
ಬಹುನಿರೀಕ್ಷಿತ ಐಪಿಎಲ್ 2027 ರ ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ ಆಟಗಾರರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು 1220 ಆಟಗಾರರು ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಇವರಲ್ಲಿ 939 ಭಾರತೀಯರು ಹಾಗೂ 281 ವಿದೇಶಿ ಆಟಗಾರರು ಸೇರಿದ್ದಾರೆ. (PC: IPL)
ಈ 939 ಭಾರತೀಯ ಆಟಗಾರರ ಪೈಕಿ ಗರಿಷ್ಠ ಮೂಲ ಬೆಲೆ ಘೋಷಿಸಿಕೊಂಡಿರುವುದು ಇಬ್ಬರು ಮಾತ್ರ. ಅಂದರೆ, ₹2 ಕೋಟಿ ಬೇಸ್ ಪ್ರೈಸ್ ವಿಭಾಗದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಈ ಇಬ್ಬರು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆ ಆಟಗಾರರು ಯಾರೆಂದರೆ... (PC: IPL)
ದೀಪಕ್ ಚಹರ್: ಕಳೆದ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ದೀಪಕ್ ಚಹರ್ ₹9.25 ಕೋಟಿ ಸಂಭಾವನೆ ಪಡೆದಿದ್ದರು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಇವರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ಈ ಬಾರಿಯ ಮಿನಿ ಹರಾಜಿಗೆ ಗರಿಷ್ಠ ₹2 ಕೋಟಿ ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. (PC: IPL)
ಅವೇಶ್ ಖಾನ್: ಕಳೆದ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದ ವೇಗಿ ಅವೇಶ್ ಖಾನ್ ₹9.75 ಕೋಟಿ ಮೊತ್ತ ಪಡೆದಿದ್ದರು. ಇದೀಗ ಲಕ್ನೋ ತಂಡದಿಂದ ಬಿಡುಗಡೆಯಾಗಿರುವ ಇವರು, ಮುಂಬರುವ ಹರಾಜಿಗೆ ಗರಿಷ್ಠ ₹2 ಕೋಟಿ ಮೂಲ ಬೆಲೆ ನಿಗದಿಪಡಿಸಿಕೊಂಡು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. (PC: IPL)
ಅವೇಶ್ ಖಾನ್ ಮತ್ತು ದೀಪಕ್ ಚಹರ್ ಅವರನ್ನು ಹೊರತುಪಡಿಸಿ, ಐಪಿಎಲ್ 2027 ರ ಮಿನಿ ಹರಾಜಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಉಮೇಶ್ ಯಾದವ್, ಜಯದೇವ್ ಉನಾದ್ಕತ್, ತುಷಾರ್ ದೇಶಪಾಂಡೆ, ಆಕಾಶ್ ದೀಪ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ ಮತ್ತು ಉಮ್ರಾನ್ ಮಲಿಕ್ ಸೇರಿದಂತೆ ಹಲವು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. (PC: IPL)