IPL 2026: ಸ್ವಾಪ್ ಡೀಲ್… CSK ಕೈ ತಪ್ಪಿದ ಸಂಜು ಸ್ಯಾಮ್ಸನ್

Updated on: Nov 02, 2025 | 12:24 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಸ್ವಾಪ್ ಡೀಲ್ ಕುದುರಿದ್ದು, ಅಧಿಕೃತ ಅನೌನ್ಸ್ ಶೀಘ್ರದಲ್ಲೇ ಹೊರಬೀಳಲಿದೆ ಎಂದು ವರದಿಯಾಗಿದೆ.

1 / 6
ಅದರಂತೆ ಸಂಜು ಸ್ಯಾಮ್ಸನ್ ಇನ್ನೇನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಲಿದ್ದಾರೆ ಎನ್ನುವಾಗ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಸಂಪರ್ಕಿಸಿದೆ. ಅದು ಕೂಡ ಸ್ಟಾರ್ ಆಟಗಾರನ ಸ್ವಾಪ್ ಡೀಲ್​ನ ಆಫರ್​ನೊಂದಿಗೆ ಎಂಬುದು ವಿಶೇಷ.

2 / 6
ಐಪಿಎಲ್ ಮೂಲಗಳ ಮಾಹಿತಿ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಜೊತೆ ಸ್ವಾಪ್ ಡೀಲ್ ಮಾಡಿಕೊಂಡಿದ್ದು, ಅದರಂತೆ ಹರಾಜಿಗೂ ಮುನ್ನ ಸ್ಯಾಮ್ಸನ್ ಡೆಲ್ಲಿ ಪಡೆಗೆ ಎಂಟ್ರಿ ಕೊಡಲಿದ್ದಾರೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಟ್ರಿಸ್ಟನ್ ಸ್ಟಬ್ಸ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇಪರ್ಡೆಯಾಗಲಿದ್ದಾರೆ ತಿಳಿಸಲಾಗಿತ್ತು.

3 / 6
ಆದರೆ ಜಡೇಜಾ ಅವರನ್ನು ನೀಡಲು ಸಿಎಸ್​ಕೆ ಮುಂದಾಗಿರಲಿಲ್ಲ. ಇತ್ತ ಉಳಿದ ಆಟಗಾರರೊಂದಿಗಿನ ಸ್ವಾಪ್ ಡೀಲ್​ಗೆ ಆರ್​ಆರ್ ಕೂಡ ಒಪ್ಪಿಕೊಂಡಿರಲಿಲ್ಲ. ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಹರಾಜಿನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು.

4 / 6
ಅಲ್ಲದೆ ಸಂಜು ಸ್ಯಾಮ್ಸನ್ ಅವರೊಂದಿಗೆ ಸ್ವಾಪ್ ಡೀಲ್ ಮಾಡಿಕೊಳ್ಳಲು ಬಯಸಿರುವ ಆಟಗಾರನಿಗೆ ಈಗಾಗಲೇ ಸಿಎಸ್​ಕೆ ಸಂದೇಶ ಕಳಿಸಿದ್ದು, ಆತನ ಒಪ್ಪಿಗೆಗಾಗಿ ಕಾಯುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಯಶಸ್ವಿಯಾದರೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್​ ಅನ್ನು ಕೈ ಬಿಟ್ಟು ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್​ಗೆ ಮಾರಾಟ ಮಾಡಬಹುದು. ಹೀಗಾಗಿ ಅಂತಿಮವಾಗಿ ಸ್ಯಾಮ್ಸನ್ ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

5 / 6
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್​ ತಂಡದಿಂದ ಹೊರಬರಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಸಿಎಸ್​ಕೆ ಫ್ರಾಂಚೈಸಿಯು ಅವರ ಖರೀದಿಗೆ ಯೋಜನೆ ರೂಪಿಸಿತ್ತು. ಇದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರಾಜಸ್ಥಾನ್ ರಾಯಲ್ಸ್ ಜೊತೆ ಕ್ಯಾಶ್ ಡೀಲ್ ಕುದಿರಿಸಲು ಯತ್ನಿಸಿದ್ದರು. ಆದರೆ ಆರ್​ಆರ್ ಫ್ರಾಂಚೈಸಿಯು ಸ್ವಾಪ್ ಡೀಲ್​ಗೆ ಹೆಚ್ಚಿನ ಆಸಕ್ತಿ ತೋರಿದ್ದರು. ಅಲ್ಲದೆ ರವೀಂದ್ರ ಜಡೇಜಾ ಅವರನ್ನು ನೀಡಿದರೆ ಸಂಜು ಸ್ಯಾಮ್ಸನ್ ಅವರನ್ನು ಬಿಟ್ಟು ಕೊಡುವುದಾಗಿ ತಿಳಿಸಿದ್ದರು.

6 / 6
ಆದರೆ ಸಿಎಸ್​ಕೆ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಜೊತೆ ಸ್ವಾಪ್ ಡೀಲ್​ಗೆ ಕುದುರಿಸಿತ್ತು. ಅದರಂತೆ ಸೌತ್ ಆಫ್ರಿಕಾದ ಸ್ಫೋಟಕ ದಾಂಡಿಗ ಟ್ರಿಸ್ಟನ್ ಸ್ಟಬ್ಸ್​ನನ್ನು ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸಂಜು ಸ್ಯಾಮ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಮುಂದಾಗಿದೆ.