IPL Auction 2025: ಆರ್​ಸಿಬಿ ಟಾರ್ಗೆಟ್ ಲಿಸ್ಟ್​ನಲ್ಲಿ 7 ಆಟಗಾರರು

RCB IPL Auction 2025: ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್​ಸಿಬಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ತಂಡದಲ್ಲಿ ಕೇವಲ 3 ಆಟಗಾರರಿದ್ದು, ಉಳಿದ ಸ್ಲಾಟ್​ಗಳಿಗೆ ಯಾರ್ಯಾರು ಭರ್ತಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಆರ್​ಸಿಬಿ ಈ 7 ಆಟಗಾರರನ್ನು ಖರೀದಿಸಲು ಮುಂದಾಗುವ ಸಾಧ್ಯತೆಗಳಿವೆ.

ಪೃಥ್ವಿಶಂಕರ
|

Updated on: Nov 23, 2024 | 7:48 PM

ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಎಲ್ಲಾ 10 ಫ್ರಾಂಚೈಸಿಗಳು ಸಕಲ ತಂತ್ರಗಳೊಂದಿಗೆ ಯಾರ್ಯಾರನ್ನು ತಮ್ಮ ಖಾತೆಗೆ ಹಾಕಿಕೊಳ್ಳಬೇಕು ಎಂಬ ಲೆಕ್ಕಾಚಾರವನ್ನು ಅಂತಿಮಗೊಳಿಸಿಕೊಂಡಿವೆ. ಆ 10 ಫ್ರಾಂಚೈಸಿಗಳ ಪೈಕಿ ಆರ್​ಸಿಬಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ತಂಡದಲ್ಲಿ ಕೇವಲ 3 ಆಟಗಾರರಿದ್ದು, ಉಳಿದ ಸ್ಲಾಟ್​ಗಳಿಗೆ ಯಾರ್ಯಾರು ಭರ್ತಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಆರ್​ಸಿಬಿ ಈ 7 ಆಟಗಾರರನ್ನು ಖರೀದಿಸಲು ಮುಂದಾಗುವ ಸಾಧ್ಯತೆಗಳಿವೆ.

1 / 8
ಆರ್​ಸಿಬಿಯ ಮೊದಲ ಆಯ್ಕೆಯಾಗಿ ಕೆಎಲ್ ರಾಹುಲ್ ಹೆಸರಿರುವುದು ಖಚಿತ ಎಂದು ಹೇಳಲಾಗುತ್ತಿದೆ. ಹೇಳಿ ಕೇಳಿ ಕನ್ನಡದ ಹುಡುಗನಾಗಿರುವ ರಾಹುಲ್ ಖರೀದಿಗೆ ಆರ್​ಸಿಬಿ ಮುಂದಾಗಬಹುದು. ಅಲ್ಲದೆ ಈ ಹಿಂದೆ ಆರ್​​ಸಿಬಿ ಪರ ಆಡಿರುವ ರಾಹುಲ್, ಮತ್ತೆ ತಂಡ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿರುವುದು ಕೂಡ ಇದಕ್ಕೆ ಪೂರಕವಾಗಿದೆ.

2 / 8
ರಾಹುಲ್​ಗಿಂತ ಮುಂಚಿತವಾಗಿ ರಿಷಬ್ ಪಂತ್ ಹರಾಜಿಗೆ ಬರುವ ಕಾರಣ ಆರ್​ಸಿಬಿ, ಪಂತ್​ ಮೇಲು ಕಣ್ಣಿಟ್ಟಿದೆ. ಪಂತ್ ಆಗಮನದಿಂದ ತಂಡಕ್ಕೆ ಮೂರು ಉಪಯೋಗಗಳಾಗಲಿದ್ದು, ವಿಕೆಟ್ ಕೀಪರ್ ಜೊತೆಗೆ ನಾಯಕನ ಆಯ್ಕೆಯೂ ಸಿಗಲಿದೆ. ಹೀಗಾಗಿ ಪಂತ್​ ಕೂಡ ಆರ್​ಸಿಬಿ ಟಾರ್ಗೆಟ್ ಲಿಸ್ಟ್​ನಲ್ಲಿದ್ದಾರೆ.

3 / 8
ಆರ್​ಸಿಬಿಯ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್‌ ಕೂಡ ಮತ್ತೆ ಆರ್​ಸಿಬಿಗೆ ಸೇರುವ ಸಾಧ್ಯತೆಗಳಿವೆ. ನಾಯನಾಗಿ ಫಾಫ್ ಫೇಲ್ ಆಗಿದ್ದರೂ ಆಟಗಾರನಾಗಿ ಅವರ ಪ್ರದರ್ಶನ ಅಮೋಘವಾಗಿದೆ. ಹೀಗಾಗಿ ಆರ್​ಸಿಬಿ ಬಳಿ ಮೂರು ಆರ್​ಟಿಎಮ್ ಕಾರ್ಡ್​ ಇರುವ ಕಾರಣ, ಫಾಫ್ ಮೇಲೆ ಆರ್​ಸಿಬಿ ಅದನ್ನು ಬಳಸುವ ಸಾಧ್ಯತೆಗಳಿವೆ.

4 / 8
ಡು ಪ್ಲೆಸಿಸ್‌ನಂತೆ, ಜ್ಯಾಕ್ಸ್ ಕೂಡ ಈ ಮೊದಲ  ಆರ್​ಸಿಬಿ ಪರ ಆಡಿದ್ದಾರೆ. ಅಲ್ಲದೆ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದರು. ಇದರ ಜೊತೆಗೆ ಆಫ್-ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಜ್ಯಾಕ್ಸ್, ಆರ್​ಸಿಬಿಯಲ್ಲಿ ಮ್ಯಾಕ್ಸ್‌ವೆಲ್ ಸ್ಥಾನವನ್ನು ತುಂಬಬಹುದು.

5 / 8
ಪಂಜಾಬ್ ಪರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತ ಟಿ20 ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿರುವ ಅರ್ಷದೀಪ್, ಆರ್​ಸಿಬಿಗೆ ಬಂದರೆ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಉತ್ತಮವಾಗಲಿದೆ.

6 / 8
ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಆಸೀಸ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮೇಲು ಆರ್​ಸಿಬಿ ಕಣ್ಣಿಟ್ಟಿದೆ. ಸ್ಟೊಯಿನಿಸ್ ಆಗಮನದಿಂದ ತಂಡದ ಕೆಳ ಕ್ರಮಾಂಕ ಬಲಿಷ್ಠವಾಗುವುದಲ್ಲದೆ ಬೌಲಿಂಗ್ ಆಯ್ಕೆಯೂ ಸಿಗಲಿದೆ. ಅಲ್ಲದೆ ಈ ಹಿಂದೆ ಆರ್​ಸಿಬಿ ಪರ ಆಡಿರುವ ಸ್ಟೊಯಿನಿಸ್ ಖರೀದಿಗೆ ಆರ್​ಸಿಬಿ ಮುಂದಾಗಬಹುದು.

7 / 8
ಕಳೆದ ಕೆಲವು ಆವೃತ್ತಿಗಳಲ್ಲಿ ಆರ್​ಸಿಬಿಗೆ ಪ್ರಮುಖವಾಗಿ ಕಾಡಿದ್ದು, ಒಬ್ಬ ಉತ್ತಮ ಸ್ಪಿನ್ನರ್​ನ ಕೊರತೆ. 2022 ರ ಮೆಗಾ ಹರಾಜಿನಲ್ಲಿ ಆರ್​ಸಿಬಿಯಿಂದ ರಾಜಸ್ಥಾನ ತಂಡಕ್ಕೆ ಯುಜ್ವೇಂದ್ರ ಚಹಾಲ್ ಹೋದ ಬಳಿಕ ಆ ಸ್ಥಾನವನ್ನು ತುಂಬಲು ಇದುವರೆಗು ಯಾರಿಗೂ ಸಾಧ್ಯವಾಗಿಲ್ಲ. ಹೀಗಾಗಿ ಚಹಾಲ್ ಮತ್ತೊಮ್ಮೆ ಆರ್​ಸಿಬಿ ಪಾಳಯವನ್ನು ಸೇರಬಹುದು ಎನ್ನಲಾಗುತ್ತಿದೆ.

8 / 8
Follow us
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಇಡೇರಲಿವೆ

ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..

ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?

ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು

ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ

ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ

ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ

ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು

ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ