ಈ ದಿನದಂದು ನಡೆಯಲಿದೆ ಐಪಿಎಲ್ 2027 ಮಿನಿ ಹರಾಜು

Updated on: Sep 19, 2026 | 7:13 PM

ಬಿಸಿಸಿಐ ಐಪಿಎಲ್ 2027 ರ ಮಿನಿ ಹರಾಜಿಗೆ ಸಿದ್ಧವಾಗಿದೆ. ಡಿಸೆಂಬರ್ 7-13 ರ ನಡುವೆ ಭಾರತದಲ್ಲಿ ನಡೆಯಲಿರುವ ಈ ಹರಾಜು 3 ವರ್ಷಗಳ ನಂತರ ತಾಯ್ನಾಡಿಗೆ ಮರಳುತ್ತಿದೆ. ಮದುವೆ ಸೀಸನ್‌ನಿಂದ ಹೋಟೆಲ್ ಕೊರತೆ ಒಂದು ಸವಾಲು. ಫ್ರಾಂಚೈಸಿಗಳಿಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಗೊಂದಲ ಸೃಷ್ಟಿಸಿದೆ. ಇದು ಕೊನೆಯ ಮಿನಿ ಹರಾಜು ಆಗಿರುವುದರಿಂದ ಕುತೂಹಲ ಹೆಚ್ಚಿದೆ.

1 / 6
2027 ರ ಐಪಿಎಲ್​ಗೆ ಇನ್ನು ಸಾಕಷ್ಟು ಸಮಯವಿದೆ. ಆದಾಗ್ಯೂ ಮುಂದಿನ ಸೀಸನ್​ಗೆ ಈಗಾಗಲೇ ತಯಾರಿ ಶುರುವಾಗಿದ್ದು, ಬಿಸಿಸಿಐ ಮಿನಿ ಹರಾಜು ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಕ್ರಿಕ್ಇನ್ಫೊ ವರದಿಯ ಪ್ರಕಾರ, ಐಪಿಎಲ್ 2027 ರ ಸೀಸನ್‌ಗೆ ಮೊದಲು ನಡೆಯಲಿರುವ ಮಿನಿ ಹರಾಜು ಡಿಸೆಂಬರ್ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆಯಿದೆ(PC-IPL X).

2027 ರ ಐಪಿಎಲ್​ಗೆ ಇನ್ನು ಸಾಕಷ್ಟು ಸಮಯವಿದೆ. ಆದಾಗ್ಯೂ ಮುಂದಿನ ಸೀಸನ್​ಗೆ ಈಗಾಗಲೇ ತಯಾರಿ ಶುರುವಾಗಿದ್ದು, ಬಿಸಿಸಿಐ ಮಿನಿ ಹರಾಜು ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಕ್ರಿಕ್ಇನ್ಫೊ ವರದಿಯ ಪ್ರಕಾರ, ಐಪಿಎಲ್ 2027 ರ ಸೀಸನ್‌ಗೆ ಮೊದಲು ನಡೆಯಲಿರುವ ಮಿನಿ ಹರಾಜು ಡಿಸೆಂಬರ್ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆಯಿದೆ(PC-IPL X).

2 / 6

ಕಳೆದ 3 ಸೀಸನ್‌ಗಳಲ್ಲಿ ದುಬೈ, ಜೆಡ್ಡಾ ಮತ್ತು ಅಬುಧಾಬಿ ನಗರಗಳಲ್ಲಿ ಅಂದರೆ ವಿದೇಶಿ ನೆಲದಲ್ಲಿ ನಡೆದಿದ್ದ ಈ ಹರಾಜು ಈಗ ತನ್ನ ತಾಯ್ನಾಡಿಗೆ ಮರಳಿದೆ. ಬಿಸಿಸಿಐ ಇದುವರೆಗೂ ಅಧಿಕೃತ ದಿನಾಂಕನ್ನು ಘೋಷಿಸದಿದ್ದರೂ, ಮಿನಿ ಹರಾಜು ಡಿಸೆಂಬರ್ 7 ಮತ್ತು 13 ರ ನಡುವೆ ನಡೆಯುವ ಸಾಧ್ಯತೆಯಿದೆ. ಐಪಿಎಲ್‌ನಲ್ಲಿ ಇದು ಕೊನೆಯ ಮಿನಿ ಹರಾಜಾಗಿರುವುದರಿಂದ ಎಲ್ಲರ ಕುತೂಹಲ ಮೂಡಿಸಿದೆ(PC-IPL X).

3 / 6

ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರ ಪ್ರಕಾರ, ಹೋಟೆಲ್​ಗಳು ಖಾಲಿ ಇರುವ ಆಧಾರದ ಮೇಲೆ ಸ್ಥಳವನ್ನು ನಿಗದಿಪಡಿಸಲಾಗುತ್ತದೆ. ಏಕೆಂದರೆ ಡಿಸೆಂಬರ್‌ನಲ್ಲಿ ದೇಶಾದ್ಯಂತ ಮದುವೆ ಸೀಸನ್ ಶುರುವಾಗಿರುತ್ತದೆ. ಹೀಗಾಗಿ ಪ್ರತಿಷ್ಠಿತ ಹೋಟೆಲ್​ಗಳು ಈಗಾಗಲೇ ಬುಕ್ ಆಗಿರುತ್ತವೆ(PC-IPL X).

4 / 6

ಹೀಗಾಗಿ ಐಪಿಎಲ್​ನ 10 ಫ್ರಾಂಚೈಸಿಗಳಿಗೆ ನೂರಕ್ಕೂ ಹೆಚ್ಚು ಕೊಠಡಿಗಳನ್ನು ಹಂಚಿಕೆ ಮಾಡಬೇಕಾಗಿರುವುದರಿಂದ, ಹೋಟೆಲ್ ಸೌಲಭ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಮಂಡಳಿಯು ಹರಾಜು ನಡೆಯುವ ಸ್ಥಳವನ್ನು ಅಂತಿಮಗೊಳಿಸುತ್ತದೆ. ಆ ನಂತರ ಸಂಪೂರ್ಣ ವೇಳಾಪಟ್ಟಿಯನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದಿದ್ದಾರೆ(PC-IPL X).

5 / 6

ಈ ಬಾರಿ ಮಿನಿ ಹರಾಜಾಗಿರುವುದರಿಂದ, ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿಲ್ಲ. ತಂಡಗಳ ಪರ್ಸ್ ಮೌಲ್ಯ, ಉಳಿಸಿಕೊಳ್ಳುವ ಪ್ರಕ್ರಿಯೆ ಮತ್ತು ವ್ಯಾಪಾರ ವಿಂಡೋ ಮುಗಿದ ನಂತರವೇ ಯಾವ್ಯಾವ ತಂಡಗಳಲ್ಲಿ ಎಷ್ಟು ಸ್ಲಾಟ್​ಗಳು ಖಾಲಿ ಉಳಿದಿವೆ ಎಂಬುದು ಖಚಿತವಾಗಲಿದೆ(PC-IPL X).

6 / 6

ಹಾಗೆಯೇ ಆಟಗಾರರ ಖರೀದಿಗೆ ಅಂತಿಮ ಬಜೆಟ್ ತಂಡಗಳು ಬಿಡುಗಡೆ ಮಾಡುವ ಮತ್ತು ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಇದರ ಜೊತೆಗ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದುವರಿಕೆಯ ಕುರಿತು ಆಡಳಿತ ಮಂಡಳಿ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲದಿರುವುದು ಫ್ರಾಂಚೈಸಿಗಳನ್ನು ಗೊಂದಲಕ್ಕೀಡುಮಾಡಿದೆ(PC-IPL X).

Loading...
Unable to load recommendations.
Follow Us