL)

ಆದರೆ ಇಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯವು ಇಡೀ ಟೂರ್ನಿಯ ಚಿತ್ರಣವನ್ನೇ ಬದಲಿಸಲಿದೆ. ಏಕೆಂದರೆ ಈ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡ ಗೆದ್ದರೆ ಅತ್ಯುತ್ತಮ ನೆಟ್ ರನ್ ರೇಟ್ನೊಂದಿಗೆ ಪ್ಲೇಆಫ್ಗೇರುವುದು ಕನ್ಫರ್ಮ್ ಆಗಲಿದೆ. (PC: IPL)

ಸನ್‌ರೈಸರ್ಸ್ ಹೈದರಾಬಾದ್ ಎಂಟ್ರಿ: CSK ವಿರುದ್ಧ SRH ಗೆದ್ದರೆ ಅದರ ಒಟ್ಟು ಅಂಕಗಳು 16ಕ್ಕೆ ಏರುತ್ತವೆ. ಪ್ರಸ್ತುತ ಸನ್‌ರೈಸರ್ಸ್ ಹೈದರಾಬಾದ್ ತಂಡವು +0.331ರಷ್ಟು ಅತ್ಯುತ್ತಮ ನೆಟ್ ರನ್ ರೇಟ್ (NRR) ಹೊಂದಿದೆ. ಹೀಗಾಗಿ 16 ಅಂಕ ತಲುಪುತ್ತಿದ್ದಂತೆ, SRH ತಂಡಕ್ಕೆ ಪ್ಲೇಆಫ್ ಟಿಕೆಟ್ ಖಚಿತಪಡಿಸುತ್ತದೆ. (PC: IPL)

ಗುಜರಾತ್ ಟೈಟಾನ್ಸ್ ನಿರಾಳ: ಗುಜರಾತ್ ಟೈಟಾನ್ಸ್ ಈಗಾಗಲೇ 16 ಅಂಕಗಳನ್ನು ಗಳಿಸಿದ್ದರೂ ಇನ್ನೂ ಕೂಡ ಅಧಿಕೃತವಾಗಿ ಕ್ವಾಲಿಫೈ ಆಗಿಲ್ಲ. ಆದರೆ ಸಿಎಸ್ಕೆ ವಿರುದ್ಧ ಎಸ್ಆರ್ಹೆಚ್ ಗೆದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗರಿಷ್ಠ ಅಂಕಗಳ ಮಿತಿ 14 ರಲ್ಲೇ ಉಳಿಯಲಿದೆ. ಇದರಿಂದ ಆ ನಾಲ್ಕು ತಂಡಗಳ ಟೈ ಸಮೀಕರಣ ಧೂಳೀಪಟವಾಗಿ, ಗುಜರಾತ್ ಟೈಟಾನ್ಸ್ 16 ಅಂಕಗಳೊಂದಿಗೆ ಯಾವುದೇ ಆತಂಕವಿಲ್ಲದೆ ನೇರವಾಗಿ ಪ್ಲೇಆಫ್‌ಗೆ ಲಗ್ಗೆ ಇಡಲಿದೆ. (PC: IPL)

ರಾಜಸ್ಥಾನ್ ರಾಯಲ್ಸ್: ಪ್ರಸ್ತುತ ಅಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವು ಕೊನೆಯ ಎರಡು ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ 16 ಅಂಕಗಳನ್ನು ಪಡೆಯಲಿದೆ. ಈ ಮೂಲಕ ನಾಲ್ಕನೇ ತಂಡವಾಗಿ ಪ್ಲೇಆಫ್ಗೇರಲು ಆರ್ಆರ್ ಪಡೆಗೆ ಅವಕಾಶ ದೊರೆಯಲಿದೆ. ಇತ್ತ ಸಿಎಸ್ಕೆ ವಿರುದ್ಧ ಎಸ್ಆರ್ಹೆಚ್ ಗೆದ್ದ ಬಳಿಕ, ಆರ್ಆರ್ ತಂಡ ಒಂದು ಮ್ಯಾಚ್ನಲ್ಲಿ ಸೋತರೆ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ 15 ಅಂಕಗಳೊಂದಿಗೆ ಪ್ಲೇಆಫ್ಗೇರಲು ಅವಕಾಶ ಸಿಗಲಿದೆ. ಹೀಗಾಗಿ ಮುಂಬರುವ ಪಂದ್ಯಗಳ ಫಲಿತಾಂಶಗಳು ಆರ್ಆರ್, ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ಗೆ ನಿರ್ಣಾಯಕ. (PC: IPL)
Published On - 12:53 pm, Mon, 18 May 26