ಡೆಲ್ಲಿ ಆಟಗಾರನ ಮೇಲೆ ಲಕ್ನೋ, ಗುಜರಾತ್ ಕಣ್ಣು; IPLನಲ್ಲಿ ಬಿಗ್ ಡೀಲ್ ಸಾಧ್ಯತೆ

Updated on: Nov 08, 2026 | 10:51 PM

ಐಪಿಎಲ್ 2027 ಹರಾಜಿಗೂ ಮುನ್ನ ಆಟಗಾರರ ಟ್ರೇಡ್ ಚಟುವಟಿಕೆಗಳು ಬಿರುಸಾಗಿವೆ. ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಫೋಟಕ ಬ್ಯಾಟರ್ ಆಶುತೋಷ್ ಶರ್ಮಾ ಅವರನ್ನು ಖರೀದಿಸಲು ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಆಸಕ್ತಿ ತೋರಿವೆ. ಫಿನಿಶರ್‌ಗಾಗಿ ಹುಡುಕಾಟದಲ್ಲಿರುವ GT, ಆಶುತೋಷ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಡಳಿತ ಮಂಡಳಿಯಲ್ಲಿನ ಬದಲಾವಣೆಗಳು ಈ ಟ್ರೇಡ್‌ಗೆ ಕಾರಣವಾಗಬಹುದು. ನವೆಂಬರ್ 17ರ ಗಡುವು ಸಮೀಪಿಸುತ್ತಿದ್ದಂತೆ ಚಟುವಟಿಕೆ ಹೆಚ್ಚಿದೆ.

1 / 5
IPL 2027ರ ಹರಾಜಿಗೂ ಮುನ್ನ ಆಟಗಾರರ ಟ್ರೇಡ್ ವಿಚಾರವಾಗಿ ಫ್ರಾಂಚೈಸಿಗಳ ನಡುವೆ ಚಟುವಟಿಕೆ ಜೋರಾಗಿದೆ. ತಮ್ಮ ತಂಡಗಳ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಬದಲಿಸಿಕೊಳ್ಳಲು ವಿವಿಧ ಫ್ರಾಂಚೈಸಿಗಳು ಸಿದ್ಧತೆ ನಡೆಸುತ್ತಿವೆ. ಇದರ ನಡುವೆ ಮತ್ತೊಂದು ದೊಡ್ಡ ಟ್ರೇಡ್ ಬಗ್ಗೆ ಚರ್ಚೆ ಶುರುವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಫೋಟಕ ಬ್ಯಾಟರ್ ಆಶುತೋಷ್ ಶರ್ಮಾ ಅವರನ್ನು ಖರೀದಿಸಲು ಗುಜರಾತ್ ಟೈಟಾನ್ಸ್ ಆಸಕ್ತಿ ತೋರಿದೆ ಎನ್ನಲಾಗಿದೆ(PC-PTI).

IPL 2027ರ ಹರಾಜಿಗೂ ಮುನ್ನ ಆಟಗಾರರ ಟ್ರೇಡ್ ವಿಚಾರವಾಗಿ ಫ್ರಾಂಚೈಸಿಗಳ ನಡುವೆ ಚಟುವಟಿಕೆ ಜೋರಾಗಿದೆ. ತಮ್ಮ ತಂಡಗಳ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಬದಲಿಸಿಕೊಳ್ಳಲು ವಿವಿಧ ಫ್ರಾಂಚೈಸಿಗಳು ಸಿದ್ಧತೆ ನಡೆಸುತ್ತಿವೆ. ಇದರ ನಡುವೆ ಮತ್ತೊಂದು ದೊಡ್ಡ ಟ್ರೇಡ್ ಬಗ್ಗೆ ಚರ್ಚೆ ಶುರುವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಫೋಟಕ ಬ್ಯಾಟರ್ ಆಶುತೋಷ್ ಶರ್ಮಾ ಅವರನ್ನು ಖರೀದಿಸಲು ಗುಜರಾತ್ ಟೈಟಾನ್ಸ್ ಆಸಕ್ತಿ ತೋರಿದೆ ಎನ್ನಲಾಗಿದೆ(PC-PTI).

2 / 5

ಈ ಸಂಬಂಧ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ಈ ಟ್ರೇಡ್‌ನಲ್ಲಿ ವೇಗದ ಬೌಲರ್ ಒಬ್ಬರನ್ನು ಸೇರಿಸಿಕೊಳ್ಳುವ ಸಾಧ್ಯತೆಯೂ ಇದೆ. ಆದರೆ ಆಶುತೋಷ್ ಶರ್ಮಾ ಅವರ ಬದಲಿಗೆ ಡೆಲ್ಲಿ ತಂಡಕ್ಕೆ ಯಾವ ಆಟಗಾರ ಬರಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ(PC-PTI).

3 / 5

IPLನಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ಬಿಡುಗಡೆ ಮಾಡಲು ನವೆಂಬರ್ 17 ಕೊನೆಯ ದಿನವಾಗಿರುವುದರಿಂದ ಟ್ರೇಡ್ ಚಟುವಟಿಕೆಗಳು ಮತ್ತಷ್ಟು ವೇಗ ಪಡೆದುಕೊಂಡಿವೆ. ಆಶುತೋಷ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಗುಜರಾತ್ ಟೈಟಾನ್ಸ್ ಮಾತ್ರವಲ್ಲದೆ ಲಕ್ನೋ ಸೂಪರ್ ಜೈಂಟ್ಸ್ ಕೂಡ ಆಸಕ್ತಿ ತೋರಿದೆ ಎನ್ನಲಾಗಿದೆ. ಈ ಎರಡೂ ತಂಡಗಳು ತಮ್ಮ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳಲು ಬಯಸುತ್ತಿವೆ. ಅದರಲ್ಲೂ ಒತ್ತಡದ ಸಂದರ್ಭದಲ್ಲೂ ತಂಡವನ್ನು ಗೆಲುವಿನ ದಡ ಸೇರಿಸಬಲ್ಲ ಫಿನಿಶರ್‌ಗಾಗಿ ಹುಡುಕಾಟ ನಡೆಸುತ್ತಿವೆ(PC-PTI).

4 / 5

ಕ್ರಿಕ್‌ಬಜ್ ವರದಿಯ ಪ್ರಕಾರ, ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ಕೆಲವು ತಿಂಗಳ ಹಿಂದೆಯೇ ಆಶುತೋಷ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಡೆಲ್ಲಿ ಕ್ಯಾಪಿಟಲ್ಸ್ ಸಂಪರ್ಕಿಸಿತ್ತು. ಆದರೆ ಆಗ ಡೆಲ್ಲಿ ಫ್ರಾಂಚೈಸಿಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ತಂಡದ ಆಡಳಿತ ಮಂಡಳಿ ಹಾಗೂ ಕೋಚಿಂಗ್ ವಿಭಾಗದಲ್ಲಿ ಹೊಸ ಬದಲಾವಣೆಗಳಾಗಿರುವುದರಿಂದ ಈ ಪ್ರಸ್ತಾಪವನ್ನು ಮತ್ತೊಮ್ಮೆ ಪರಿಶೀಲಿಸುವ ಸಾಧ್ಯತೆಯಿದೆ(PC-PTI).

5 / 5

ಆಶುತೋಷ್ ಶರ್ಮಾ ಅವರ ಪ್ರಮುಖ ಸಾಮರ್ಥ್ಯವೆಂದರೆ ಒತ್ತಡದ ಸಂದರ್ಭಗಳಲ್ಲಿ ಪಂದ್ಯವನ್ನು ಮುಗಿಸುವ ಕಲೆ. ಡೆಲ್ಲಿ ಕ್ಯಾಪಿಟಲ್ಸ್ ಪರವೂ ಅವರು ಇದೇ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಗುಜರಾತ್ ಟೈಟಾನ್ಸ್ ತಂಡವು ಶಾರುಖ್ ಖಾನ್ ಅವರನ್ನು ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿರುವುದರಿಂದ ಆಶುತೋಷ್ ಮೇಲೆ ಕಣ್ಣಿಟ್ಟಿರಬಹುದು ಎನ್ನಲಾಗಿದೆ(PC-PTI).

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us