- Kannada News Photo gallery Cricket photos IPL Auction 2025 Top 7 Players RCB could target in the IPL 2025 Mega Auction
IPL Auction 2025: ಆರ್ಸಿಬಿ ಟಾರ್ಗೆಟ್ ಲಿಸ್ಟ್ನಲ್ಲಿ 7 ಆಟಗಾರರು
RCB IPL Auction 2025: ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್ಸಿಬಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ತಂಡದಲ್ಲಿ ಕೇವಲ 3 ಆಟಗಾರರಿದ್ದು, ಉಳಿದ ಸ್ಲಾಟ್ಗಳಿಗೆ ಯಾರ್ಯಾರು ಭರ್ತಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಆರ್ಸಿಬಿ ಈ 7 ಆಟಗಾರರನ್ನು ಖರೀದಿಸಲು ಮುಂದಾಗುವ ಸಾಧ್ಯತೆಗಳಿವೆ.
Updated on: Nov 23, 2024 | 7:48 PM

ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಎಲ್ಲಾ 10 ಫ್ರಾಂಚೈಸಿಗಳು ಸಕಲ ತಂತ್ರಗಳೊಂದಿಗೆ ಯಾರ್ಯಾರನ್ನು ತಮ್ಮ ಖಾತೆಗೆ ಹಾಕಿಕೊಳ್ಳಬೇಕು ಎಂಬ ಲೆಕ್ಕಾಚಾರವನ್ನು ಅಂತಿಮಗೊಳಿಸಿಕೊಂಡಿವೆ. ಆ 10 ಫ್ರಾಂಚೈಸಿಗಳ ಪೈಕಿ ಆರ್ಸಿಬಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ತಂಡದಲ್ಲಿ ಕೇವಲ 3 ಆಟಗಾರರಿದ್ದು, ಉಳಿದ ಸ್ಲಾಟ್ಗಳಿಗೆ ಯಾರ್ಯಾರು ಭರ್ತಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಆರ್ಸಿಬಿ ಈ 7 ಆಟಗಾರರನ್ನು ಖರೀದಿಸಲು ಮುಂದಾಗುವ ಸಾಧ್ಯತೆಗಳಿವೆ.

ಆರ್ಸಿಬಿಯ ಮೊದಲ ಆಯ್ಕೆಯಾಗಿ ಕೆಎಲ್ ರಾಹುಲ್ ಹೆಸರಿರುವುದು ಖಚಿತ ಎಂದು ಹೇಳಲಾಗುತ್ತಿದೆ. ಹೇಳಿ ಕೇಳಿ ಕನ್ನಡದ ಹುಡುಗನಾಗಿರುವ ರಾಹುಲ್ ಖರೀದಿಗೆ ಆರ್ಸಿಬಿ ಮುಂದಾಗಬಹುದು. ಅಲ್ಲದೆ ಈ ಹಿಂದೆ ಆರ್ಸಿಬಿ ಪರ ಆಡಿರುವ ರಾಹುಲ್, ಮತ್ತೆ ತಂಡ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿರುವುದು ಕೂಡ ಇದಕ್ಕೆ ಪೂರಕವಾಗಿದೆ.

ರಾಹುಲ್ಗಿಂತ ಮುಂಚಿತವಾಗಿ ರಿಷಬ್ ಪಂತ್ ಹರಾಜಿಗೆ ಬರುವ ಕಾರಣ ಆರ್ಸಿಬಿ, ಪಂತ್ ಮೇಲು ಕಣ್ಣಿಟ್ಟಿದೆ. ಪಂತ್ ಆಗಮನದಿಂದ ತಂಡಕ್ಕೆ ಮೂರು ಉಪಯೋಗಗಳಾಗಲಿದ್ದು, ವಿಕೆಟ್ ಕೀಪರ್ ಜೊತೆಗೆ ನಾಯಕನ ಆಯ್ಕೆಯೂ ಸಿಗಲಿದೆ. ಹೀಗಾಗಿ ಪಂತ್ ಕೂಡ ಆರ್ಸಿಬಿ ಟಾರ್ಗೆಟ್ ಲಿಸ್ಟ್ನಲ್ಲಿದ್ದಾರೆ.

ಆರ್ಸಿಬಿಯ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಮತ್ತೆ ಆರ್ಸಿಬಿಗೆ ಸೇರುವ ಸಾಧ್ಯತೆಗಳಿವೆ. ನಾಯನಾಗಿ ಫಾಫ್ ಫೇಲ್ ಆಗಿದ್ದರೂ ಆಟಗಾರನಾಗಿ ಅವರ ಪ್ರದರ್ಶನ ಅಮೋಘವಾಗಿದೆ. ಹೀಗಾಗಿ ಆರ್ಸಿಬಿ ಬಳಿ ಮೂರು ಆರ್ಟಿಎಮ್ ಕಾರ್ಡ್ ಇರುವ ಕಾರಣ, ಫಾಫ್ ಮೇಲೆ ಆರ್ಸಿಬಿ ಅದನ್ನು ಬಳಸುವ ಸಾಧ್ಯತೆಗಳಿವೆ.

ಡು ಪ್ಲೆಸಿಸ್‌ನಂತೆ, ಜ್ಯಾಕ್ಸ್ ಕೂಡ ಈ ಮೊದಲ ಆರ್ಸಿಬಿ ಪರ ಆಡಿದ್ದಾರೆ. ಅಲ್ಲದೆ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದರು. ಇದರ ಜೊತೆಗೆ ಆಫ್-ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಜ್ಯಾಕ್ಸ್, ಆರ್ಸಿಬಿಯಲ್ಲಿ ಮ್ಯಾಕ್ಸ್‌ವೆಲ್ ಸ್ಥಾನವನ್ನು ತುಂಬಬಹುದು.

ಪಂಜಾಬ್ ಪರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತ ಟಿ20 ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿರುವ ಅರ್ಷದೀಪ್, ಆರ್ಸಿಬಿಗೆ ಬಂದರೆ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಉತ್ತಮವಾಗಲಿದೆ.

ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಆಸೀಸ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮೇಲು ಆರ್ಸಿಬಿ ಕಣ್ಣಿಟ್ಟಿದೆ. ಸ್ಟೊಯಿನಿಸ್ ಆಗಮನದಿಂದ ತಂಡದ ಕೆಳ ಕ್ರಮಾಂಕ ಬಲಿಷ್ಠವಾಗುವುದಲ್ಲದೆ ಬೌಲಿಂಗ್ ಆಯ್ಕೆಯೂ ಸಿಗಲಿದೆ. ಅಲ್ಲದೆ ಈ ಹಿಂದೆ ಆರ್ಸಿಬಿ ಪರ ಆಡಿರುವ ಸ್ಟೊಯಿನಿಸ್ ಖರೀದಿಗೆ ಆರ್ಸಿಬಿ ಮುಂದಾಗಬಹುದು.

ಕಳೆದ ಕೆಲವು ಆವೃತ್ತಿಗಳಲ್ಲಿ ಆರ್ಸಿಬಿಗೆ ಪ್ರಮುಖವಾಗಿ ಕಾಡಿದ್ದು, ಒಬ್ಬ ಉತ್ತಮ ಸ್ಪಿನ್ನರ್ನ ಕೊರತೆ. 2022 ರ ಮೆಗಾ ಹರಾಜಿನಲ್ಲಿ ಆರ್ಸಿಬಿಯಿಂದ ರಾಜಸ್ಥಾನ ತಂಡಕ್ಕೆ ಯುಜ್ವೇಂದ್ರ ಚಹಾಲ್ ಹೋದ ಬಳಿಕ ಆ ಸ್ಥಾನವನ್ನು ತುಂಬಲು ಇದುವರೆಗು ಯಾರಿಗೂ ಸಾಧ್ಯವಾಗಿಲ್ಲ. ಹೀಗಾಗಿ ಚಹಾಲ್ ಮತ್ತೊಮ್ಮೆ ಆರ್ಸಿಬಿ ಪಾಳಯವನ್ನು ಸೇರಬಹುದು ಎನ್ನಲಾಗುತ್ತಿದೆ.
