IPL 2026: ಫೈನಲ್​ಗೂ ಮುನ್ನ ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ನೋಡಿ

Updated on: May 30, 2026 | 4:13 PM

IPL 2026 Orange Cap race: ಐಪಿಎಲ್ 2026 ಫೈನಲ್ ಸಮೀಪಿಸುತ್ತಿದ್ದಂತೆ, ಗುಜರಾತ್ ಟೈಟಾನ್ಸ್ ಮತ್ತು ಆರ್‌ಸಿಬಿ ನಡುವೆ ಕದನ ಸಜ್ಜಾಗಿದೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವೈಭವ್ ಸೂರ್ಯವಂಶಿ, ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಪ್ರಮುಖರಾಗಿದ್ದಾರೆ. ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ವೈಭವ್ ಅವರಿಂದ ಕ್ಯಾಪ್ ಕಸಿದುಕೊಳ್ಳಲು ಗಿಲ್, ಸುದರ್ಶನ್‌ಗೆ ಅವಕಾಶವಿದೆ. ಪರ್ಪಲ್ ಕ್ಯಾಪ್‌ಗಾಗಿ ಕಗಿಸೊ ರಬಾಡ ಮತ್ತು ಆರ್‌ಸಿಬಿಯ ಭುವನೇಶ್ವರ್ ಕುಮಾರ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

1 / 6
2026 ರ ಐಪಿಎಲ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ನಿನ್ನೆ ನಡೆದ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ  ಗುಜರಾತ್ ಟೈಟಾನ್ಸ್ ತಂಡವು ಫೈನಲ್​ನಲ್ಲಿ ಆರ್​ಸಿಬಿ ತಂಡವನ್ನು ಎದುರಿಸಲು ಸಜ್ಜಾಗಿದೆ. ಆದರೆ ಅದಕ್ಕೂ ಮೊದಲು, ಅತಿ ಹೆಚ್ಚು ರನ್ ಮತ್ತು ಅತಿ ಹೆಚ್ಚು ವಿಕೆಟ್ ಪಡೆದವರಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾರ್ಯಾರಿದ್ದಾರೆ ಎಂಬುದನ್ನು ನೋಡೋಣ (PC- PTI).

2026 ರ ಐಪಿಎಲ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ನಿನ್ನೆ ನಡೆದ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ತಂಡವು ಫೈನಲ್​ನಲ್ಲಿ ಆರ್​ಸಿಬಿ ತಂಡವನ್ನು ಎದುರಿಸಲು ಸಜ್ಜಾಗಿದೆ. ಆದರೆ ಅದಕ್ಕೂ ಮೊದಲು, ಅತಿ ಹೆಚ್ಚು ರನ್ ಮತ್ತು ಅತಿ ಹೆಚ್ಚು ವಿಕೆಟ್ ಪಡೆದವರಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾರ್ಯಾರಿದ್ದಾರೆ ಎಂಬುದನ್ನು ನೋಡೋಣ (PC- PTI).

2 / 6

ವಾಸ್ತವವಾಗಿ ಐಪಿಎಲ್ ಇತಿಹಾಸದಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಒಂದೇ ಆವೃತ್ತಿಯಲ್ಲಿ 700 ರನ್‌ಗಳ ಗಡಿ ದಾಟಿದ್ದು ಇದೇ ಮೊದಲು, ವೈಭವ್ ಸೂರ್ಯವಂಶಿ, ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಈ ಸಾಧನೆ ಮಾಡಿದ್ದಾರೆ. ಈ ಮೂವರು ಬ್ಯಾಟ್ಸ್‌ಮನ್‌ಗಳು ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಇದಲ್ಲದೆ, ಗುಜರಾತ್ ಟೈಟಾನ್ಸ್ ಫೈನಲ್‌ಗೆ ಪ್ರವೇಶಿಸುವುದರಿಂದ ಪರ್ಪಲ್ ಕ್ಯಾಪ್‌ಗಾಗಿ ಹೋರಾಟವು ರೋಮಾಂಚಕವಾಗಿದೆ (PC- PTI).

3 / 6

ಆರೆಂಜ್ ಕ್ಯಾಪ್ ಪ್ರಸ್ತುತ ವೈಭವ್ ಸೂರ್ಯವಂಶಿ ಬಳಿ ಇದೆ. ವೈಭವ್ ಆಡಿರುವ 16 ಪಂದ್ಯಗಳ 16 ಇನ್ನಿಂಗ್ಸ್‌ಗಳಲ್ಲಿ 776 ರನ್‌ ಬಾರಿಸಿದ್ದಾರೆ. 237.30 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ವೈಭವ್ ಸೂರ್ಯವಂಶಿ 72 ಸಿಕ್ಸರ್‌ಗಳು ಮತ್ತು 63 ಬೌಂಡರಿಗಳನ್ನು ಬಾರಿಸಿದ್ದಾರೆ (PC- PTI).

4 / 6

ಆದಾಗ್ಯೂ, ರಾಜಸ್ಥಾನ್ ರಾಯಲ್ಸ್‌ ಫೈನಲ್​ ರೇಸ್​ನಿಂದ ಹೊರಬಿದ್ದಿರುವ ಕಾರಣ ವೈಭವ್ ಆರೆಂಜ್ ಕ್ಯಾಪ್ ಅನ್ನು ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂದು ಹೇಳುವುದು ಕಷ್ಟ. ಏಕೆಂದರೆ ಫೈನಲ್ ತಲುಪಿರುವ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಕೂಡ ಈ ರೇಸ್​ನಲ್ಲಿದ್ದಾರೆ. ಗಿಲ್ ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದು, 722 ರನ್ ಬಾರಿಸಿದ್ದರೆ, ಸಾಯಿ ಸುದರ್ಶನ್ 16 ಪಂದ್ಯಗಳಲ್ಲಿ 710 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ (PC- PTI).

5 / 6

ಮೇಲೆ ಹೇಳಿದಂತೆ ವೈಭವ್ ಸೂರ್ಯವಂಶಿ ಫೈನಲ್ ಆಡದಿರುವ ಕಾರಣ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಇಬ್ಬರೂ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವೈಭವ್ ಸೂರ್ಯವಂಶಿಯಿಂದ ಆರೆಂಜ್ ಕ್ಯಾಪ್ ಕಸಿದುಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ಗಿಲ್‌ ಆರೆಂಜ್ ಕ್ಯಾಪ್ ಪಡೆಯಬೇಕೆಂದರೆ ಇನ್ನು 55 ರನ್‌ಗಳು ಬೇಕಾಗಿವೆ. ಇತ್ತ ಸುದರ್ಶನ್‌ಗೆ 67 ರನ್‌ಗಳು ಬೇಕಾಗಿವೆ (PC- PTI).

6 / 6

ಕಗಿಸೊ ರಬಾಡ ಪ್ರಸ್ತುತ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ಆಡಿರುವ 16 ಪಂದ್ಯಗಳಲ್ಲಿ ಅವರು 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇತ್ತ ಆರ್​ಸಿಬಿಯ ಭುವನೇಶ್ವರ್ ಕುಮಾರ್ 26 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆದಾಗ್ಯೂ, ರಬಾಡ ಭುವಿಗಿಂತ ಒಂದು ಪಂದ್ಯ ಹೆಚ್ಚು ಆಡಿದ್ದಾರೆ. ಇದೀಗ ಮೇ 31 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಇವರಿಬ್ಬರಲ್ಲಿ ಯಾರಿಗೆ ಪರ್ಪಲ್ ಕ್ಯಾಪ್ ದೊರೆಯಲಿ ಎಂಬುದು ಗೊತ್ತಾಗಲಿದೆ (PC- PTI).

Published On - 4:13 pm, Sat, 30 May 26

Loading...
Unable to load recommendations.
Follow Us