IPL 2026: LSG ತಂಡದಿಂದ 11 ಕೋಟಿ ರೂ. ಆಟಗಾರನಿಗೆ ಗೇಟ್ ಪಾಸ್..!

Updated on: Oct 11, 2025 | 12:05 PM

IPL 2026 LSG: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಡಿಸೆಂಬರ್ ಮೂರನೇ ವಾರದಲ್ಲಿ ನಡೆಯಲಿದೆ. ಈ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೆಲ ಪ್ರಮುಖ ಆಟಗಾರರು ಹೊರಬೀಳುವುದು ಖಚಿತ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದ ಆಟಗಾರ ಕೂಡ ಇರುವುದು ವಿಶೇಷ.

1 / 5
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಿಂದ ಒಂದಷ್ಟು ಸ್ಟಾರ್ ಆಟಗಾರರು ಹೊರಬೀಳಲಿದ್ದಾರೆ. ಈ ಸ್ಟಾರ್ ಆಟಗಾರರಲ್ಲಿ 11 ಕೋಟಿ ರೂ. ಬೆಲೆಯ ಸ್ಟಾರ್ ಆಟಗಾರ ಕೂಡ ಇರುವುದು ವಿಶೇಷ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಿಂದ ಒಂದಷ್ಟು ಸ್ಟಾರ್ ಆಟಗಾರರು ಹೊರಬೀಳಲಿದ್ದಾರೆ. ಈ ಸ್ಟಾರ್ ಆಟಗಾರರಲ್ಲಿ 11 ಕೋಟಿ ರೂ. ಬೆಲೆಯ ಸ್ಟಾರ್ ಆಟಗಾರ ಕೂಡ ಇರುವುದು ವಿಶೇಷ.

2 / 5

ಲಕ್ನೋ ಸೂಪರ್ ಜೈಂಟ್ಸ್ ಮೂಲಗಳ ಮಾಹಿತಿ ಪ್ರಕಾರ, ಐಪಿಎಲ್ ಮಿನಿ ಹರಾಜಿಗೂ ಮುನ್ನ ತಂಡದ ಪ್ರಮುಖ ವೇಗಿ ಮಯಾಂಕ್ ಯಾದವ್ ಅವರನ್ನು ಕೈ ಬಿಡಲು ನಿರ್ಧರಿಸಲಾಗಿದೆ. 2022 ರಿಂದ ಲಕ್ನೋ ತಂಡದ ಭಾಗವಾಗಿರುವ ಮಯಾಂಕ್ ಈವರೆಗೆ ಆಡಿರುವುದು ಕೇವಲ 6 ಪಂದ್ಯಗಳನ್ನು ಮಾತ್ರ ಎಂದರೆ ನಂಬಲೇಬೇಕು.

3 / 5

2024 ರಲ್ಲಿ ನಾಲ್ಕು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದ ಮಯಾಂಕ್ ಯಾದವ್ ತನ್ನ ಬೆಂಕಿಯುಂಡೆಯಂತಹ ಎಸೆತಗಳಿಂದ ಗಮನ ಸೆಳೆದಿದ್ದರು. ಅಲ್ಲದೆ ನಾಲ್ಕು ಮ್ಯಾಚ್​ಗಳಲ್ಲಿ 7 ವಿಕೆಟ್ ಕಬಳಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

4 / 5

ಹೀಗಾಗಿಯೇ 23 ವರ್ಷದ ಯುವ ವೇಗಿಯನ್ನು ಮೆಗಾ ಹರಾಜಿಗೂ ಮುನ್ನ ಬರೋಬ್ಬರಿ 11 ಕೋಟಿ ರೂ. ನೀಡಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿತು. ಆದರೆ ಐಪಿಎಲ್ 2025 ರಲ್ಲಿ ಫಿಟ್​ನೆಸ್ ಸಮಸ್ಯೆಯಿಂದ ಸೈಡ್​ ಲೈನ್​ ಆದ ಮಯಾಂಕ್ ಕಣಕ್ಕಿಳಿದದ್ದು ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ.

5 / 5

ಐಪಿಎಲ್ 2025 ರಲ್ಲಿ 2 ಪಂದ್ಯಗಳಲ್ಲಿ 8 ಓವರ್​ ಎಸೆದಿದ್ದ ಮಯಾಂಕ್ ಯಾದವ್ ನೀಡಿದ್ದು ಬರೋಬ್ಬರಿ 100 ರನ್​ಗಳು. ಅಲ್ಲದೆ ಕೇವಲ 2 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಇದೇ ಕಾರಣದಿಂದಾಗಿ ಇದೀಗ ಮಯಾಂಕ್ ಯಾದವ್ ಅವರನ್ನು ಬಿಡುಗಡೆ ಮಾಡಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ನಿರ್ಧರಿಸಿದೆ.

Loading...
Unable to load recommendations.
Follow Us